ಮಾರ್ಚ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಎಷ್ಟು? ಇಲ್ಲಿದೆ ವಿವರ
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಹಿಂದಿನ ತಿಂಗಳಿಗೆ ಹೋಲಿಸಿದರೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ 12.17% ರಷ್ಟು ಹೆಚ್ಚಾಗಿದೆ.

ಬೆಳಗಾವಿ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಹಿಂದಿನ ತಿಂಗಳಿಗೆ ಹೋಲಿಸಿದರೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ 12.17% ರಷ್ಟು ಹೆಚ್ಚಾಗಿದೆ. ಬೆಳಗಾವಿ ವಿಮಾನ ನಿಲ್ದಾಣವು ಒಟ್ಟು 18,343 ಪ್ರಯಾಣಿಕರ ಸಂಖ್ಯೆಯನ್ನು ಹೊಂದಿದ್ದು, ನವೆಂಬರ್‌ನಲ್ಲಿ 16,352 ಕ್ಕೆ ಹೋಲಿಸಿದರೆ 1991 ಹೆಚ್ಚಾಗಿದೆ. ಇನ್ನು 2022 ಡಿಸೆಂಬರ್‌ನಲ್ಲಿ 457 ವಿಮಾನಗಳು ಸಂಚಾರ ನಡೆಸಿದ್ದು, 1-ಮೆಟ್ರಿಕ್ ಟನ್ ಅಷ್ಟು ಸರಕು ಸಾಗಣೆಯಾಗಿದೆ ಎಂದು ವರದಿಯಾಗಿದೆ.
ಇನ್ನು ಜನವರಿ ತಿಂಗಳಿನಲ್ಲಿ 16,637, ಪೆಬ್ರವರಿಯಲ್ಲಿ 16,352 ಹಾಗೂ ಮಾರ್ಚ್ ತಿಂಗಳಿನಲ್ಲಿ 18,343 ಪ್ರಯಾಣಿಕರು ಸಂಚಾರ ಕೈಗೊಂಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಇದರೊಂದಿಗೆ ಬೆಳಗಾವಿ ನಿಲ್ದಾಣ ರಾಜ್ಯದ ಮೂರನೇ ಅತಿ ಹೆಚ್ಚು ದಟ್ಟಣೆಯ ನಿಲ್ದಾಣವಾಗಿ ಹೊರಹೊಮ್ಮಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತವಾಗಿತ್ತು. ಆಗಸ್ಟ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ಒಟ್ಟು 23,145 ಹಾಗೂ ಸೆಪ್ಟೆಂಬರ್‌ನಲ್ಲಿ 22,566 ಪ್ರಯಾಣಿಕರು ಸಂಚಾರ ಕೈಗೊಂಡಿದ್ದರು. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಆಗಸ್ಟ್‌ನಲ್ಲಿ 23,670 ಹಾಗೂ ಸೆಪ್ಟೆಂಬರ್‌ನಲ್ಲಿ 22,913 ಜನ ಪ್ರಯಾಣಿಸಿದ್ದರು.
ಇದನ್ನೂ ಓದಿ:Hubli: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿನ ರಾಹುಲ್ ಗಾಂಧಿಯನ್ನ ಸ್ವಾಗತಿಸಿದ ಜಗದೀಶ್ ಶೆಟ್ಟರ್
ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದ ಅತೀ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿದ ವಿಮಾನ ನಿಲ್ದಾಣವಾಗಿತ್ತು. ಆದರೆ, ಅಕ್ಟೋಬರ್ ತಿಂಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ 24,359 ಆಗಿದ್ದರೆ ಬೆಳಗಾವಿ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಸುಮಾರು 29 ಸಾವಿರ ಆಗಿತ್ತು. ಪ್ರಯಾಣಿಕರ ಸಂಖ್ಯೆಯಲ್ಲದೇ ವಿಮಾನ ಸಂಚಾರವೂ ಅಕ್ಟೋಬರ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹುಬ್ಬಳ್ಳಿಗಿಂತ ಹೆಚ್ಚಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಒಟ್ಟು 468 ವಿಮಾನಗಳು ಸಂಚಾರ ನಡೆಸಿದ್ದರೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 522 ವಿಮಾನಗಳು ಸಂಚರಿಸಿದ್ದವು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ