AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ: ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

Bengaluru Mysore Expressway Toll Hike: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್ ದರವನ್ನು NHAI ಮತ್ತೆ ಹೆಚ್ಚಿಸಿದೆ. ಜುಲೈ 21ರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬಂದಿದ್ದು, ಮೂರು ತಿಂಗಳೊಳಗೆ ಎರಡನೇ ಬಾರಿಗೆ ದರ ಏರಿಕೆ ಆಗಿರೋದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಪರಿಷ್ಕೃತ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ: ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತೆ ಏರಿಕೆ
ಪ್ರಸನ್ನ ಹೆಗಡೆ
|

Updated on:Jul 23, 2026 | 5:52 PM

Share

ಮುಖ್ಯಾಂಶಗಳು

  • ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಏರಿಕೆ
  • ಕನಿಮಿಣಿಕೆ, ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ
  • ಮೂರು ತಿಂಗಳೊಳಲ್ಲಿ ಎರಡನೇ ಬಾರಿಗೆ ಪ್ರಯಾಣಿಕರಿಗೆ ಶಾಕ್​​

ಬೆಂಗಳೂರು, ಜುಲೈ 23: ಮೂರು ತಿಂಗಳೊಳಗೆ ಎರಡನೇ ಬಾರಿಗೆ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಟೋಲ್​​ ದರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದ್ದು, ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಾಹನ ಸವಾರರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಿದೆ. ಹೊಸ ದರಗಳು ಜುಲೈ 21ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು, ಎನ್‌ಎಚ್-275ರ ಆರು ಪಥದ ಬೆಂಗಳೂರು–ನಿಡಘಟ್ಟ ಮಾರ್ಗಕ್ಕೆ ಅನ್ವಯವಾಗಲಿವೆ. 2023ರಲ್ಲಿ ಎಕ್ಸ್‌ಪ್ರೆಸ್‌ವೇ ಆರಂಭವಾದ ಬಳಿಕ ಟೋಲ್ ದರಗಳು ಒಟ್ಟಾರೆ ಸುಮಾರು ಶೇ.37ರಷ್ಟು ಏರಿಕೆಯಾಗಿದೆ.

ಹೊಸ ಟೋಲ್ ದರದ ಮಾಹಿತಿ

  • ಕಾರು, ಜೀಪು, ವ್ಯಾನ್ ಹಾಗೂ ಇತರೆ ಲಘು ವಾಹನಗಳು- ಏಕಮುಖ ಪ್ರಯಾಣ: ₹185 (ಹಿಂದಿನ ದರ ₹180, ಮಾರ್ಚ್‌ನಲ್ಲಿ ₹175, 2023ರಲ್ಲಿ ₹135), ಒಂದೇ ದಿನದ ಹಿಂದಿರುಗುವ ಪ್ರಯಾಣ: ₹275, ಮಾಸಿಕ (50 ಪ್ರಯಾಣ) ಪಾಸ್: ₹6,100 (ಹಿಂದಿನ ದರ ₹5,940)
  • ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಸ್ಥಳೀಯ ಮಾಸಿಕ ಪಾಸ್ ₹360 ಯಥಾಸ್ಥಿತಿ
  • ಲಘು ವಾಣಿಜ್ಯ ವಾಹನಗಳು, ಮಿನಿಬಸ್‌, ಲಘು ಸರಕು ವಾಹನಗಳು: ₹295
  • ಎರಡು ಅಕ್ಷಗಳ ಲಾರಿ ಮತ್ತು ಬಸ್‌ಗಳು: ₹620
  • ಮೂರು ಅಕ್ಷಗಳ ವಾಣಿಜ್ಯ ವಾಹನಗಳು: ₹675
  • ನಾಲ್ಕರಿಂದ ಆರು ಅಕ್ಷಗಳ ಭಾರೀ ವಾಹನಗಳು: ₹970
  • ಏಳು ಅಥವಾ ಹೆಚ್ಚು ಅಕ್ಷಗಳ ವಾಹನಗಳು: ₹1,180

ಇದನ್ನೂ ಓದಿ: ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆಗೆ ಕೇಂದ್ರ ಗ್ರೀನ್ ಸಿಗ್ನಲ್; ತಿರುಪತಿ-ಚೆನ್ನೈ ಪ್ರಯಾಣಕ್ಕೆ ಇನ್ನಷ್ಟು ಅನುಕೂಲ

ದರ ಏರಿಕೆಗೆ ಕಾರಣವೇನು?

2023ರ ಜನವರಿಯಲ್ಲಿ ಹೊರಡಿಸಿದ್ದ ಟೋಲ್ ಗಜೆಟ್ ಅಧಿಸೂಚನೆ ಹಾಗೂ ಜುಲೈ 18ರಂದು ನೀಡಲಾದ ಹೊಸ ಅನುಮೋದನೆಯ ಆಧಾರದ ಮೇಲೆ 2026–27ನೇ ಹಣಕಾಸು ವರ್ಷದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ. ಬೆಂಗಳೂರು–ನಿಡಘಟ್ಟ ಮಾರ್ಗವು ಹೈಬ್ರಿಡ್ ಅನ್ಯುಟಿ ಮಾದರಿ (Hybrid Annuity Model) ಅಡಿಯಲ್ಲಿ ನಿರ್ಮಾಣವಾಗಿದ್ದು, ಈ ಮಾದರಿಯಲ್ಲಿ ಯೋಜನೆ ವೆಚ್ಚವನ್ನು ಟೋಲ್ ಸಂಗ್ರಹ ಮತ್ತು ಸರ್ಕಾರದ ಅನ್ಯುಟಿ ಪಾವತಿಗಳ ಮೂಲಕ ಮರುಪಡೆಯಲಾಗುತ್ತದೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:31 pm, Thu, 23 July 26

Follow Us
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ