AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಬ್ಯುಲೆನ್ಸ್ ಬರುವಷ್ಟರಲ್ಲೇ ಮಗು ಸಾವು, 4 ದಿನ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದ ವೈದ್ಯನ ವಿರುದ್ಧ ಆಕ್ರೋಶ

ಇತ್ತಿಚೇಗಷ್ಟೆ ರಾಯಚೂರು ನಗರದ ವಿಜಯ್ ಪಾಲಿ ಕ್ಲೀನಿಕ್ ಹೆಸರಿನ ಹೃದಯ ಸಂಬಂಧಿ ಖಾಯಿಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಶುರು ಮಾಡಿ ಕೆಲಹೊತ್ತಲ್ಲೇ ರೋಗಿ ಹೃದಯಾಘಾತಕ್ಕೆ ಬಲಿಯಾಗಿದ್ದರು. ಈ ಹಿನ್ನಲೆ ಮೃತನ ಕಡೆಯವರು ಆಸ್ಪತ್ರೆಗೆ ನುಗ್ಗಿ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್‌ನ ಬ್ಯಾಳಿ ಕಾಟಾ ಬಳಿಯಿರುವ ಕಡಾಡಿ ಆಸ್ಪತ್ರೆಯಲ್ಲಿ ಮಗು ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಪರಿಕರ ಒಡೆದು ಹಾಕಿದ್ದಾರೆ.

ಆಂಬ್ಯುಲೆನ್ಸ್ ಬರುವಷ್ಟರಲ್ಲೇ ಮಗು ಸಾವು, 4 ದಿನ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದ ವೈದ್ಯನ ವಿರುದ್ಧ ಆಕ್ರೋಶ
ಆಸ್ಪತ್ರೆಯ ಪರಿಕರಗಳನ್ನು ಒಡೆದು ಹಾಕಿ ಸಂಬಂಧಿಕರಿಂದ ಆಕ್ರೋಶ
ಸಹದೇವ್​ ಮಾನೆ
| Edited By: ಕಿರಣ್ ಹನುಮಂತ್​ ಮಾದಾರ್|

Updated on:Jul 03, 2024 | 3:30 PM

Share

ಬೆಳಗಾವಿ, ಜು.03: ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ, ಸಂಬಂಧಿಕರು ಸೇರಿಕೊಂಡು ಆಸ್ಪತ್ರೆ (Hospital)ಯ ಪರಿಕರಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್‌ನ ಬ್ಯಾಳಿ ಕಾಟಾ ಬಳಿಯಿರುವ ಕಡಾಡಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ಮಹಾಂತೇಶ್ ಕಡಾಡಿ ಎಂಬುವವರಿಗೆ ಸೇರಿದ ಖಾಸಗಿ ಆಸ್ಪತ್ರೆ ಇದಾಗಿದ್ದು, ಶಿವಾನಂದ ನಿಂಗಪ್ಪ ಬಡಬಡಿ ಎಂಬುವವರ 7ತಿಂಗಳ ಮಗು ಸಾವನ್ನಪ್ಪಿದ ಹಿನ್ನಲೆ, ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆ ವಸ್ತುಗಳನ್ನು ಹಾಳು ಮಾಡಿದ್ದಾರೆ.

ಅನಾರೋಗ್ಯ ಹಿನ್ನಲೆ ನಾಲ್ಕು ದಿನದ ಹಿಂದೆ ಆಸ್ಪತ್ರೆಗೆ ಮಗು ದಾಖಲು

ಹೌದು, ಅನಾರೋಗ್ಯ ಕಾರಣ ನಾಲ್ಕು ದಿನದ ಹಿಂದೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ನಿನ್ನೆ(ಜು.02) ತಡರಾತ್ರಿ ಮಗು ಸೀರಿಯಸ್ ಆಗಿದೆ. ಈ ಹಿನ್ನಲೆ ಬೆಳಗ್ಗೆ ಆ್ಯಂಬುಲೆನ್ಸ್ ತರಿಸಿ ಬೇರೆ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಎಂದು ವೈದ್ಯರು ಹೇಳಿದ್ದರು. ಅದರಂತೆ ವೈದ್ಯರ ಸೂಚನೆಯ ಮೇರೆಗೆ ಮಗುವಿನ ಪೋಷಕರು ಆ್ಯಂಬುಲೆನ್ಸ್ ಸಹ ತರಿಸಿದ್ದರು. ಆದರೆ, ಆ್ಯಂಬುಲೆನ್ಸ್ ಬರುವಷ್ಟರಲ್ಲಿ ಮಗು ತೀರಿ ಹೋಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತುಮಕೂರು: ವೈದ್ಯರಿಲ್ಲದಿದ್ದಕ್ಕೆ ಮಗು ಸಾವು ಆರೋಪ ಪ್ರಕರಣ; ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಆ್ಯಂಬುಲೆನ್ಸ್​ ಚಾಲಕ ಅಮಾನತು

ಆಕ್ರೋಶಗೊಂಡ ಪೋಷಕರು

ಇನ್ನು ಯಾವಾಗ ಮಗು ತೀರಿ ಹೋಗಿದೆ ವೈದ್ಯರು ಎಂದು ಹೇಳಿದರೂ, ಆಕ್ರೋಶಗೊಂಡ ಪೋಷಕರು ಹಾಗೂ ಅವರ ಸಂಬಂಧಿಕರು ವೈದ್ಯರ ವಿರುದ್ದ ರೊಚ್ಚಿಗೆದ್ದು ಆಸ್ಪತ್ರೆಯ ಪರಿಕರಗಳನ್ನು ಒಡೆದು ಹಾಕಿ ವೈದ್ಯ ಕಡಾಡಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Wed, 3 July 24

Follow Us
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ