ಬೆಂಗಳೂರಿನಲ್ಲಿ ಸ್ವಾಮೀಜಿ ವೇಷಭೂಷಣ ತೊಟ್ಟು ಓಡಾಡುತ್ತಿದ್ದ ಮೂವರು ಅರೆಸ್ಟ್!
ಸ್ವಾಮೀಜಿ ವೇಷಭೂಷಣ ತೊಟ್ಟು ನೇರವಾಗಿ ಮನೆಗೆ ನುಗ್ಗುತ್ತಿದ್ದರು. ಹಣ ಕೊಟ್ಟಿಲ್ಲ ಅಂದರೆ ನಿಂದಿಸಿತ್ತಿದ್ದರು. ಆರೋಪಿಗಳು ವಾರಕ್ಕೊಮ್ಮೆ ಒಂದೊಂದು ಏರಿಯಾದಲ್ಲಿ ಗುರುತಿಸಿಕೊಳ್ಳುತ್ತಿದ್ದರಂತೆ.
ನೆಲಮಂಗಲ: ಸ್ವಾಮೀಜಿ (Swamiji) ವೇಷಭೂಷಣ ತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೊವರನ್ನು ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರಸೀಕೆರೆಯ ರಾಮಯ್ಯ ಸೇರಿದಂತೆ ಮೂವರು ನಕಲಿ ಮಠಗಳ ಹೆಸರು ಹೇಳಿಕೊಂಡು ಬ್ಲಾಕ್ ಮೇಲ್ (Blackmail) ಮಾಡುತ್ತಿದ್ದರು. ಸ್ವಾಮೀಜಿ ವೇಷಭೂಷಣ ತೊಟ್ಟು ನೇರವಾಗಿ ಮನೆಗೆ ನುಗ್ಗುತ್ತಿದ್ದರು. ಹಣ ಕೊಟ್ಟಿಲ್ಲ ಅಂದರೆ ನಿಂದಿಸಿತ್ತಿದ್ದರು. ಆರೋಪಿಗಳು ವಾರಕ್ಕೊಮ್ಮೆ ಒಂದೊಂದು ಏರಿಯಾದಲ್ಲಿ ಗುರುತಿಸಿಕೊಳ್ಳುತ್ತಿದ್ದರಂತೆ. ಮಲ್ಲಸಂದ್ರಕ್ಕೆ ಬಂದು ಗೂಂಡಾವರ್ತನೆ ತೋರುತ್ತಿದ್ದಾಗಲೇ ಪೊಲೀಸರು ಮೊವರನ್ನ ಬಂಧಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆ ಸಾವು: ಬೆಂಗಳೂರು ಉತ್ತರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ದಾಸನಪುರ ಗ್ರಾಮದ ಬಳಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಗೆ ಸಾವನ್ನಪ್ಪಿದ್ದಾರೆ. ರಸ್ತೆ ದಾಟುತ್ತಿದ್ದ ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಸನಪುರದ ಗೌರಮ್ಮ(45) ಮೃತ ದುರ್ದೈವಿ. ಚಾಲಕನ ಸಮೇತವಾಗಿ ಬಸ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಬಸ್ ಅಪಘಾತ ನಡೆದಿದೆ.
ಇದನ್ನೂ ಓದಿ: Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್ ಶಿವನ್
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: ರಾಯಚೂರು: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನ ಕನ್ನಾಪೂರುಹಟ್ಟಿಯಲ್ಲಿ ಸಂಭವಿಸಿದೆ. ಹುಲಗಪ್ಪ(35)ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲೇ ನೇಣು ಬಿಗಿದುಕೊಂಡು ಹುಲಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಸೂಸೈಡ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಜಗಳ: ದಾವಣಗೆರೆ: ಮದ್ಯಪಾನ ಮಾಡಿದ ಗಂಡನಿಗೆ ಚಿಕನ್ ಮಾಡಿಲ್ಲ ಎಂದು ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಸಂಭವಿಸಿದೆ. ಶೀಲಾ(28) ಕೊಲೆಯಾದ ಮಹಿಳೆ. ಬನ್ನಿಕೋಡು ಗ್ರಾಮದ ಕೆಂಚಪ್ಪ ಕೊಲೆ ಮಾಡಿದ ಪತಿ. ಕೆಂಚಪ್ಪ ಶೀಲಾಳನ್ನು 9 ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದ. ಅಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು. ಪೋಷಕರು ಪಂಚಾಯತಿ ನಡೆಸಿ ಒಂದು ಮಾಡುತ್ತಿದ್ದರು. ಶೀಲಾಳ ಮೇಲೆ ಕೆಂಚಪ್ಪ ಪದೇ ಪದೇ ಅನುಮಾನ ಪಡುತ್ತಿದ್ದನಂತೆ. ಕಳೆದ ರಾತ್ರಿ ಚಿಕನ್ ಅಡುಗೆ ಮಾಡಿಲ್ಲ ಎಂದು ಗಲಾಟೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:43 am, Thu, 9 June 22