ತಮ್ಮ ಕಡೆಯವರ ವಾಹನಕ್ಕೆ ದಂಡ ಹಾಕಿದ ಟ್ರಾಫಿಕ್ ಎಎಸ್ಐ ಮೇಲೆ ಏರ್ಪೋರ್ಟ್ ಇನ್ಸ್ಪೆಕ್ಟರ್ ದರ್ಪ
ನಾನು ಯಾರು ಅಂತ ಗೊತ್ತಿಲ್ವ ತೋರಿಸ್ತೀನಿ ಎಂದು ಮುತ್ತುರಾಜ್ ಅವಾಜ್ ಹಾಕಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.

ದೇವನಹಳ್ಳಿ: ಟ್ರಾಫಿಕ್ ಎಎಸ್ಐ ಮೇಲೆ ಏರ್ಪೋರ್ಟ್ ಇನ್ಸ್ಪೆಕ್ಟರ್ ದರ್ಪ ಮೆರೆದಿದ್ದಾರೆ. ಈ ದರ್ಪದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಕಡೆಯವರ ವಾಹನಕ್ಕೆ ದಂಡ ಕಟ್ಟುವಂತೆ ಹೇಳಿದಕ್ಕೆ ಏರ್ಪೋಟ್ ಲಾ ಅಂಡ್ ಆರ್ಡರ್ ಇನ್ಸ್ಪೆಕ್ಟರ್ ಮುತ್ತುರಾಜ್ ಅವರು ಟ್ರಾಫಿಕ್ ಎಎಸ್ಐ ವೆಂಕಟೇಶ್ ಅವರಿಗೆ ಕರೆ ಮಾಡಿ ದರ್ಪ ಮೆರೆದಿದ್ದಾರೆ. ದರ್ಪದ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ 26 ರಂದು ಹೆದ್ದಾರಿಯಲ್ಲಿ ಬರ್ತಿದ್ದ ಕಾರನ್ನ ಸಂಚಾರಿ ಪೊಲೀಸರು ತಡೆದಿದ್ದರು. ಈ ವೇಳೆ ಕಾರಿನ ಮೇಲೆ 41,500 ರೂಪಾಯಿ ದಂಡವಿದ್ದು ಅದನ್ನು ಕಟ್ಟುವಂತೆ ಸೂಚಿಸಿದ್ದರು. ಆದ್ರೆ ಈ ವೇಳೆ ದಂಡ ಕಟ್ಟದೆ ಕಾರು ಮಾಲೀಕ ಇನ್ಸ್ಪೆಕ್ಟರ್ ಮುತ್ತುರಾಜ್ ಅವರಿಗೆ ಕರೆಮಾಡಿ ಕಾರನ್ನು ಬಿಡುವಂತೆ ಕೇಳಿದ್ದಾರೆ. ಅದರಂತೆ ಮುತ್ತುರಾಜ್ ವೆಂಕಟೇಶ್ರಿಗೆ ಹೇಳಿದ್ದಾರೆ. ಆದ್ರೆ ಕಾನೂನು ಎಲ್ಲರಿಗೂ ಒಂದೆ ಅಂತ ಕಾರು ಬಿಡಲು ಎಎಸ್ಐ ನಿರಾಕರಿಸಿದ್ದಾರೆ. ಕೊನೆಗೂ 2 ಸಾವಿರ ದಂಡ ಕಟ್ಟಿಸಿಕೊಂಡು ನೋಟಿಸ್ ಕೊಟ್ಟು ಎಎಸ್ಐ ಕಾರನ್ನು ಕಳಿಸಿದ್ದಾರೆ. ಹೀಗಾಗಿ ವಾಹನ ಹೋದ ನಂತರ ಎಎಸ್ಐಗೆ ಕರೆ ಮಾಡಿ ಮುತ್ತುರಾಜ್ ದರ್ಪ ಮೆರೆದಿದ್ದಾರೆ. ಇದನ್ನೂ ಓದಿ: ನೋಟುಗಳಲ್ಲಿ ಗಾಂಧೀಜಿ ಜತೆಯಲ್ಲಿ ಲಕ್ಷ್ಮೀ ಹಾಗೂ ಗಣೇಶನ ಭಾವಚಿತ್ರ ಮುದ್ರಿಸುವಂತೆ ಕೇಜ್ರಿವಾಲ್ ಪ್ರಧಾನಿ ಮೋದಿಗೆ ಪತ್ರ
ನಾನು ಯಾರು ಅಂತ ಗೊತ್ತಿಲ್ವ ತೋರಿಸ್ತೀನಿ ಎಂದು ಮುತ್ತುರಾಜ್ ಅವಾಜ್ ಹಾಕಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಸಾಮಾನ್ಯರಿಗೊಂದು ನ್ಯಾಯ ಇನ್ಸ್ಪೆಕ್ಟರ್ ಕಡೆಯವರಿಗೆ ಒಂದು ನ್ಯಾಯವ ಅಂತ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಪೆಕ್ಟರ್ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.
ಏಕಾಏಕಿ ಟೋಲ್ ಸಿಬ್ಬಂದಿಯನ್ನ ಕೆಲಸದಿಂದ ವಜಾಗೊಳಿಸಿದಕ್ಕೆ ಪ್ರತಿಭಟನೆ
ಇನ್ನು ಮತ್ತೊಂದೆಡೆ ಏಕಾಏಕಿ ಟೋಲ್ ಸಿಬ್ಬಂದಿಯನ್ನ ಕೆಲಸದಿಂದ ವಜಾಗೊಳಿಸಿದ ಹಿನ್ನೆಲೆ ಆತಂಕಗೊಂಡ ಕಾರ್ಮಿಕರು ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಬಳಿ ಇರುವ ಟೋಲ್ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 30ಕ್ಕೂ ಹೆಚ್ಚು ಜನರನ್ನ ವಜಾಗೊಳಿಸಿದ ಟೋಲ್ ಉಸ್ತುವಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾರ್ಮಿಕ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಮಧ್ಯಸ್ಥಿಕೆ ವಹಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
Published On - 10:44 am, Fri, 28 October 22




