Bengaluru Accidents: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ರಸ್ತೆ ಅಪಘಾತ; ಇಲ್ಲಿದೆ ಜನವರಿಯಿಂದ ಆಗಸ್ಟ್​ವರೆಗಿನ ಅಂಕಿಅಂಶ

ಜನವರಿಯಿಂದ ಆಗಸ್ಟ್ ತಿಂಗಳವರೆಗೆ 410 ಜನರು ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದವರು 437 ಜನರು.

Bengaluru Accidents: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ರಸ್ತೆ ಅಪಘಾತ; ಇಲ್ಲಿದೆ ಜನವರಿಯಿಂದ ಆಗಸ್ಟ್​ವರೆಗಿನ ಅಂಕಿಅಂಶ
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Sep 26, 2021 | 8:12 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಜತೆಗೆ ಆಘಾತಕಾರಿ ಅಂಶವೆಂದರೆ ಅಪಘಾತದ ತೀವ್ರತೆಗೆ ಸ್ಥಳದಲ್ಲಿ‌ ಸಾವನ್ನಪ್ಪುತ್ತಿರುವರ ಸಂಖ್ಯೆ ಅಧಿಕವಾಗ್ತಿದೆ. ಕೊವಿಡ್ ಲಾಕ್ ಡೌನ್ ನಡುವೆಯೂ ಈ ವರ್ಷ ಜನವರಿಯಿಂದ ಆಗಸ್ಟ್ ತಿಂಗಳವರೆಗೆ ನಡೆದ ಅಪಘಾತದಲ್ಲಿ 410 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗಾದರೆ ಚಾಲಕರು ಹೇಗೆ ಟ್ರಾಫಿಕ್ ನಿಯಮಗಳನ್ನ ಹೆಚ್ಚು ಉಲ್ಲಂಘಿಸ್ತಿದ್ದಾರೆ? ಸದ್ಯ ದಾಖಲಾಗಿರುವ ಪ್ರಕರಣಗಳ ಅಂಕಿಅಂಶಗಳೆಷ್ಟು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿರುವವರ ವಿರುದ್ದ ಕೇಸ್ ಗಳನ್ನ ದಾಖಲಿಸಿ ಕ್ರಮಕೈಗೊಂಡು ನಗರದಾದ್ಯಂತ ಟ್ರಾಫಿಕ್ ಪೊಲೀಸರು ದಂಡವಸೂಲಿ ಮಾಡ್ತಿದ್ದಾರೆ. ಇದರ ನಡುವೆ ನಗರದಲ್ಲಿ ಭೀಕರ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿದ್ದು ಜನವರಿಯಿಂದ ಆಗಸ್ಟ್ ತಿಂಗಳವರೆಗೆ 410 ಜನರು ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದವರು 437 ಜನರು. ಈ ಅಪಘಾತಗಳು ಮಾತ್ರವಲ್ಲ ವರ್ಷವೊಂದಕ್ಕೆ ಕೋಟಿಗಟ್ಟಲೇ ಹಣ ಸಂಚಾರಿ ‌ನಿಯಮ ಉಲ್ಲಂಘನೆಯಿಂದನೇ ಸರ್ಕಾರದ ಖಜಾನೆಗೆ ಸೇರ್ತಿದೆ. ವಿವಿಧ ರೀತಿಯ ಪ್ರಕರಣಗಳು ಸೇರಿ ಈ ಬಾರಿ ಅಂದರೆ ಜನವರಿಯಿಂದ ಆಗಸ್ಟ್ ತಿಂಗಳವರೆಗೆ 56,84,213 ಪ್ರಕರಣಗಳಿಂದ ಪೊಲೀಸರು ಸಂಚಾರಿ ನಿಯಮ‌ ಉಲ್ಲಂಘಿಸಿದವ್ರದಿಂದ ದಂಡ ಕಟ್ಟಿಸಿಕೊಂಡಿದ್ದಾರೆ.

ಕಳೆದ 15 ದಿನಗಳಿಂದನೇ ನಡೆದ ಅಪಘಾತಗಳಲ್ಲಿ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ‌ ಪ್ರಕರಣಗಳು ಸೇರಿ ಸುಮಾರು 10ಕ್ಕೂ ಹೆಚ್ಚು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಕೂದಲೆಳೆ ಅಂತರದಲ್ಲಿ ‌ಕೆಲವರು ಪಾರಾಗಿದ್ದಾರೆ.ಅದ್ರಲ್ಲಿ ಸೀಟ್ ಬೆಲ್ಟ್ ಧರಿಸಿರೋದು ಪ್ರಮುಖ ಅಂಶ. ಇನ್ನು ಕೆಲವೊಂದು ಪ್ರಕರಣಗಳಲ್ಲಿ ಸೀಟ್ ಬೆಲ್ಟ್ ಧರಿಸದಿರೋದ್ರಿಂದ ತಮ್ಮ ಅಮೂಲ್ಯ ಪ್ರಾಣನ್ನು ಕಳೆದುಕೊಂಡವರೂ ಇದ್ದಾರೆ. ಇದರಲ್ಲಿ ಮೀತಿಮೀರಿದ ವೇಗವಾದ ಅಜಾಗರೂಕ ಚಾಲನೆ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆಯಿಂದ್ಲೆ ಅಪಘಾತಗಳು ಸಂಭವಿಸಿವೆ ಎನ್ನಲಾಕ್ತಿದೆ. ಇನ್ನೂ ಈ ಅಪಘಾತಗಳಿಗೆ ಕಾರಣ ಹಲವಾರು ಕುಡಿದು ವಾಹನ ಚಾಲನೆ, ಹೆಲ್ಮೆಟ್ ರಹಿತ ಚಾಲನೆ, ಅತಿಯಾದ ವೇಗ, ಓವರ್ ಟೇಕ್ ಹೀಗೆ ವಿವಿಧ ಕಾರಣಗಳಿಂದ ಈ‌ ಅಪಘಾತಗಳು ಸಂಭವಿಸ್ತಿದೆ.

ಪೊಲೀಸರು ನೀಡಿರುವ ಈ ಅಪಘಾತಗಳ ವರದಿ ನೋಡಿದರೆ ಅದರಲ್ಲಿ ಅತೀ ಹೆಚ್ಚಿನ ಕೇಸ್ ಗಳು ದಾಖಲಾಗಿರುವ ಅಂಕಿಅಂಶಗಳ ವಿವರ ಹೀಗಿದೆ

ರಾಂಗ್ ಪಾರ್ಕಿಂಗ್ 3,74,999 ಕೇಸ್ ಗಳು

ಟ್ರಾಫಿಕ್ ಸಿಗ್ನಲ್ ಜಂಪಿಂಗ್ 5,91,596 ಕೇಸ್ ಗಳು

ಡಿಫೆಕ್ಟೀವ್ ನಂಬರ್ ಪ್ಲೇಟ್ 2,55,659

ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ 86,565 ಕೇಸ್ ಗಳು

ಹೆಲ್ಮೆಟ್ ರಹಿತ‌ ಚಾಲನೆ‌ 23,87,092 ಕೇಸ್ ಗಳು

ಹಿಂಬದಿ‌ ಸವಾರರ ಹೆಲ್ಮೆಟ್ ರಹಿತ ಚಾಲನೆ 13,96,211 ಕೇಸ್ ಗಳು ದಾಖಲಾಗಿದೆ

ಇನ್ನೂ ಕಡಿಮೆ ಅಂದ್ರೆ ಡಿಸ್ಲೈ ಕಾರ್ಡ್ ಇಲ್ಲದಿರೋ 48 ಕೇಸ್ ,ನಿಷೇಧಿತ ಜಾಗದಲ್ಲಿ ಹಾರ್ನ್ 20 ಕೇಸ್, ಫ್ರೀ ವೀಲಿಂಗ್ 24 ಕೇಸ್, ಎಡಗಡೆಯಿಂದ ಓವರ್ ಟೇಕ್ 46 ಕೇಸ್ ,ರೇಸಿಂಗ್ 42 ಕೇಸ್ ಗಳು ದಾಖಲಾಗಿದೆ. ಇನ್ನು ಈ ಎಲ್ಲಾ ಕೇಸ್ ಗಳನ್ನ ನೋಡ್ತಿದ್ರೆ ಕೆಲವೊಂದಕ್ಕೆ ಅಂದ್ರೆ ಸೀಟ್ ಬೆಲ್ಟ್ ಹಾಕದೇ ಇರೋದು, ಕುಡಿದು ವಾಹನ ಚಾಲನೆ, ಅತಿಯಾದ ವೇಗ ಹೀಗೆ ಕೆಲವೊಂದಕ್ಕೆ ಸವಾರರೇ ನೇರವಾಗಿ ಅಜಾರೂಕ ಚಾಲನೆಯಾಗಿದರೆ ಕೆಲವೊಂದು ರಸ್ತೆಗಳ ಅವೈಜ್ಞಾನಿಕ ಉಬ್ಬು ತಗ್ಗು, ತಿರುವುಗಳ ಬಗ್ಗೆ ಮಾಹಿತಿ ನೀಡದೆ ಇರೋದು ಸೇರಿದಂತೆ ಹಲವು ಕಾರಣಗಳಿಗೆ ಜನರು ಸರ್ಕಾರಕ್ಕೆ ಜನ‌ ಹಿಡಿ ಶಾಪ ಹಾಕ್ತಿದ್ದಾರೆ. ಸಂಚಾರಿ ಪೊಲೀಸರು ಎಷ್ಟೇ ಕಾನೂನು ಪಾಲನೆ ಮಾಡಿ ಅಂತಾ ದಂಡ ಹಾಕಿದ್ರೂ ಜನರಲ್ಲಿ ಜಾಗೃತಿ ಮೂಡದೇ ಹೋದ್ರೆ ಎಲ್ಲವೂ ವ್ಯರ್ಥ. ಅದೇನೆ ಇರಲಿ ಮೋಜು- ಮಸ್ತಿಗಾಗಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿವುದು ಅಥವಾ ಅವಸರದಿಂದ, ಅಜಾಗರೂಕ ಚಾಲನೆಯಿಂದ ಎಸಗುವ ಒಂದು ಸಣ್ಣ ತಪ್ಪು ತಮ್ಮ ಅಮೂಲ್ಯ ಜೀವ ಮಾತ್ರವಲ್ಲದೆ ಅಮಾಯಕರ ಜೀವಕ್ಕೆ ಕುತ್ತು ತರರ್ತಿದೆ.ಆದ್ದರಿಂದ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಿ ಪಾದಚಾರಿಗಳು, ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನ ಪಾಲಿಸಿ ಅಪಘಾತಗಳಾದಂತೆ ಎಚ್ಚರಿಕೆ ವಹಿಸಬೇಕಿದೆ.

ವಿಶೇಷ ವರದಿ: ಶಿವಪ್ರಸಾದ್  ಟಿವಿ9 ಬೆಂಗಳೂರು

ಇದನ್ನೂ ಓದಿ: 

ಯುಪಿಎಸ್​ಸಿ 2020: 35ನೇ ಶ್ರೇಣಿಯಲ್ಲಿ ಪಾಸಾದ ಬೆಂಗಳೂರು ಮೂಲದ ಅಪರ್ಣಾ ರಮೇಶ್!

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಭೀಕರ ಅಪಘಾತ! ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ, ವಿಡಿಯೋ ಇದೆ ನೋಡಿ

(Bengaluru Accidents are increased here is the list of accident statistics)

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ