AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್: ಒಂದೇ ವಾರದಲ್ಲಿ ಕೋಟ್ಯಾಂತರ ರೂ. ಸಂಗ್ರಹ

ಬೆಂಗಳೂರು ಟ್ರಾಫಿಕ್ ಪೊಲೀಸರು ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಬಾಕಿ ಟ್ರಾಫಿಕ್ ದಂಡಗಳಿಗೆ 50% ರಿಯಾಯಿತಿ ಘೋಷಿಸಿದ್ದು, ಈ ಯೋಜನೆಗೆ ವಾಹನ ಸವಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಹಳೇ ಪ್ರಕರಣಗಳನ್ನ ಕ್ಲಿಯರ್ ಮಾಡಿಕೊಳ್ಳಲು ವಾಹನ ಮಾಲೀಕರು ಮುಗಿಬಿದ್ದು ದಂಡ ಪಾವತಿ ಮಾಡುತ್ತಿದ್ದು, ಒಂದೇ ವಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹರಿದುಬಂದಿದೆ.

ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್: ಒಂದೇ ವಾರದಲ್ಲಿ ಕೋಟ್ಯಾಂತರ ರೂ. ಸಂಗ್ರಹ
ಪ್ರಾತಿನಿಧಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: Aug 30, 2025 | 3:00 PM

Share

ಬೆಂಗಳೂರು, (ಆಗಸ್ಟ್ 30):ಸಂಚಾರ ನಿಯಮ ಉಲ್ಲಂಘನೆ (Traffic Rules Break) ಮಾಡಿ ದಂಡ ಕಟ್ಟದೇ (Traffic Fine) ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿದ್ದು, ವಾಹನ ಮಾಲೀಕರು ಈ ಆಫರ್ ಅನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂಕರವೆಂಬಂತೆ ಬೆಂಗಳೂರಿನಲ್ಲಿ (Bengaluru) ಒಂದೇ ವಾರದಲ್ಲಿ ಬರೋಬ್ಬರಿ 21 ಕೋಟಿ 86 ಸಾವಿರ ರೂ. ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ 50% ಡಿಸ್ಕೌಂಟ್ ಆಫರ್​​ ಶುರುವಾದ ಒಂದು ವಾರದೊಳಗೆ ಅಂದ್ರೆ ಆಗಸ್ಟ್ 23ರಿಂದ ಆಗಸ್ಟ್ 29ರವರೆಗೆ 7,43,160 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವರಿಸಿದ್ದಾರೆ.

ಆಗಸ್ಟ್ 21ರಂದು ಟ್ರಾಫಿಕ್ ಫೈನ್‌ಗೆ 50% ಡಿಸ್ಕೌಂಟ್ ಆದೇಶ ನೀಡಲಾಗಿತ್ತು. ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕಳೆದ ಆರು ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.

ಇದನ್ನೂ ಓದಿ: ಶೇ 50ರ ರಿಯಾಯಿತಿಯೊಂದಿಗೆ ಟ್ರಾಫಿಕ್ ಫೈನ್ ಆನ್​ಲೈನ್, ಆಫ್​ಲೈನ್ ಮೂಲಕ ಪಾವತಿಸುವ ಸುಲಭ ವಿಧಾನ ಇಲ್ಲಿದೆ

ಬೆಂಗಳೂರು (Bengaluru) ವ್ಯಾಪ್ತಿಗೆ ಮಾತ್ರ ಈ ಡಿಸ್ಕೌಂಡ್ ನೀಡಿದ್ದು, ವಾಹನ ಸವಾರರ ರಿಯಾಕ್ಷನ್ ನೋಡಿಕೊಂಡು ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕೇ ಬೇಡವೇ ಅನ್ನೋದು ತೀರ್ಮಾನ ಮಾಡುವ ಸಾಧ್ಯತೆ ಇದೆ. ಇನ್ನೂ ಹತ್ತು ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶವಿದೆ. 2019ರಿಂದ ಸಂಗ್ರಹವಾಗಿರುವ ಸುಮಾರು 3 ಕೋಟಿ ಬಾಕಿ ಕೇಸ್‌ಗಳ ಪೈಕಿ ಈ ಸಂಖ್ಯೆ ಗಮನಾರ್ಹವಾಗಿದೆ. ಒಟ್ಟು 1,100 ಕೋಟಿ ಬಾಕಿ ದಂಡವಿದೆ ಎಂದು ಮೂಲಗಳು ತಿಳಿದುಬಂದಿದ್ದು, ಸುಮಾರು 50 ಕೋಟಿಯಷ್ಟು ದಂಡ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ
Image
ಬೈಕ್​ ಬಾಳುವ ಬೆಲೆಯಷ್ಟೇ ಶೇ 50 ಆಫರ್​ನಲ್ಲಿ ದಂಡ ಕಟ್ಟಿದ ಮಾಲೀಕ
Image
ಹೆಬ್ಬಾಳದಲ್ಲಿ ತಪ್ಪುತ್ತಿಲ್ಲ ಟ್ರಾಫಿಕ್ ಗೋಳು! ಡ್ರೋನ್ ವಿಡಿಯೋ ವೈರಲ್
Image
ಟ್ರಾಫಿಕ್ ಫೈನ್ ಶೇ 50ರ ರಿಯಾಯಿತಿಯಿಂದ ಅಪಾಯವೆಂದ ತಜ್ಞರು: ಕಾರಣ ಏನು?
Image
ಟ್ರಾಫಿಕ್ ಫೈನ್ ರಿಯಾಯಿತಿ: ಸುಲಭವಾಗಿ ಪಾವತಿಸೋದು ಹೇಗೆಂದು ಇಲ್ಲಿದೆ ಮಾಹಿತಿ

ಕರ್ನಾಟಕ ಸರ್ಕಾರವು ಆಗಸ್ಟ್ 21, 2025 ರಂದು ಈ 50% ರಿಯಾಯಿತಿ ಯೋಜನೆಯನ್ನು ಘೋಷಿಸಲಾಗಿತ್ತು. ಇದು ಫೆಬ್ರವರಿ 11, 2023ಕ್ಕಿಂತ ಮೊದಲಿನ ಎಲ್ಲಾ ಬಾಕಿ ಇ-ಚಲನ್‌ಗಳಿಗೆ ಅನ್ವಯಿಸುತ್ತದೆ. ಈ ರಿಯಾಯಿತಿಯು ವಾಹನ ಮಾಲೀಕರಿಗೆ ತಮ್ಮ ದಂಡವನ್ನು ಅರ್ಧದಷ್ಟು ಬೆಲೆಗೆ ಪಾವತಿಸಲು ಅವಕಾಶ ನೀಡುತ್ತದೆ. ಉದಾಹರಣೆಗೆ 1000 ದಂಡವಿದ್ದರೆ, ಕೇವಲ 500 ಪಾವತಿಸಿದರೆ ಸಾಕು. ಈ ಯೋಜನೆಯು ಸೆಪ್ಟೆಂಬರ್ 12, 2025ರವರೆಗೆ ಮಾತ್ರ ಲಭ್ಯವಿದ್ದು, ಆನಂತರ ಪೂರ್ಣ ದಂಡವನ್ನು ಪಾವತಿಸಬೇಕಾಗುತ್ತದೆ.

ಈ ರಿಯಾಯಿತಿ ಯೋಜನೆಗೆ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿದ್ದು, ಇದೇ ಸಿಕ್ಕಿದ್ದೇ ಚಾನ್ಸ್​ ಎಂದು ಉತ್ಸಾಹದಿಂದ ಹಳೇ ಕೇಸಿನ ಬಾಕಿ ದಂಡವನ್ನು ಪಾವತಿಸುತ್ತಿದ್ದಾರೆ. ಮೊದಲ ದಿನವೇ (ಆಗಸ್ಟ್ 23) 1,48,747 ಕೇಸ್‌ಗಳನ್ನು ತೆರವುಗೊಳಿಸಲಾಗಿದ್ದು, ಇದಿರಂದ 4.18 ಕೋಟಿ ರೂ. ದಂಡದ ಹಣ ಸಂಗ್ರಹವಾಗಿತ್ತು.

ಆಗಸ್ಟ್ 28ರ ವೇಳೆಗೆ 6.7 ಲಕ್ಷ ಕೇಸ್‌ಗಳಿಂದ 18.9 ಕೋಟಿ ರೂ. ಸಂಗ್ರಹವಾಗಿತ್ತು. ಈಗ ಒಂದು ವಾರದಲ್ಲಿ ಒಟ್ಟು 21.86 ಕೋಟಿ ವಸೂಲಾಗಿದ್ದು, 7,43,160 ಕೇಸ್‌ಗಳು ತೆರವುಗೊಂಡಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ