AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಲಾಸ್​ಸ್ಲ್ಯಾಬ್ ಅನ್ಲೋಡ್ ವೇಳೆ ಅವಘಡ: ಆಟೋ ಚಾಲಕ ಶಂಕರ್ ಸಾವು

ಅಮೃತಹಳ್ಳಿಯ ಗೀತಾ ಗ್ಲಾಸ್ ಅಂಡ್ ಹಾರ್ಡವೇರ್ ಮತ್ತು ವಸಂತಪುರದ ಗಣೇಶ್ ಗ್ಲಾಸ್ ಅಂಡ್ ಫ್ಲೈವುಡ್ ಮಾಲೀಕರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತ ಶಂಕರ್ ಪತ್ನಿ ಮಾಲಾ ಎಫ್ಐಆರ್ ದಾಖಲಿಸಿದ್ದಾರೆ.

ಗ್ಲಾಸ್​ಸ್ಲ್ಯಾಬ್ ಅನ್ಲೋಡ್ ವೇಳೆ ಅವಘಡ: ಆಟೋ ಚಾಲಕ ಶಂಕರ್ ಸಾವು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Aug 03, 2022 | 10:52 PM

Share

ಬೆಂಗಳೂರು: ಬೆಂಗಳೂರಿನಲ್ಲಿ ಗ್ಲಾಸ್​ಸ್ಲ್ಯಾಬ್ ಗಳು ಅನ್ಲೋಡ್ ಮಾಡುವಾಗ ಅವಘಡ ಸಂಭವಿಸಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಸಂಜೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ವಸಂತಪುರ ರಸ್ತೆಯ ಬಿಕಾಸಿಪುರದಲ್ಲಿ ನಡೆದಿದೆ. ಅಮೃತಹಳ್ಳಿ ನಿವಾಸಿ ಲಗೇಜ್ ಆಟೋ ಚಾಲಕ ಶಂಕರ್(34) ಮೃತ ದುರ್ದೈವಿ.

ಗ್ಲಾಸ್​ಸ್ಲ್ಯಾಬ್ ಗಳು ಅನ್ಲೋಡ್ ಮಾಡುವ ವೇಳೆ ಗ್ಲಾಸ್​ಸ್ಲ್ಯಾಬ್ ಗಳು ಏಕಾಏಕಿ ಮುರಿದು ಬಿದ್ದಿವೆ. ಗ್ಲಾಸ್ ಸ್ಲ್ಯಾಬ್ ಗಳಿಗೆ ಸಿಕ್ಕಿ ಆಟೋ ಚಾಲಕ ಉಸಿರಾಡಲಾಗದೆ ನರಳಾಡಿ ಮೃತಪಟ್ಟಿದ್ದಾರೆ. ಚಾಲಕ ಶಂಕರ್ ನರಳಾಡ್ತಿರುವ ವಿಡಿಯೋ ಲಭ್ಯವಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿ ಇದ್ದ ಸ್ಥಳೀಯರು ರಕ್ಷಿಸಲು ಯತ್ನಿಸಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಶಂಕರ್ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಮೃತಹಳ್ಳಿಯ ಗೀತಾ ಗ್ಲಾಸ್ ಅಂಡ್ ಹಾರ್ಡವೇರ್ ಮತ್ತು ವಸಂತಪುರದ ಗಣೇಶ್ ಗ್ಲಾಸ್ ಅಂಡ್ ಫ್ಲೈವುಡ್ ಮಾಲೀಕರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತ ಶಂಕರ್ ಪತ್ನಿ ಮಾಲಾ ಎಫ್ಐಆರ್ ದಾಖಲಿಸಿದ್ದಾರೆ.

ಬಾರ್​​ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಗಲಾಟೆ; ಓರ್ವನ ಕೊಲೆ

ಬಾರ್​​ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಧ್ಯಸ್ಥಿಕೆ ವಹಿಸಲು ಬಂದಿದ್ದ ವ್ಯಕ್ತಿಗೆ ಚಾಕು ಇರಿಯಲಾಗಿದೆ. ಪ್ರಕಾಶ್ ಎಂಬಾತನಿಗೆ ಚಾಕು ಇರಿದಿದ್ದು, ಪ್ರಕಾಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಾರ್​​ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಮಂಜುನಾಥ್ ಗಲಾಟೆ ಮಾಡಿಕೊಂಡಿದ್ದನು. ಈ ವೇಳೆ ಅಲ್ಲೇ ಇದ್ದ ಪ್ರಕಾಶ್ ಮಧ್ಯಪ್ರವೇಶಿಸಿ ಬಿಲ್ ಕೊಡುವಂತೆ ಬುದ್ಧಿ ಮಾತು ಹೇಳಿದ್ದನು.

ನಂತರ ಪ್ರಕಾಶ್ ಬಾರ್​ನಿಂದ ಆಚೆ ಬಂದಿದ್ದಾನೆ. ಈ ವೇಳೆ ಮಂಜುನಾಥ್ ಮತ್ತು ಮತ್ತೊರ್ವ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದರು. ಸದ್ಯ ಇಂದಿರಾನಗರ ಪೊಲೀಸರು ಆರೋಪಿ ಮಂಜುನಾಥ್​ನನ್ನು ಬಂಧಿಸಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:16 pm, Wed, 3 August 22

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ