AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲದಲ್ಲಿ ವಿದೇಶಿ ಪ್ರಜೆಯ ಪುಂಡಾಟ: ಪೊಲೀಸರ ಮೇಲೆ ನೈಜೀರಿಯನ್ ವ್ಯಕ್ತಿಯಿಂದ ಹಲ್ಲೆ!

ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ವಿದೇಶಿ ನಿರ್ಬಂಧಿತ ಕೇಂದ್ರದಲ್ಲಿ ನೈಜೀರಿಯನ್ ಪ್ರಜೆ ಕೆವಿನ್ ಜೇಮ್ಸ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ವೀಸಾ ಅವಧಿ ಮುಗಿದಿದ್ದರಿಂದ ಕೇಂದ್ರದಲ್ಲಿದ್ದ ಆರೋಪಿ, ಜಾಮೀನು ಸಿಕ್ಕರೂ ಬಿಡುಗಡೆ ಮಾಡಿಲ್ಲವೆಂದು ಆಕ್ರೋಶಗೊಂಡು ಎಎಸ್‌ಐ ಹಾಗೂ ಪಿಸಿ ಮೇಲೆ ದಾಳಿ ಮಾಡಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲದಲ್ಲಿ ವಿದೇಶಿ ಪ್ರಜೆಯ ಪುಂಡಾಟ: ಪೊಲೀಸರ ಮೇಲೆ ನೈಜೀರಿಯನ್ ವ್ಯಕ್ತಿಯಿಂದ ಹಲ್ಲೆ!
ಕೆವಿನ್ ಜೇಮ್ಸ್
ಮಂಜುನಾಥ ಎಚ್​. ವಿ.
| Edited By: |

Updated on: Oct 16, 2026 | 7:41 AM

Share

ಮುಖ್ಯಾಂಶಗಳು

  • ನೆಲಮಂಗಲದಲ್ಲಿ ಪೊಲೀಸರ ಮೇಲೆ ನೈಜೀರಿಯಾ ಮೂಲದ ಕೆವಿನ್ ಜೇಮ್ಸ್ ಹಲ್ಲೆ ನಡೆಸಿದ್ದಾನೆ.
  • ಜಾಮೀನು ಸಿಕ್ಕರೂ ವೀಸಾ ಅವಧಿ ಮುಗಿದಿದ್ದರಿಂದ ನಿರ್ಬಂಧಿತ ಕೇಂದ್ರದಲ್ಲಿದ್ದ ನೈಜೀರಿಯನ್ ಪ್ರಜೆ.
  • ದಾಳಿ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ನೆಲಮಂಗಲ, ಅಕ್ಟೋಬರ್ 16: ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪದಲ್ಲಿರುವ ವಿದೇಶಿ ಪ್ರಜೆಗಳ ನಿರ್ಬಂಧಿತ ಕೇಂದ್ರದಲ್ಲಿ ನೈಜೀರಿಯಾ ಮೂಲದ ಕೆವಿನ್ ಜೇಮ್ಸ್ ಎಂಬಾತ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಪುಂಡಾಟಿಕೆ ಮೆರೆದಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ

ವೀಸಾ ಅವಧಿ ಮುಗಿದಿರುವ ವಿದೇಶಿ ಪ್ರಜೆಗಳನ್ನು ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ಈ ಕೇಂದ್ರದಲ್ಲಿ ಇರಿಸಲಾಗುತ್ತದೆ. ಆರೋಪಿ ಕೆವಿನ್ ಜೇಮ್ಸ್ ಈ ಹಿಂದೆ ಎನ್‌ಡಿಪಿಎಸ್ (NDPS) ಹಾಗೂ ಕೊಲೆಯತ್ನ ಸೇರಿದಂತೆ ಮೂರರಿಂದ ನಾಲ್ಕು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಸಹ, ವೀಸಾ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆಯಂತೆ ಆತನನ್ನು ಈ ನಿರ್ಬಂಧಿತ ಕೇಂದ್ರದಲ್ಲಿ ಇರಿಸಲಾಗಿತ್ತು.

ಕರ್ತವ್ಯನಿರತ ಪೊಲೀಸರ ಮೇಲೆ ದಾಳಿ

ಆದರೆ ಎರಡು ದಿನಗಳ ಹಿಂದೆ, “ನನಗೆ ಜಾಮೀನು ಮಂಜೂರಾಗಿದೆ, ನನ್ನನ್ನು ಬಿಡುಗಡೆ ಮಾಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ ಕೆವಿನ್ ಜೇಮ್ಸ್, ಕರ್ತವ್ಯದಲ್ಲಿದ್ದ ಎಎಸ್‌ಐ (ASI), ಪಿಸಿ (PC) ಹಾಗೂ ಇತರೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಠಾತ್ ದಾಳಿ ನಡೆಸಿ ಹಲ್ಲೆ ನಡೆಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಎಚ್​. ವಿ.
ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More