AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಚರಣೆ: 4 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶಕ್ಕೆ

ಅಮೃತಹಳ್ಳಿ ಪೊಲೀಸರು ಭರ್ಜರಿ ಕಾರ್ಯಚರಣೆ ಮಾಡುವ ಮೂಲಕ ಬೆಂಗಳೂರಿನಲ್ಲಿ 4 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೇರಳ ಮೂಲದ ಏಳ್ವರು ಸೇರಿದಂತೆ ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿದೆ. ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ಇದು ಪ್ರಮುಖ ಕಾರ್ಯಾಚರಣೆಯಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಚರಣೆ: 4 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶಕ್ಕೆ
ಬಂಧಿತರುImage Credit source: tv9 kannada
Shivaprasad B
| Edited By: |

Updated on: Jan 28, 2026 | 3:45 PM

Share

ಬೆಂಗಳೂರು, ಜನವರಿ 28: ಡ್ರಗ್ಸ್​ ಸಾಗಾಟ (drug bust) ಮಾಡುತ್ತಿದ್ದ ಕೇರಳ ಮೂಲದ 7 ಜನರು ಸೇರಿ ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿದೆ. ಆ ಮೂಲಕ ಅಮೃತಹಳ್ಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. 4 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 50 ಗ್ರಾಂ MDMA ಮತ್ತು ಚರಸ್, 500 LSD ಸ್ಟ್ರಿಪ್ಸ್​, 10 ಕೆಜಿ ಗಾಂಜಾ, 2 ಕಾರು, 14 ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿಕೆ ನೀಡಿದ್ದು, ಬೆಂಗಳೂರಿನಲ್ಲಿ 4 ಕೋಟಿ ರೂ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿದೆ. ಜ.19ರ ಮಧ್ಯಾಹ್ನ ಜಕ್ಕೂರು ರೈಲ್ವೆ ಟ್ರ್ಯಾಕ್ ಬಳಿ ಡ್ರಗ್ಸ್​ ಪತ್ತೆಯಾಗಿತ್ತು. ಜ.21ರಂದು ಜಿಕೆವಿಕೆ ಮೈದಾನದಲ್ಲಿ 2 ಕೆಜಿ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ ಎಂದರು.

ಇದನ್ನೂ ಓದಿ: Bengaluru: ಡ್ರಗ್ಸ್​ ದಂಧೆಕೋರರಿಗೆ ಶಾಕ್​; 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​

ಮೈಸೂರು ರಸ್ತೆ ಸ್ಯಾಟ್​ಲೈಟ್​ ನಿಲ್ದಾಣ ಬಳಿ 2 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. 500 ಎಲ್​ಎಸ್​ಡಿ ಸ್ಟ್ರಿಪ್ಸ್​ ವಶಕ್ಕೆ ಪಡೆಯಲಾಗಿದೆ. 10 ಆರೋಪಿಗಳನ್ನು ಬಂಧಿಸಿ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ ಮಾಹಿತಿ ನೀಡಿದ್ದಾರೆ.

3 ಕೋಟಿ ರೂ ಮೌಲ್ಯದ ಡ್ರಗ್ಸ್​​ ಸೀಜ್​

ಇನ್ನು ಇತ್ತೀಚೆಗೆ ನಗರದಲ್ಲಿ ಡ್ರಗ್ಸ್ ಸಪ್ಲೈಗೆ ಸಿದ್ದವಾಗಿದ್ದ 3 ಕೋಟಿ ರೂ ಮೌಲ್ಯದ ಡ್ರಗ್ಸ್​​ ಸೀಜ್​ ಮಾಡಲಾಗಿದ್ದು, ಇಬ್ಬರು ಪೆಡ್ಲರ್​ಗಳನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದರು. ಹೊಸ ವರ್ಷದ ಪಾರ್ಟಿಗಳಿಗೆ ಮಾರಾಟ ಮಾಡಲು ಸಿದ್ಧವಾಗಿದ್ದ 3 ಕೋಟಿ ರೂ. ಮೌಲ್ಯದ 3.2 ಕೆ.ಜಿ. ಎಂಡಿಎಂಎ ಕ್ರಿಸ್ಟಲ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು, ಇಬ್ಬರು ಡ್ರಗ್ಸ್​ ಪೆಡ್ಲರ್‌ಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್

ಈ ಕೋಟ್ಯಂತರ ಮೌಲ್ಯದ ಡ್ರಗ್ಸ್ ಡೀಲ್ ಹಿಂದೆ ನೈಜೀರಿಯಾ ಮೂಲದ ಪ್ರಮುಖ ಪೆಡ್ಲರ್‌ನ ಲಿಂಕ್ ಇರುವುದು ದೃಢಪಟ್ಟಿತ್ತು. ಪ್ರಮುಖ ಆರೋಪಿ ನೈಜೀರಿಯಾ ಮೂಲದ ಪೆಡ್ಲರ್‌ನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ
ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ
ಮಕ್ಕಳ ಮುದ್ದಾದ ಪ್ರಶ್ನೆಗೆ ಗಿಲ್ಲಿಯ ತಮಾಷೆಯ ಉತ್ತರ: ವಿಡಿಯೋ
ಮಕ್ಕಳ ಮುದ್ದಾದ ಪ್ರಶ್ನೆಗೆ ಗಿಲ್ಲಿಯ ತಮಾಷೆಯ ಉತ್ತರ: ವಿಡಿಯೋ
ಬಿಡದಿ ಬಳಿ ಹಳಿತಪ್ಪಿದ ರೈಲು, ತಪ್ಪಿದ ಭಾರಿ ದುರಂತ
ಬಿಡದಿ ಬಳಿ ಹಳಿತಪ್ಪಿದ ರೈಲು, ತಪ್ಪಿದ ಭಾರಿ ದುರಂತ
ಪ್ರೀತಿ, ಮದ್ವೆ ಹೆಸರಲ್ಲಿ ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು?
ಪ್ರೀತಿ, ಮದ್ವೆ ಹೆಸರಲ್ಲಿ ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು?
ಮುಂಬೈ​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ
ಮುಂಬೈ​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ
ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್
ಮನೆಗಾಗಿ ಕಾಯುತ್ತಿದ್ದ ಕೋಗಿಲು ನಿವಾಸಿಗಳಿಗೆ ಬಿಗ್ ಶಾಕ್
ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್
ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್
ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಮೋದಿಯಿಂದ ಅಪ್ಪುಗೆಯ ಸ್ವಾಗತ
CBSE ವಿದ್ಯಾರ್ಥಿಗಳು, ಪೋಷಕರು ನೋಡಲೇಬೇಕಾದ ಸ್ಟೋರಿ ಇದು
CBSE ವಿದ್ಯಾರ್ಥಿಗಳು, ಪೋಷಕರು ನೋಡಲೇಬೇಕಾದ ಸ್ಟೋರಿ ಇದು
ಬೈಕ್​​ ಗುದ್ದಿದ ರಭಸಕ್ಕೆ ಹಾರಿಬಿದ್ದು ಪ್ರಾಣಬಿಟ್ಟ ಯುವತಿ
ಬೈಕ್​​ ಗುದ್ದಿದ ರಭಸಕ್ಕೆ ಹಾರಿಬಿದ್ದು ಪ್ರಾಣಬಿಟ್ಟ ಯುವತಿ