AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಭಾಗ್ಯದ 5 ಕೆಜಿ ಅಕ್ಕಿಯ ಹಣ ನೀಡುವುದು ಮುಂದುವರಿಕೆ: ಸಚಿವ ಸಂಪುಟದ ತೀರ್ಮಾನಗಳು ಇಲ್ಲಿವೆ

ಮಹದಾಯಿ(Mahadayi)ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಮಾಡಿದ ಹಿನ್ನಲೆ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಇಂದು(ಸೆ.05) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟೇ ಅಲ್ಲದೇ ಅನ್ನಭಾಗ್ಯ ಯೋಜನೆ ಅಡಿ 5k.g ಅಕ್ಕಿಯ ಹಣ ನೀಡುವುದನ್ನು ಮುಂದುವರೆಸುವ ಸೇರಿ ಕೆಲವು ಯೋಜನೆಗಳಿಗೂ ಅನುಮೋದನೆ ಸಹ ನೀಡಿದ್ದು, ಈ ಕುರಿತು ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​ಕೆ ಪಾಟೀಲ್ ವಿವರಿಸಿದರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಇಂತಿವೆ.

ಅನ್ನಭಾಗ್ಯದ 5 ಕೆಜಿ ಅಕ್ಕಿಯ ಹಣ ನೀಡುವುದು ಮುಂದುವರಿಕೆ: ಸಚಿವ ಸಂಪುಟದ ತೀರ್ಮಾನಗಳು ಇಲ್ಲಿವೆ
ಸಚಿವ ಸಂಪುಟ ಸಭೆ
ಸುನಿಲ್​ ಎಮ್​ ಹೆಚ್​
| Edited By: ಕಿರಣ್ ಹನುಮಂತ್​ ಮಾದಾರ್|

Updated on:Sep 05, 2024 | 8:23 PM

Share

ಬೆಂಗಳೂರು, ಸೆ.05: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು(ಗುರುವಾರ) ಸಚಿವ ಸಂಪುಟ ಸಭೆ(cabinet meeting) ನಡೆದಿದ್ದು, ಮಹದಾಯಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಇನ್ನು ಸಭೆಯಲ್ಲಿ ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಹಿನ್ನಲೆ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು  ತೀರ್ಮಾನಿಸಲಾಯಿತು. ಅಷ್ಟೇ ಅಲ್ಲದೇ ಕೆಲವು ಯೋಜನೆಗಳಿಗೆ ಅನುಮೋದನೆ ಸಹ ನೀಡಲಾಯಿತು. ಈ ಕುರಿತು ಸಭೆ ಬಳಿಕ  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​ಕೆ ಪಾಟೀಲ್ ವಿವರಿಸಿದರು.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು

  • ರಾಜ್ಯದ ಒಳಾಡಳಿತ ಇಲಾಖೆ 59 ಜನ ಕೈದಿಗಳ ಸನ್ನಡತೆ ಆಧಾರದ ಮೇಲೆ ಅವಧಿ ಮುನ್ನ ಬಿಡುಗಡೆಗೆ ನಿರ್ಧಾರ.
  • ವಸತಿ ಇಲಾಖೆಯಲ್ಲಿ ಬೆಟ್ಟಗೇರಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ.
  • ಕಾರ್ಮಿಕ ಇಲಾಖೆಯ ಬಳಕೆದಾರರಿಂದ ಸಂಗ್ರಹಿಸುವ, ಕಾನೂನು ಇಲಾಖೆ ಅಡಿ ಬರುವ ಎಂಟು ಕಾಯ್ಡೆ ಅಡಿ, ಬಳಕೆ‌ದಾರರಿಂದ ಸಂಗ್ರಹಿಸುವ ದಂಡವನ್ನ‌ 30% ಹೆಚ್ಚಳಕ್ಕೆ‌ ನಿರ್ಧಾರ.
  • ಕಾನೂನು ಸೇವಾ ತಿದ್ದುಪಡಿ ಕರಡು ನಿಯಮಗಳಿಗೆ 15 ದಿನ ಅವಕಾಶ ನೀಡುವುದು, ಆಕ್ಷೇಪಣೆ ಬಾರದಿದ್ರೆ ಸದರಿ ಕರಡು ನಿಯಮ ಮಂಡಿಸದೆ ನಿರ್ಣಯ ತೆಗೆದುಕೊಳ್ಳಲು ಅನುಮೋದನೆ.
  • ವೈದ್ಯಕೀಯ ಶಿಕ್ಷಣ ಇಲಾಖೆ, ಕಿಮ್ಸ್ ಆಸ್ಪತ್ರೆಗೆ ಸಲಕರಣೆ ಖರೀದಿಗೆ 75 ಕೋಟಿ ಅನುದಾನ ನೀಡಲು ಅನುಮೋದನೆ.
  • ಮೈಸೂರಿನ ನೆಫ್ರೋಲಜಿ ನೂರು ಬೆಡ್ ಸಾಮರ್ಥ್ಯ ಹೆಚ್ಚಳಕ್ಕೆ ಅನುಮೋದನೆ.
  • ಕಲಬುರಗಿಯ ಮಕ್ಕಳ ಆಸ್ಪತ್ರೆಯನ್ನ ಇಂದಿರಾಗಾಂಧಿ ಆಸ್ಪತ್ರೆ ಸಹಯೋಗದಲ್ಲಿ 150 ಹಾಸಿಗೆ ಆಸ್ಪತ್ರೆ ಸ್ಥಾಪನೆಗೆ 221 ಕೋಟಿ ಬಿಡುಗಡೆಗೆ ಅನುಮೋದನೆ.
  • ಅನ್ನಭಾಗ್ಯ ಯೋಜನೆ ಅಡಿ 5k.g ಅಕ್ಕಿಯ ಹಣವನ್ನ ನೀಡುವ ಯೋಜನೆ ಮುಂದುವರೆಸಲು ನಿರ್ಧಾರ(ವ್ಯಕ್ತಿಗೆ 170 ರೂ ಹಣವನ್ನ ನೀಡಲಿರೋ ಸರ್ಕಾರ).
  • ಬೆಂಗಳೂರು ನೆಪ್ರೋ- ಯುರಾಲಜಿ ಆಸ್ಪತ್ರೆಯ ಹೊರ ರೋಗಿಗಗಳ ವಿಭಾಗಗಕ್ಕೆ ನೂತನ ಕಟ್ಟಡಕ್ಕೆ 16.15 ಕೋಟಿಗೆ ಅನುಮೋದನೆ.
  • ಕಂದಾಯ ಇಲಾಖೆಯ ಸಹಾಯಕ ಉಪನೋಂದಣ ಅಧಿಕಾರಿ ವರ್ಗಾವಣೆ ಅವಧಿಯನ್ನು 30-09-24ರ ವರೆಗೂ ವಿಸ್ತರಣೆಗೆ ಅನುಮೋದನೆ.
  • ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶ ಒಂದು ಲಕ್ಷ ಮಹಿಳೆಯರಿಗೆ 2500 ಕಾಫಿ ಕಿಯೋಸ್ಕ್‌ಗಳನ್ನ ಒದಗಿಸಲು ಕ್ರಮ 25 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ.
  • ರಾಜ್ಯದ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ನೂತನ ವಾಹನ ಪಿಟ್ನಸ್ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ.
  • 341 ಕೋಟಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಸ್ಥಾಪನೆ.. ಯೋಜನೆಗೆ ಘಟನೋತ್ತರ ಅನುಮೋದನೆ.
  • ಸ್ಕ್ರಾಪಿಂಗ್ ವಾಹನಗಳ ಮೇಲಿನ ದಂಡ ವಿನಾಯತಿ ದಿನಾಂಕ ವಿಸ್ತಾರಣೆ ಅನುಮೋದನೆ – 31-03-26ರ ವರೆಗೆ.
  • ಪಿಪಿಪಿ ಮಾದರಿಯಲ್ಲಿ ಟೆಕ್ಸ್​​ಟೈಲ್ಸ್​ ಪಾರ್ಕ್​ ಮಾಡಲು ಅನುಮೋದನೆ.
  • ಉಡುಪಿಯ ಕಾರ್ಕಳದಲ್ಲಿ ಪಿಪಿಪಿ‌ ಮಾದರಿಯಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ಮಾಡಲು ಅನುಮೋದನೆ.
  • ಸ್ಥಳೀಯ ಉದ್ಯೋಗಿಗಳಿಗೆ ಕೌಶಲ್ಯತೆ ನೀಡಲು ನಿಪುಣ ಕರ್ನಾಟಕ ಉಪಕ್ರಮ ಹೆಸರಲ್ಲಿ 100 ಕೋಟಿ ವೆಚ್ಚದಲ್ಲಿ ಟ್ರೈನಿಂಗ್ ನೀಡಲು ಅನುಮೋದನೆ.
  • ಕರ್ನಾಟಕ ಜೈವಿಕ ತಂತ್ರಜ್ಞಾನ ಅಡಿಯಲ್ಲಿ ಐದು ವರ್ಷಗಳ ಕಾಲ ನಾಲ್ಕು ಕೋಟಿ ವೆಚ್ಚದಲ್ಲಿ ಪ್ರೋತ್ಸಾಹ ದನ ನೀಡಲು ಅನುಮೋದನೆ.
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ನೀಡಲು ಅನುಮೋದನೆ.
  • ಆಹಾರ ಇಲಾಖೆ ಇಂದ ಪಡಿತರ ಫಲಾನುಭವಿಗಳಿಗೆ ಹಣದ ಬದಲು, ಆಹಾರ ನೀಡುವ ಚಿಂತನೆ ಇತ್ತು.. DBT ಮೂಲಕ ಹಣವನ್ನ ಮುಂದುವರೆಸಲು ನಿರ್ಧಾರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Thu, 5 September 24

Follow Us
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ
ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?
ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?
ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ
ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ
ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!
ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!
ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!
ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!
ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ
ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ
ಬೆಂಗಳೂರು: ಗಣೇಶೋತ್ಸವ ಸಂಭ್ರಮದಲ್ಲಿ ಇರುವವರಿಗೆ ಪೊಲೀಸರ ಶಾಕ್
ಬೆಂಗಳೂರು: ಗಣೇಶೋತ್ಸವ ಸಂಭ್ರಮದಲ್ಲಿ ಇರುವವರಿಗೆ ಪೊಲೀಸರ ಶಾಕ್