AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರುದ್ರೇಶ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆತ್ಮಹತ್ಯೆಯಲ್ಲ ಕೊಲೆ ಎಂದು ಬಂತು ಅನಾಮಧೇಯ ಪತ್ರ!

ಬೆಳಗಾವಿಯ ಎಸ್‌ಡಿಎ ರುದ್ರೇಶ್ (ರುದ್ರಣ್ಣ ಯಡವಣ್ಣವರ) ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದೆ. ಆತ್ಮಹತ್ಯೆಯಲ್ಲ ಕೊಲೆ ಎಂದು ಪ್ರತಿಪಾದಿಸಿ ಅನಾಮಧೇಯ ಪತ್ರವೊಂದು ರಾಜ್ಯಪಾಲರು ಸೇರಿದಂತೆ ಪ್ರಮುಖರಿಗೆ ಬಂದಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅನಾಮಧೇಯ ಪತ್ರದಲ್ಲೇನಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ರುದ್ರೇಶ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆತ್ಮಹತ್ಯೆಯಲ್ಲ ಕೊಲೆ ಎಂದು ಬಂತು ಅನಾಮಧೇಯ ಪತ್ರ!
ರುದ್ರೇಶ್ ಹಾಗೂ ಅನಾಮಧೇಯ ಪತ್ರದ ಪ್ರತಿ
Follow us
Sahadev Mane
| Updated By: Ganapathi Sharma

Updated on:Nov 18, 2024 | 9:23 AM

ಬೆಳಗಾವಿ, ನವೆಂಬರ್ 18: ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ (ರುದ್ರಣ್ಣ ಯಡವಣ್ಣವರ) ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ದೊರೆಯುವ ಸುಳಿವು ದೊರೆತಿದೆ. ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ’ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬಂದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪೊಲೀಸರ ನಿದ್ದೆಗೆಡಸಿದ ಅನಾಮಧೇಯ ಪತ್ರ

ಪ್ರಕರಣದ ಎ1 ತಹಶಿಲ್ದಾರ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಹೆಬ್ಬಾಳ್ಕರ್ ಪಿಎ ಸೋಮುಗೆ ಜಾಮೀನು ಸಿಕ್ಕ ಕೆಲವೇ ದಿನಗಳಲ್ಲಿ ಈ ಪತ್ರ ಬಂದಿರುವುದು ಗೊತ್ತಾಗಿದೆ. ಅಂಚೆ ಮೂಲಕ ಅನಾಮಧೇಯ ವ್ಯಕ್ತಿಯ ಪತ್ರ ಬಂದಿದೆ.

ಅನಾಮಧೇಯ ಪತ್ರದಲ್ಲೇನಿದೆ?

ಅನಾಮಧೇಯ ಪತ್ರದಲ್ಲಿ, ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ. ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಕೊಲೆಗೆ ಸೂತ್ರದಾರ. ತಹಶಿಲ್ದಾರರ ಜೀಪ್ ಚೆಕ್ ಮಾಡಿದರೆ ಎಲ್ಲಾ ಸಿಗುತ್ತವೆ. ಅದು ಸೂಸೈಡ್ ಅಂತಿದ್ದಾರೆ. ಆದರೆ, ಆದ್ರೇ ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರಗೆ ಬರುತ್ತದೆ. ಯಲ್ಲಪ್ಪನ ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲ ದುಡ್ಡು ಹೊಡೆದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು ಕೇಸ್ ಮುಚ್ಚಿ ಹಾಕಬಾರದು’ ಎಂದು ಉಲ್ಲೇಖಿಸಲಾಗಿದೆ. ಅನಾಮಧೇಯ ಪತ್ರದಲ್ಲಿನ ಅಂಶಗಳು ಕಂಡು ಇದೀಗ ಪೊಲೀಸರು ದಂಗಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನವೆಂಬರ್ 14ರಂದು ಷರತ್ತುಬದ್ಧ ನಿರೀಕ್ಷಣಾ ಜಾಮೀನು ದೊರೆತಿತ್ತು.

ರುದ್ರೇಶ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ (ರುದ್ರಣ್ಣ) ಯಡಣ್ಣನವರ್ ಎಂಬವರು ನವೆಂಬರ್ 5ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು, ತನ್ನ ಸಾವಿಗೆ ಇವರೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ತಹಶಿಲ್ದಾರ್​ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಹೆಸರು ಉಲ್ಲೇಖಿಸಿ ವಾಟ್ಸ್​ಆ್ಯಪ್ ಗ್ರೂಪೊಂದರಲ್ಲಿ ಸಂದೇಶ ಕಳುಹಿಸಿದ್ದರು.

ಇದನ್ನೂ ಓದಿ: ಬೆಳಗಾವಿ ಎಸ್‌ಡಿಎ ಆತ್ಮಹತ್ಯೆ ಕೇಸ್‌: ಸಚಿವೆ ಹೆಬ್ಬಾಳ್ಕರ್ ಪಿಎ ಸೇರಿ ಮೂವರಿಗೆ ಜಾಮೀನು

ವರ್ಗಾವಣೆ ಆದೇಶ ನೋಡಿದ ನಂತರ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿದ್ದ ಅವರು ಮರುದಿನ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಕೇಳಿಬಂದ ಕಾರಣ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:19 am, Mon, 18 November 24

ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದಾರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ