AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ಬೆಂಗಳೂರಲ್ಲಿ ಚಳಿಯ ಜೊತೆ ಮಂಜು ಕವಿದ ವಾತಾವರಣ; ರಾಜ್ಯದೆಲ್ಲೆಡೆ ಒಣ ಹವೆ

Karnataka Weather: ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣವಿದ್ದು, ಕನಿಷ್ಠ 15°C ತಾಪಮಾನ ದಾಖಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಬೆಚ್ಚನೆಯ ಉಡುಪು ಧರಿಸಲು ಮತ್ತು ಸಮತೋಲಿತ ಆಹಾರ ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರಲ್ಲಿ ಚಳಿಯ ಜೊತೆ ಮಂಜು ಕವಿದ ವಾತಾವರಣ; ರಾಜ್ಯದೆಲ್ಲೆಡೆ ಒಣ ಹವೆ
ಗಳೂರಲ್ಲಿ ಮಂಜು ಕವಿದ ವಾತಾವರಣ
ಭಾವನಾ ಹೆಗಡೆ
|

Updated on: Jan 20, 2026 | 7:39 AM

Share

ಬೆಂಗಳೂರು, ಜನವರಿ 20: ನಗರದಲ್ಲಿ ಚಳಿಯ ಪ್ರಮಾಣದಲ್ಲಿ ಏರಿಳಿಕೆಯಾಗುತ್ತಿದ್ದು, ಒಣ ಹವೆಯ ವಾತಾವರಣವಿದೆ (Weather Forecast) . ಇಂದು ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ