AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ವಿಟಿಯು ಖಜಾನೆ ಮೇಲೆ ಸರ್ಕಾರ ಕಣ್ಣು: 610 ಪೈಕಿ 250 ಕೋಟಿ ರೂ ನೀಡುವಂತೆ ಪತ್ರ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ ನೂರಾರು ಕೋಟಿ ರೂ ಪೈಕಿ, ಬೆಂಗಳೂರಿನ ಯುವಿಸಿಇ ಅಭಿವೃದ್ಧಿಗಾಗಿ 250 ಕೋಟಿ ರೂ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ವಿಟಿಯು ಆಡಳಿತ ಮಂಡಳಿ ನಯವಾಗಿ ತಿರಸ್ಕರಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದು ಹಣಕಾಸಿನ ನೆರವು ಕೋರಿದ್ದರು.

ಬೆಳಗಾವಿ ವಿಟಿಯು ಖಜಾನೆ ಮೇಲೆ ಸರ್ಕಾರ ಕಣ್ಣು: 610 ಪೈಕಿ 250 ಕೋಟಿ ರೂ ನೀಡುವಂತೆ ಪತ್ರ
ವಿಟಿಯು Image Credit source: tv9 kannada
ಸಹದೇವ್​ ಮಾನೆ
| Edited By: |

Updated on: Sep 24, 2026 | 7:08 PM

Share

ಬೆಳಗಾವಿ, ಸೆಪ್ಟೆಂಬರ್​​ 24: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ ನೂರಾರು ಕೋಟಿ ರೂ ಇದೀಗ ರಾಜ್ಯ ಸರ್ಕಾರದ ಗಮನ ಸೆಳೆದಿದೆ. ವಿಟಿಯು ಬಳಿ ಇರುವ ಸುಮಾರು 610 ಕೋಟಿ ರೂ ಪೈಕಿ 250 ಕೋಟಿ ರೂ ಬೆಂಗಳೂರಿನ ಯುವಿಸಿಇ ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಆದರೆ, ಸರ್ಕಾರದ ಈ ಮನವಿಯನ್ನ ವಿಟಿಯು ಆಡಳಿತ ಮಂಡಳಿ ನಯವಾಗಿ ತಿರಸ್ಕರಿಸಿದೆ.

ವಿಟಿಯು ಖಜಾನೆಗೆ 610 ಕೋಟಿ ರೂ ಬಂದಿದ್ದು ಹೇಗೆ?

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ 610 ಕೋಟಿ ರೂ ಮೇಲೆ ಈಗ ಸರ್ಕಾರದ ಕಣ್ಣು ಬಿದ್ದಿದೆಯಾ ಎಂಬ ಅನುಮಾನ ಮೂಡುತ್ತಿದೆ. ಇದೇ ಹಣ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಡುವೆ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಯುವಿಸಿಇ ಅಭಿವೃದ್ಧಿ ಕಾರ್ಯಗಳಿಗೆ 250 ಕೋಟಿ ರೂ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್! ಕಾನೂನು ಪರೀಕ್ಷೆಗಾಗಿ ಅನಾರೋಗ್ಯದ ನಾಟಕ

ಸರ್ಕಾರದ ಸ್ವಾಮ್ಯದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದಲೇ ಈ ಹಣವನ್ನ ಕೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ವಿಟಿಯು ಬಳಿ ಇಷ್ಟು ದೊಡ್ಡ ಮೊತ್ತದ ಹಣ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಹಲವು ವರ್ಷಗಳ ಹಿಂದಿನ ಆದಾಯ ತೆರಿಗೆ ಇಲಾಖೆಯ ಕ್ರಮವೇ ಪ್ರಮುಖವಾಗಿದೆ. 2014ರಲ್ಲಿ ವಿಟಿಯು ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ತೆರಿಗೆ ಪಾವತಿ ಮತ್ತು ತೆರಿಗೆ ವಿನಾಯಿತಿಗೆ ಸಂಬಂಧಿಸಿದ ವಿಚಾರದಲ್ಲಿ ಸುಮಾರು 400 ಕೋಟಿ ರೂ ಜಪ್ತಿ ಮಾಡಲಾಗಿತ್ತು.

LIVE TV

ವಿಟಿಯು ಮೇಲೆ 2014ರಲ್ಲಿ ದಾಳಿ ನಡೆದಾಗ ತೆರಿಗೆ ಕಟ್ಟಿಲ್ಲ ಎಂದು ಹಣ ಜಪ್ತಿ ಮಾಡಿದ್ದ ಐಟಿ. ಆದರೆ ಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ಕಟ್ಟಲು ವಿನಾಯಿತಿ ಇದೆ ಎಂದು ವಾದಿಸಿತ್ತು. ವಿಟಿಯು ಪರವಾಗಿ ತೆರಿಗೆ ವಿನಾಯಿತಿಗೆ ಸಂಬಂಧಿಸಿದ 12ಎ ಅರ್ಜಿ ಸೇರಿ ಸಾಕಷ್ಟು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿತ್ತು. ನಂತರ ದಾಖಲೆಗಳ ಪರಿಶೀಲನೆಯ ಬಳಿಕ ಬಡ್ಡಿ ಸೇರಿದಂತೆ ಸುಮಾರು 610 ಕೋಟಿ ರೂ ವಿಶ್ವವಿದ್ಯಾಲಯಕ್ಕೆ ಐಟಿ ಇಲಾಖೆ ಮರಳಿದೆ.

500 ಕೋಟಿ ರೂ ಫಿಕ್ಸ್‌ಡ್ ಡೆಪಾಸಿಟ್

ಇನ್ನೂ ಸುಮಾರು 90 ಕೋಟಿ ರೂ ಆದಾಯ ತೆರಿಗೆ ಇಲಾಖೆಯಿಂದ ಬರಬೇಕಿದೆ. 610 ಕೋಟಿ ರೂ ವಿಶ್ವವಿದ್ಯಾಲಯದ ಖಾತೆಗೆ ಬಂದ ಬೆನ್ನಲ್ಲೇ ಈ ಹಣದಲ್ಲಿ 250 ಕೋಟಿ ರೂ ನೀಡುವಂತೆ ಸರ್ಕಾರದಿಂದ ಮನವಿ ಬಂದಿದೆ. ಆದರೆ, ವಿಟಿಯು ಆಡಳಿತ ಮಂಡಳಿ ಸರ್ಕಾರದ ಮನವಿಯನ್ನ ಸಮ್ಮತಿಸಿಲ್ಲ. ಇದೇ ವೇಳೆ, ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ 500 ಕೋಟಿ ರೂ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಇರಿಸಿದ್ದಾರೆ. ಈ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮುಂದಿನ ವರ್ಷಗಳಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ವೇತನ ಸೇರಿದಂತೆ ಹಣಕಾಸಿನ ಅಗತ್ಯಗಳಿಗೆ ಬಳಸುವ ಉದ್ದೇಶವಿದೆ ಎಂದು ವಿಟಿಯು ಆಡಳಿತದ ನಿಲುವು. ಸರ್ಕಾರದಿಂದ ನಿಯಮಿತ ಅನುದಾನ ದೊರೆಯದ ಸಂದರ್ಭದಲ್ಲೂ ವಿಶ್ವವಿದ್ಯಾಲಯ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ಕುತೂಹಲ ಮೂಡಿಸಿದ ಸರ್ಕಾರದ ನಡೆ

ಒಂದೆಡೆ ವಿಶ್ವವಿದ್ಯಾಲಯದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಸರ್ಕಾರದ ಮನವಿ ಮಾಡಿದರೆ, ಮತ್ತೊಂದೆಡೆ ವಿಶ್ವವಿದ್ಯಾಲಯದ ಭವಿಷ್ಯದ ಹಣಕಾಸಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಉಳಿಸಿಕೊಳ್ಳುವ ನಿಲುವು ವಿಟಿಯು ಆಡಳಿತ ಮಂಡಳಿ ಹೊಂದಿದೆ. ಈ ಹಣದ ಕುರಿತು ಸರ್ಕಾರದ ಮುಂದಿನ ನಡೆ ಏನು, ವಿಟಿಯು ಆಡಳಿತ ತನ್ನ ನಿಲುವನ್ನು ಮುಂದುವರಿಯುತ್ತದೆಯೇ ಎನ್ನುವುದನ್ನ ಕಾದು ನೋಡಬೇಕಿದೆ. ವಿವಿಗಳಿಗೆ ಹಣ ಕೊಟ್ಟು ಅಭಿವೃದ್ಧಿ ಪಡಿಸಬೇಕಿರುವ ಸರ್ಕಾರ ಇದೀಗ ವಿವಿಯಿಂದ ಹಣ ಕೇಳಿದ್ದು, ಸಾಕಷ್ಟು ಕುತೂಹಲ ಹುಟ್ಟು ಹಾಕುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ