AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರಂತ ಅಂತ್ಯ ಕಂಡ ಕಾಲೇಜ್​​ ಲವ್: ಯುವತಿ ಮದ್ವೆಗೆ ಒಪ್ಪದಕ್ಕೆ ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರಿನ ಯಲಹಂಕ ನ್ಯೂಟೌನ್‌ನಲ್ಲಿ 23 ವರ್ಷದ ಯುವಕನೊಬ್ಬ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಪೋಷಕರು ಮದುವೆಗೆ ನಿರಾಕರಿಸಿದ ಕಾರಣ ಯುವತಿ ಆತನನ್ನ ಅವೈಡ್ ಮಾಡಿದ್ದಾಳೆ. ಹೀಗಾಗಿ ಮನನೊಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದುರಂತ ಅಂತ್ಯ ಕಂಡ ಕಾಲೇಜ್​​ ಲವ್: ಯುವತಿ ಮದ್ವೆಗೆ ಒಪ್ಪದಕ್ಕೆ ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ
ಮೃತ ಯುವಕImage Credit source: tv9 kannada
Shivaprasad B
| Edited By: |

Updated on:Apr 09, 2026 | 4:42 PM

Share

ಬೆಂಗಳೂರು, ಏಪ್ರಿಲ್​ 09: ಮದುವೆಗೆ ಯುವತಿ ಒಪ್ಪದಿದ್ದಕ್ಕೆ ಮನನೊಂದ ಯುವಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್(23) ಮೃತ ಯುವಕ. ಇತ್ತೀಚೆಗಷ್ಟೇ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು? 

ಅಭಿಷೇಕ್​ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಯುವತಿಯ ಜೊತೆ ಪ್ರೀತಿ ಮಾಡಿದ. ಕಳೆದ ಆರೇಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇತ್ತ ಯುವತಿಯ ಪೋಷಕರು ಅಭಿಷೇಕ್ ಜತೆ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಅಭಿಷೇಕ್​ನನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮನನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ

ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ ಆಗಿರುವಂತಹ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಪ್ರದೇಶದ ಎ ಬ್ಲಾಕ್‌ನಲ್ಲಿ ನಡೆದಿದೆ. ಜೀವಿತಾ(12) ಮೃತ ವಿದ್ಯಾರ್ಥಿನಿ. ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಾತ್ರೆ ನೋಡಲು ಹೋಗಿ ಹಸೆಮಣೆ ಏರಬೇಕಿದ್ದವನ ದುರಂತ ಅಂತ್ಯ: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್​ ಹರಿದು ಸಾವು

ಬೊಮ್ಮನ​ಕಟ್ಟೆಯ ಶಾಲೆಯಲ್ಲಿ ಜೀವಿತಾ 6ನೇ ತರಗತಿ ಓದುತ್ತಿದ್ದಳು. ರಜೆ ಇದ್ದ ಕಾರಣ ಮನೆಯಲ್ಲೇ ಇದ್ದಳು. ಆದರೆ ಏಕಾಏಕಿ ದುರ್ಘಟನೆ ಸಂಭವಿಸಿದೆ. ಸದ್ಯ ಬಾಲಕಿ ಜೀವಿತಾ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಸಂಪೂರ್ಣ ತನಿಖೆಯಿಂದಲೇ ನಿಜಾಂಶ ಬಹಿರಂಗವಾಗಬೇಕಿದೆ. ಬಾಲಕಿ ತಾಯಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ.

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಿಕ್ಕಬಳ್ಳಾಪುರ ನಗರದದಲ್ಲಿ ನಡೆದಿದೆ. ಮನೋರೋಗದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವಿಜಿ(57) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಲ್ಲಿಕ್ ಮಾಡಿ.

Published On - 4:41 pm, Thu, 9 April 26

Follow Us