ನಮ್ಮ ಮೆಟ್ರೋ ಎರಡನೇ ಹಂತ ಕಾಮಗಾರಿ ವಿಳಂಬದಿಂದ ಹೆಚ್ಚಾದ ವೆಚ್ಚ, 40 ಸಾವಿರ ಕೋಟಿ ರೂ.ಗೆ ಏರಿಕೆ

ಬೆಂಗಳೂರಿನ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ವಿಳಂಬದ ಪರಿಣಾಮವಾಗಿ ಸರ್ಕಾರಕ್ಕೆ ಎಷ್ಟು ಹಣಕಾಸಿನ ಹೊರೆಯಾಗಲಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಯೋಜನೆಯ ವಿಳಂಬಕ್ಕೆ ಕಾರಣವೇನು? ಅದರಿಂದಾಗಿ ಎಷ್ಟು ವೆಚ್ಚ ಹೆಚ್ಚಳವಾಯಿತು? ಯೋಜನೆಯಲ್ಲಿ ಏನೆಲ್ಲ ಹೊಸದಾಗಿ ಸೇರ್ಪಡೆಯಾಗಿವೆ ಎಂಬ ಬಗ್ಗೆ ಬಿಎಂಆರ್​​ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಿಳಿಯಲು ಮುಂದೆ ಓದಿ.

ನಮ್ಮ ಮೆಟ್ರೋ ಎರಡನೇ ಹಂತ ಕಾಮಗಾರಿ ವಿಳಂಬದಿಂದ ಹೆಚ್ಚಾದ ವೆಚ್ಚ, 40 ಸಾವಿರ ಕೋಟಿ ರೂ.ಗೆ ಏರಿಕೆ
ನಮ್ಮ ಮೆಟ್ರೋ ಎರಡನೇ ಹಂತ ಕಾಮಗಾರಿ ವಿಳಂಬದಿಂದ ಹೆಚ್ಚಾದ ವೆಚ್ಚ, 40 ಸಾವಿರ ಕೋಟಿ ರೂ.ಗೆ ಏರಿಕೆ
Follow us
Ganapathi Sharma
|

Updated on: Jul 25, 2024 | 8:50 AM

ಬೆಂಗಳೂರು, ಜುಲೈ 25: ಸುಮಾರು 75.06 ಕಿಮೀ ಸಂಚಾರ ವ್ಯಾಪ್ತಿಯ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ವಿಳಬದಿಂದ ಯೋಜನಾ ವೆಚ್ಚ ಸುಮಾರು 40,000 ಕೋಟಿ ರೂಪಾಯಿಗಳಿಗೆ ಏರಿಯಾಗಿದೆ. ಇದು ದಶಕದ ಹಿಂದೆ ಪ್ರಸ್ತಾಪಿಸಲಾದ ಮೂಲ ವೆಚ್ಚದ ಶೇ 52ರಷ್ಟು ಹೆಚ್ಚಳವಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆ (UDD) ಮೂಲಕ ಅನುಮೋದನೆಗಾಗಿ ರಾಜ್ಯ ಹಣಕಾಸು ಇಲಾಖೆಗೆ ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಎರಡನೇ ಹಂತದ ಯೋಜನೆಯ ಕಾಮಗಾರಿಗೆ 2014 ರಲ್ಲಿ 72 ಕಿಮೀಗೆ ಅನುಮೋದನೆ ನೀಡಲಾಗಿತ್ತಿ. 3 ಕಿಮೀ ನಂತರ ಸೇರಿಸಲಾಗಿತ್ತು. ಎರಡನೇ ಹಂತದ ಕಾಮಗಾರಿ 26,405 ಕೋಟಿ ರೂ. ವೆಚ್ಚದಲ್ಲಿ 2019 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. 2021 ರ ವೇಳೆಗೆ, ವೆಚ್ಚವನ್ನು 30,695 ಕೋಟಿ ರೂ.ಗೆ ಪರಿಷ್ಕರಿಸಲಾಯಿತು (ಇದು ಹೊರ ವರ್ತುಲ ರಸ್ತೆ ಮಾರ್ಗ (ಹಂತ-2ಎ) ಮತ್ತು ಕೆಆರ್ ಪುರದಿಂದ ಕೆಐಎ (ಹಂತ-2ಬಿ) ವರೆಗಿನ ವಿಮಾನ ನಿಲ್ದಾಣ ಮಾರ್ಗವನ್ನು ಒಳಗೊಂಡಿಲ್ಲ). ಪರಿಷ್ಕೃತ ಭೂಸ್ವಾಧೀನ ವೆಚ್ಚಗಳು, ಕೆಲವು ಕಿಲೋಮೀಟರ್‌ಗಳ ಸೇರ್ಪಡೆ, ಹಣದುಬ್ಬರ, ವಿಳಂಬಕ್ಕೆ ಕಾರಣವಾದ ಸಾಂಕ್ರಾಮಿಕ ರೋಗಗಳು ಮತ್ತು ಅಂತರರಾಷ್ಟ್ರೀಯ ಕರೆನ್ಸಿಗಳಲ್ಲಿನ ಏರಿಳಿತಗಳು ಹಿಂದಿನ ಅಂದಾಜಿಗಿಂತ ಸುಮಾರು 10,000 ಕೋಟಿ ರೂಪಾಯಿಗಳ ಏರಿಕೆಗೆ ಕಾರಣಗಳಾಗಿವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಎಸ್​ಆರ್ ಉಮಾಶಂಕರ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಬಿಎಂಆರ್‌ಸಿಎಲ್ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭೂಸ್ವಾಧೀನ ವಿಳಂಬವೂ ಸಮಸ್ಯೆಗೆ ಕಾರಣ

ವಿಳಂಬವೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡನೇ ಹಂತದ ಕಾಮಗಾರಿ 2019 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಐದು ವರ್ಷಗಳ ನಂತರ, ಸಂಪೂರ್ಣ ನೆಟ್ವರ್ಕ್ ಇನ್ನೂ ಸಿದ್ಧವಾಗಿಲ್ಲ. ಮೂಲ ಗಡುವಿನ ನಂತರ ಸಾಂಕ್ರಾಮಿಕ ರೋಗವು ಅಪ್ಪಳಿಸಿತು. ಅದಕ್ಕೇ ಬದ್ಧವಾಗಿದ್ದರೆ, ಈ ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತಲೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬವು ಯೋಜನೆಗೆ ಗಣನೀಯವಾಗಿ ಹಿನ್ನಡೆಯನ್ನುಂಟು ಮಾಡಿತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನ ಮಾಲೀಕರಿಗೆ ಶಾಕ್: ಸದ್ಯದಲ್ಲೇ ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಸಾಧ್ಯತೆ

ಎರಡನೇ ಹಂತದಲ್ಲಿ ಪಶ್ಚಿಮದಲ್ಲಿ ರೀಚ್-2 ವಿಸ್ತರಣೆಯು ಕೆಂಗೇರಿಯಲ್ಲಿ ಕೊನೆಗೊಳ್ಳಲಿದ್ದುದನ್ನು ಚಲ್ಲಘಟ್ಟದವರೆಗೆ ವಿಸ್ತರಿಸಲಾಗಿದೆ. ನಾವು ಕಾಡುಗೋಡಿಯಲ್ಲಿ (ವೈಟ್‌ಫೀಲ್ಡ್) ಪೂರ್ವ ಭಾಗದಲ್ಲಿ ಮತ್ತೊಂದು ಡಿಪೋವನ್ನು ಸೇರಿಸಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೋಜಿತಕ್ಕಿಂತ 44 ಹೆಕ್ಟೇರ್ ಭೂಮಿಯನ್ನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಿಂದಲೂ ವೆಚ್ಚ ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ