AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್!

Namma Metro Fare Hike: ಈ ವರ್ಷ ಫೆಬ್ರವರಿಯಲ್ಲಿ 5% ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್​​ಸಿಎಲ್​​ ಮುಂದಾಗಿತ್ತು. ಆದರೆ ಪ್ರಯಾಣಿಕರಿಂದ ಆಕ್ರೋಶ ಬೆನ್ನಲ್ಲೇ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಟಿಕೆಟ್ ದರ ಏರಿಕೆ ಮಾಡಲು ನಮ್ಮ ಮೆಟ್ರೋ ಸಿದ್ಧತೆ ನಡೆಸಿದೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್!
ನಮ್ಮ ಮೆಟ್ರೋImage Credit source: thehindu.com
ಕಿರಣ್​ ಸೂರ್ಯ
| Edited By: |

Updated on: Jul 23, 2026 | 9:55 PM

Share

ಬೆಂಗಳೂರು, ಜುಲೈ 23: ದೇಶದಲ್ಲೇ ಅತ್ಯಂತ ದುಬಾರಿ ಸಾರಿಗೆ ಎನಿಸಿಕೊಂಡಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಜಾರಿಯಾಗಬೇಕಿದ್ದ ಶೇಕಡಾ 5ರಷ್ಟು ದರ ಏರಿಕೆಯನ್ನು ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತಾದರೂ, ಇದೀಗ ಹೊಸ ಸೂತ್ರದಡಿ ದರ ಹೆಚ್ಚಿಸಲು ಶಿಫಾರಸ್ಸು ಮಾಡಿರುವುದು ಪ್ರಯಾಣಿಕರು ಕಂಗಾಲಾಗುವಂತೆ ಮಾಡಿದೆ.

2025ರ ಫೆಬ್ರವರಿ 9 ರಂದು ಬಿಎಂಆರ್‌ಸಿಎಲ್ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 71 ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ಆಕ್ರೋಶದ ಬಳಿಕ ದರವನ್ನು ಶೇಕಡಾ 5ರಷ್ಟು ಕಡಿಮೆ ಮಾಡಲಾಗಿತ್ತು. ದರ ನಿಗದಿ ಸಮಿತಿಯು (FFC) ಪ್ರತಿವರ್ಷ ಫೆಬ್ರವರಿ 9ರಂದು ಶೇ 5ರಷ್ಟು ವಾರ್ಷಿಕ ದರ ಏರಿಕೆ ಮಾಡಬಹುದು ಎಂದು ಶಿಫಾರಸ್ಸು ಮಾಡಿತ್ತು. ಆದರೆ, 2026ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಈ 5% ಏರಿಕೆಯನ್ನು ಸಾರ್ವಜನಿಕರ ವಿರೋಧದಿಂದಾಗಿ ತಡೆಹಿಡಿಯಲಾಗಿತ್ತು. ಇದೀಗ ಪ್ರತಿವರ್ಷ 5% ಏರಿಕೆ ಮಾಡುವ ಬದಲು, ಪ್ರತಿ 3 ವರ್ಷಕ್ಕೊಮ್ಮೆ ದರ ಏರಿಕೆ ಮಾಡಲು ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

ಮೆಟ್ರೋ ಪ್ರಯಾಣಿಕರು ಅಸಮಾಧಾನ 

ಇನ್ನು ಈ ಬಗ್ಗೆ ಮಾತಾನಾಡಿದ ಮೆಟ್ರೋ ಪ್ರಯಾಣಿಕ ಪ್ರಫುಲ್​​, ‘ನಾನು ಬೊಮ್ಮಸಂದ್ರದಿಂದ ಲಾಲ್ ಬಾಗ್​ಗೆ ಕಾಲೇಜಿಗೆ ಬರುತ್ತೇನೆ. ಒಂದೂ ವಾರಕ್ಕೆ ಒಂದುವರೆ ಸಾವಿರ ರೂ ಬೇಕು. ದರ ಏರಿಕೆ ಆದರೆ ಒಂದು ವಾರಕ್ಕೆ 2 ಸಾವಿರ ರೂ ಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

12% ರಷ್ಟು ಟಿಕೆಟ್ ದರ ಏರಿಕೆ?

ದರ ನಿಗದಿ ಸಮಿತಿಯು ಪ್ರತಿವರ್ಷ 5% ರಷ್ಟು ಟಿಕೆಟ್ ದರ ಏರಿಕೆ ಮಾಡುವ ಬದಲು, ಪ್ರತಿ ಮೂರು ವರ್ಷಕ್ಕೊಮ್ಮೆ 12% ರಷ್ಟು ದರ ಏರಿಕೆ ಮಾಡಲು ಸೂಚನೆ ನೀಡಿದೆ. 2026 ಫೆಬ್ರುವರಿ 5% ರಷ್ಟು ದರ ಏರಿಕೆ ಮಾಡಬೇಕಿತ್ತು, ಆದರೆ ಬಿಎಂಆರ್​ಸಿಎಲ್​ ಟಿಕೆಟ್ ದರ ಏರಿಕೆ ಮಾಡಿಲ್ಲ. 2028 ಫೆಬ್ರವರಿ 12% ರಷ್ಟು ಟಿಕೆಟ್ ದರ ಏರಿಕೆ ಆಗಬಹುದು ಎನ್ನಲಾಗುತ್ತಿದೆ.

ಮತ್ತೆ ದರ ಏರಿಕೆ ಬೇಡ ಎಂದ ಪ್ರಯಾಣಿಕರು

‘ಸದ್ಯ ಮೆಟ್ರೋದಲ್ಲಿ ಕನಿಷ್ಠ 10 ರೂ, ಗರಿಷ್ಟ 90 ರೂ ದರ ಇದೆ. 12% ರಷ್ಟು ಟಿಕೆಟ್ ದರ ಏರಿಕೆ ಆದರೆ ಕನಿಷ್ಠ 13ರೂ, ಗರಿಷ್ಠ 105 ರೂ ದರ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮತ್ತೆ ದರ ಏರಿಕೆ ಮಾಡುವುದನ್ನು ನಾನು ಒಪ್ಪುವುದಿಲ್ಲ’ ಎಂದು ಮೆಟ್ರೋ ಪ್ರಯಾಣಿಕರಾದ ಸುರೇಖಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ

ಒಟ್ಟಿನಲ್ಲಿ ಈಗಾಗಲೇ ದೇಶದಲ್ಲೇ ದುಬಾರಿ ಮೆಟ್ರೋ ಅನ್ನಿಸಿಕೊಂಡಿರುವ ನಮ್ಮ ಮೆಟ್ರೋ, ಮತ್ತೆ ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us