AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಚ್ಚಾಯ್ತು ಹಾವುಗಳ ಸಂಖ್ಯೆ! ದಿನಕ್ಕೆ 100 ಕರೆಗಳು ಬರುತ್ತಿವೆ ಎಂದ ಉರಗ ರಕ್ಷಕರು

ಬೆಂಗಳೂರಿನಲ್ಲಿ ಜೂನ್‌ನಿಂದ ಆಗಸ್ಟ್‌ವರೆಗಿನ ಹಾವುಗಳ ಸಂತಾನೋತ್ಪತ್ತಿ ಅವಧಿ ಆರಂಭವಾಗಿದ್ದು, ನಾಗರಹಾವು ಸೇರಿದಂತೆ ವಿಷಪೂರಿತ ಉರಗಗಳ ಭೀತಿ ಹೆಚ್ಚಾಗಿದೆ. ನಗರದ ಐದು ವಲಯಗಳಿಗೆ ಕೇವಲ ಏಳು ಜನ ರಕ್ಷಕರಿದ್ದು, ದಿನಕ್ಕೆ ಬರುವ ನೂರಕ್ಕೂ ಹೆಚ್ಚು ಕರೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಆರು ತಿಂಗಳಿನಿಂದ ಗೌರವಧನ ಪಾವತಿಯಾಗದ ಕಾರಣ ಉರಗ ರಕ್ಷಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಾಯ್ತು ಹಾವುಗಳ ಸಂಖ್ಯೆ! ದಿನಕ್ಕೆ 100 ಕರೆಗಳು ಬರುತ್ತಿವೆ ಎಂದ ಉರಗ ರಕ್ಷಕರು
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Jul 01, 2026 | 11:45 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಹಾವುಗಳ ಸಂತಾನೋತ್ಪತ್ತಿ ಸಮಯ ಆರಂಭವಾಗಿದ್ದು ಉರಗಗಳ ಕಾಟ ಹೆಚ್ಚಾಗುತ್ತಿದೆ.
  • ನಗರದ ಐದು ವಲಯಗಳ ರಕ್ಷಣೆಗೆ ಕೇವಲ ಏಳು ಜನ ರಕ್ಷಕರಿದ್ದಾರೆ.
  • ಗೌರವಧನ ಸಿಗದೆ ಮತ್ತು ಸಿಬ್ಬಂದಿ ಕೊರತೆಯಿಂದ ಉರಗ ರಕ್ಷಕರು ಪರದಾಡುತ್ತಿದ್ದಾರೆ.

ಬೆಂಗಳೂರು, ಜುಲೈ 01: ಜೂನ್​ನಿಂದ ಆಗಸ್ಟ್​ವರೆಗಿನ ಅವಧಿಯು ಹಾವುಗಳ (Snakes) ಸಂತಾನೋತ್ಪತ್ತಿ ಮತ್ತು ಮೊಟ್ಟೆಯೊಡೆದು ಮರಿ ಹೊರಬರುವ (Hatching Season) ಸಮಯವಾಗಿದೆ. ಈ ಸಮಯದಲ್ಲಿ ಮನೆಗಳ ಒಳಗೆ, ಸುತ್ತಮುತ್ತ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಬೆಂಗಳೂರಿನಲ್ಲೂ ಹಾವುಗಳ ಸಂತತಿ ಹೆಚ್ಚಾಗಿದ್ದು, ಉರಗ ರಕ್ಷಕರು ಪರದಾಡುವಂತಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಲಯಗಳಿಗೆ ಕೇವಲ 7 ಮಂದಿ ಉರಗ ರಕ್ಷಕರಿದ್ದು, ಸಾರ್ವಜನಿಕರಿಂದ ದಿನಕ್ಕೆ ಬರುವ 100ಕ್ಕೂ ಹೆಚ್ಚು ಕರೆಗಳಲ್ಲಿ (Rescue calls) ಕೇವಲ 10-15 ಕರೆಗಳಿಗೆ ಮಾತ್ರ ಸ್ಪಂದಿಸಲು ಸಾಧ್ಯವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

5 ವಲಯಗಳಿಗೆ ಕೇವಲ 7 ರಕ್ಷಕರು: ಹೆಚ್ಚಿದ ಆತಂಕ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ವಲಯಗಳಿಗೆ (City Corporations) ಕೇವಲ 7 ಜನ ಹಾವು ರಕ್ಷಕರಿದ್ದಾರೆ. ನಿಯಮಾವಳಿಗಳ ಪ್ರಕಾರ ಪ್ರತಿ ವಲಯಕ್ಕೆ ಕನಿಷ್ಠ ನಾಲ್ಕು ಉರಗ ರಕ್ಷಕರಿರಬೇಕು. ಆದರೆ ಪ್ರಸ್ತುತ ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ತಲಾ ಇಬ್ಬರು ಹಾಗೂ ಪೂರ್ವ, ಉತ್ತರ ಮತ್ತು ಕೇಂದ್ರ ವಲಯಗಳಲ್ಲಿ ತಲಾ ಒಬ್ಬರೇ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಒಬ್ಬ ರಕ್ಷಕ ದಿನಕ್ಕೆ ಗರಿಷ್ಠ 10 ರಿಂದ 15 ಕರೆಗಳನ್ನು ಮಾತ್ರ ನಿರ್ವಹಿಸಲು ಸಾಧ್ಯ. ಉಳಿದ 80ಕ್ಕೂ ಹೆಚ್ಚು ಕರೆಗಳಿಗೆ ಯಾರೂ ಹೋಗದ ಕಾರಣ, ಸಾರ್ವಜನಿಕರು ಭಯದಿಂದ ಹಾವುಗಳನ್ನು ಕೊಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಿರಿಯ ವನ್ಯಜೀವಿ ವಾರ್ಡನ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಷಪೂರಿತ ಹಾವುಗಳ ಭೀತಿ

ನಗರದಲ್ಲಿ ನಾಗರಹಾವು (Spectacled Cobra), ಕಟ್ಟುಹಾವು (Common Krait) ಮತ್ತು ಮಂಡಲದ ಹಾವುಗಳು (Russell’s Viper) ಹೆಚ್ಚಾಗಿ ಕಂಡುಬರುತ್ತಿದ್ದು, ಇವು ತೀರಾ ವಿಷಪೂರಿತವಾಗಿವೆ. ಹೊಸದಾಗಿ ಹುಟ್ಟಿದ ನಾಗರಹಾವಿನ ಸಣ್ಣ ಮರಿಯ ವಿಷವೂ ಸಹ ಕನಿಷ್ಠ 10 ಜನರನ್ನು ಕೊಲ್ಲುವಷ್ಟು ತೀವ್ರವಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!

ಮತ್ತೊಂದೆಡೆ, ನಿರಂತರವಾಗಿ ಜೀವದ ಹಂಗು ತೊರೆದು ಕೆಲಸ ಮಾಡುವ ಜಿಬಿಎ ವನ್ಯಜೀವಿ ರಕ್ಷಕರಿಗೆ ಕಳೆದ 6 ತಿಂಗಳಿನಿಂದ 18,000 ರೂಪಾಯಿಗಳ ಗೌರವಧನ ಪಾವತಿಯಾಗಿಲ್ಲ. ಗೌರವಧನವನ್ನು 35,000 ರೂಪಾಯಿಗೆ ಹೆಚ್ಚಿಸುವಂತೆ ಸಲ್ಲಿಕೆಯಾಗಿರುವ ಪ್ರಸ್ತಾವನೆಯೂ ಧೂಳು ಹಿಡಿಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಗಳೂರಿನಲ್ಲಿ ಮೇಲ್ಛಾವಣಿ ಕುಸಿತ: ಬಚಾವಾದವರು ಹೇಳಿದ್ದೇನು?
ಮಂಗಳೂರಿನಲ್ಲಿ ಮೇಲ್ಛಾವಣಿ ಕುಸಿತ: ಬಚಾವಾದವರು ಹೇಳಿದ್ದೇನು?
3-4 ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ
3-4 ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ