ಗುಡ್ ನ್ಯೂಸ್: ಹೊಸ ವರ್ಷದ ಸಂಭ್ರಮಾಚರಣೆಗೆ ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ

2024ಕ್ಕೆ ವಿದಾಯ ಹೇಳಿ 2025 ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ನ್ಯೂ ಇಯರ್​ ಸಂಭ್ರಮ ಜೋರಾಗಿರಲಿದ್ದ, ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ಸ್ಟ್ರೀಟ್​ನಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ. ನೇರಳೆ, ಹಸಿರು ಮಾರ್ಗ ಮೆಟ್ರೋ ರೈಲು ಸೇವೆಗಳ ಸಮಯ ವಿಸ್ತರಿಸಲಾಗಿದೆ.

ಗುಡ್ ನ್ಯೂಸ್: ಹೊಸ ವರ್ಷದ ಸಂಭ್ರಮಾಚರಣೆಗೆ ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ
ನಮ್ಮ ಮೆಟ್ರೋ ರೈಲು (ಸಾಂದರ್ಭಿಕ ಚಿತ್ರ)
Follow us
Kiran Surya
| Updated By: ರಮೇಶ್ ಬಿ. ಜವಳಗೇರಾ

Updated on:Dec 27, 2024 | 6:35 PM

ಬೆಂಗಳೂರು, (ಡಿಸೆಂಬರ್ 27): ಹೊಸ ವರ್ಷದ (New Year 2024) ಪಾರ್ಟಿ ಮೂಡ್‌ನಲ್ಲಿರುವವರಿಗೆ ‘ನಮ್ಮ ಮೆಟ್ರೋ’ (Namma Metro) ಗುಡ್‌ ನ್ಯೂಸ್‌ ಕೊಟ್ಟಿದೆ.  2024 ಕಳೆದ 2025ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವೇಳೆ ಬೆಂಗಳೂರಿನ ಹಲವೆಡೆ ಸಂಭ್ರಮಾಚರಣೆಗಳು ನಡೆಯುತ್ತವೆ. ಅದರಲ್ಲೂ ಬ್ರಿಗೇಡ್ ರೋಡ್​ನಲ್ಲಿ ಹೊಸ ವರ್ಷದ ಆಚರಣೆಗೆ ಜನಜಾತ್ರೆಯೇ ತುಂಬಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್) ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 31 ರ ಮಧ್ಯರಾತ್ರಿಯಿಂದ ಮಧ್ಯರಾತ್ರಿ 2:15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಲಾಗಿದೆ.

ರಾತ್ರಿ ಇಡೀ ಪಾರ್ಟಿ ಮಾಡಿ ಮನೆ ಸೇರಿಕೊಳ್ಳಲು ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ರಾತ್ರಿ 11ರಿಂದ 10 ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್​​ನಿಂದ ಕೊನೆ ರೈಲು ಹೊರಡಲಿದೆ. ಆದ್ರೆ, ಮೆಜೆಸ್ಟಿಕ್​ನಿಂದ ಮುಂಜಾನೆ 2.40ಕ್ಕೆ ಕೊನೆ ರೈಲು ಸಂಚರಿಸಲಿದೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜನವರಿಯಲ್ಲಿ ನಮ್ಮ ಮೆಟ್ರೋಗೆ ಬರಲಿವೆ ಎರಡು ಹೊಸ ರೈಲು

ಪೇಪರ್ ಟಿಕೆಟ್ ವ್ಯವಸ್ಥೆ

ಇನ್ನು ಬಿಗ್ರೇಡ್ ರೋಡ್​ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿಕೊಂಡು ಎಲ್ಲರೂ ಒಟ್ಟೊಟ್ಟಿಗೆ ತಮ್ಮ ತಮ್ಮ ವಾಸಸ್ಥಳಕ್ಕೆ ತೆರಳು ಎಂಜಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಭಾರೀ ಜನಸಂದಣಿಯಾಗಲಿದೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು    ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರ ಬಂದ್ ಆಗಲಿವೆ.  ಹೀಗಾಗಿ ಪ್ರಯಾಣಿಕರಿಗೆ  ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಮೆಟ್ರೋ ಸೇವೆ ಲಭ್ಯವಾಗಲಿದೆ.

ಬ್ರಿಗೇಡ್​ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿಕೊಂಡು ಮೆಟ್ರೋ ಮೂಲಕ ಹೋಗಬೇಕಿರುವವರು ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಹೋಗಬೇಕು. ಬಳಿಕ ಮೆಜೆಸ್ಟಿಕ್​ನಲ್ಲಿ ಮೆಟ್ರೋ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಮುಂಗಡವಾಗಿ ಅಂದು ರಿಟರ್ನ್ ಹೋಗಲು ಐವತ್ತು ರುಪಾಯಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ಟಿಕೆಟ್ ಪಡೆದುಕೊಳ್ಳಲು ನೂಕುನುಗ್ಗಲು ಆಗುವುದರಿಂದ ಈ ಪೇಪರ್ ಟಿಕೆಟ್​ ವ್ಯವಸ್ಥೆ ಮಾಡಲಾಗಿದೆ.  ಪೇಪರ್ ಟಿಕೆಟ್ ಬೇಗ ಬೇಗ ಹರಿದು ಕೊಡಬಹುದು. ಯಾವುದೇ ಸ್ಕ್ಯಾನ್ ಮಾಡುವ ತಾಪತ್ರಯ ಇರುವುದಿಲ್ಲ. ಇದರಿಂದ ಜನಸಂದಣೆಯೂ ಆಗುವುದಿಲ್ಲ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:17 pm, Fri, 27 December 24