ಪೂಜೆ, ಪುನಸ್ಕಾರಕ್ಕೆ ಆ್ಯಪ್: ಭಕ್ತಾದಿಗಳ ಅನುಕೂಲಕ್ಕೆ ಆನ್​ಲೈನ್ ವ್ಯವಸ್ಥೆ: ಸಚಿವ ರಾಮಲಿಂಗಾರೆಡ್ಡಿ

ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿರುವ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಭಕ್ತಾದಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಆನ್ ಲೈನ್ ವ್ಯವಸ್ಥೆ ಮಾಡುತ್ತೇವೆ. ಆನ್ ಲೈನ್​​ನಲ್ಲೆ ಪೂಜೆ ಪುನಸ್ಕಾರಕ್ಕೆ ಬುಕ್ ಮಾಡಿಕೊಳ್ಳುವ ರೀತಿ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪೂಜೆ, ಪುನಸ್ಕಾರಕ್ಕೆ ಆ್ಯಪ್: ಭಕ್ತಾದಿಗಳ ಅನುಕೂಲಕ್ಕೆ ಆನ್​ಲೈನ್ ವ್ಯವಸ್ಥೆ: ಸಚಿವ ರಾಮಲಿಂಗಾರೆಡ್ಡಿ
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Sep 16, 2023 | 4:25 PM

ಬೆಂಗಳೂರು, ಸೆಪ್ಟೆಂಬರ್​ 16: ಭಕ್ತಾದಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಆನ್ ಲೈನ್ ವ್ಯವಸ್ಥೆ ಮಾಡುತ್ತೇವೆ. ಆನ್ ಲೈನ್​​ನಲ್ಲೆ ಪೂಜೆ ಪುನಸ್ಕಾರಕ್ಕೆ ಬುಕ್ ಮಾಡಿಕೊಳ್ಳುವ ರೀತಿ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ಹೇಳಿದ್ದಾರೆ. ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಎಲ್ಲ ದೇವಾಲಯದ ಆವರಣಗಳನ್ನು ವ್ಯವಸ್ಥಿತವಾಗಿ ಮಾಡಲು ಕ್ರಮ ವಹಿಸಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಮಾಸ್ಟರ್ ಪ್ಲಾನ್ ರೆಡಿ ಮಾಡಲು ಸಹ ಹೇಳಿದ್ದೇನೆ. A ಮತ್ತು B ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಕಡ್ಡಾಯ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು.

ಯಾತ್ರೆಗೆ ಸಹಾಯ ಆಗಲು ಆ್ಯಪ್​ 

ದೇವಸ್ಥಾನಗಳ ಆಸ್ತಿ ಸರ್ವೆ ಮಾಡಿಸಿ ತೆರವು ಮಾಡಿಸಿ, ದೇವಸ್ಥಾನ ಸುಪರ್ದಿಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಾಶಿ, ಯಾತ್ರೆ, ಮಾನಸ ಸರೋವರ, ಚಾರ್ ಧಾಮ್ ಮತ್ತು ಭಾರತ್ ಗೌರವ್ ಕಾಶಿ ಯಾತ್ರೆಗೆ ಸಹಾಯ ಆಗಲು ಆ್ಯಪ್​ ಬಿಡುಗಡೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: TV9 Karnataka Summit 2023; ಕೆಎಸ್​ಆರ್​ಟಿಸಿ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೆ ತರುತ್ತೇವೆ: ರಾಮಲಿಂಗಾರೆಡ್ಡಿ

ದೇವಸ್ಥಾನದಲ್ಲಿ ಮಹಿಳಾ ಅರ್ಚಕರನ್ನ ನೇಮಕ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಯಾರಾದರೂ ಅರ್ಜಿ ಹಾಕಿದರೆ ನೇಮಕ ಮಾಡುವುದಾಗಿ ತಿಳಿಸಿದರು.

ಎರಡೇ ದಿನಕ್ಕೆ 742 ಕೇಸ್

ಗೌರಿ ಗಣೇಶ ಹಬ್ಬಕ್ಕೆ ಬಸ್​ಗಳು ರಶ್ ಫುಲ್ ನಿಯಮ ಉಲ್ಲಂಘನೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ದುಪ್ಪಟ್ಟು ದರ ನಿಗದಿ ಮಾಡಿರುವುದಕ್ಕೆ ಎರಡೇ ದಿನಕ್ಕೆ 742 ಕೇಸ್​ಗಳನ್ನ ಹಾಕಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Ramalinga Reddy: ಇನ್ಮುಂದೆ ಸಾರಿಗೆ ಸಿಬ್ಬಂದಿಗೂ ಪಿಂಚಣಿ; ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ

ಹಳೇ ವಾಹನಗಳಿಗೆ ಹೆಚ್​​​ಎಸ್​​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿಯಮದಂತೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗುವುದು. ಕೋರ್ಟ್​​ನಲ್ಲಿ ಕೇಸ್ ಹಾಕಿಕೊಂಡಿದ್ದಾರೆ, ಏನಾಗುತ್ತೋ ನೋಡೋಣ. ಖಾಸಗಿ ಬಸ್​​ಗಳ ಮಾಲೀಕರಿಂದ ಕಳೆದ 2 ದಿನಗಳಲ್ಲಿ 92,04,288 ರೂ. ದಂಡ ವಸೂಲಿ ‌ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:25 pm, Sat, 16 September 23