Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ಪವರ್ ಕಟ್, ಏರಿಯಾ, ಸಮಯದ ಮಾಹಿತಿ ಇಲ್ಲಿದೆ

ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಯ ಕಾರಣ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮತ್ತು ಬೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. ಆ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ. ಎಲ್ಲೆಲ್ಲಿ ಪವರ್ ಕಟ್ ಇರುತ್ತದೆ, ಎಷ್ಟು ಗಂಟೆಯ ವರೆಗೆ ಇರಲಿದೆ ಎಂಬ ವಿವರ ಇಲ್ಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ಪವರ್ ಕಟ್, ಏರಿಯಾ, ಸಮಯದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
|

Updated on: Aug 29, 2024 | 6:36 AM

ಬೆಂಗಳೂರು, ಆಗಸ್ಟ್ 29: ದುರಸ್ತಿ ಕಾಮಗಾರಿಯ ಕಾರಣ ಬೆಂಗಳೂರಿನ ಹಲವು ಪ್ರದೇಶಗಳೂ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ / ಪವರ್ ಕಟ್ ಇರಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​​ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೈನ್‌ ದುರಸ್ತಿ ನಿರ್ವಹಣಾ ಕಾಮಗಾರಿ ಸಲುವಾಗಿ ಗುರುವಾರ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ ಎಂದು ಪ್ರದೇಶಗಳ ವಿವರ ಸಮೇತ ಬೆಸ್ಕಾಂ ಮಾಹಿತಿ ನೀಡಿದೆ.

ಬೆಸ್ಕಾಂ ಎಕ್ಸ್ ಸಂದೇಶ

ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ. ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಅಥವಾ http://bescom.karnataka.gov.in ಸಂಪರ್ಕಿಸಿ ಎಂದು ಬೆಸ್ಕಾಂ ಗ್ರಾಹಕರನ್ನು ಕೋರಿದೆ.

ಎಲ್ಲೆಲ್ಲಿ ಪವರ್ ಕಟ್?

ಬೆಂಗಳೂರಿನಲ್ಲಿ ಹೆಚ್​​ಎಸ್​​ಆರ್​​ ವಿಭಾಗದ ಲಕ್ಷ್ಮೀ ಲೇಯೌಟ್, ಸೌತ್ ಸಿಟಿ ಅಪಾರ್ಟ್​​ಮೆಂಟ್ಸ್, ಕಮ್ಮನಹಳ್ಳಿ, ಶಾಂತಿನಿಕೇತನ, ಎಸ್​12 ಮತ್ತು ಎಸ್​ 14 ಉಪವಿಭಾಗಗಳ ಸುತ್ತಲಿನ ಪ್ರದೇಶಗಳಲ್ಲಿ ವಿ್ಯುತ್ ಕಡಿತ ಇರಲಿದೆ.

ಕೋರಮಂಗಲ ವಿಭಾಗದ ಗುಂಜೂರು ಪಾಳ್ಯ, ಗುರಪ್ಪ ರೆಡ್ಡಿ ಲೇಯೌಟ್, ಎಎಸ್ ಪಾಳ್ಯ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಎಷ್ಟು ಗಂಟೆಯಿಂದ ಎಷ್ಟು ಗಂಟೆಯ ವರೆಗೆ ಪವರ್ ಕಟ್?

ಹೆಚ್​​ಎಸ್​​ಆರ್​​ ವಿಭಾಗ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 3ರ ವರೆಗೆ ಹಾಗೂ ಕೋರಮಂಗಲದ ಗುಂಜೂರು ಪಾಳ್ಯದಲ್ಲಿ ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಮತ್ತು ಗುರಪ್ಪ ರೆಡ್ಡಿ ಲೇಯೌಟ್, ಎಎಸ್ ಪಾಳ್ಯ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 3ರ ವರೆಗೆ ಪವರ್ ಕಟ್ ಇರಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಕಳೆದುಕೊಂಡ ವಸ್ತುಗಳನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಉಳಿದಂತೆ ಬೆಸ್ಕಾಂ ವ್ಯಾಪ್ತಿಯ ರಾಮನಗರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ಚಿತ್ರದುರ್ಗ ಹಾಗೂ ತುಮಕೂರು ವ್ಯಾಪ್ತಿಯಲ್ಲಿಯೂ ಪವರ್ ಕಟ್ ಇರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ