ಬೆಂಗಳೂರಿಗರೇ ಗಮನಿಸಿ: ಅ.20-21ರಂದು ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ; ಬದಲಿ ರಸ್ತೆ ಮಾಹಿತಿ ಇಲ್ಲಿದೆ
Bengaluru Traffic Advisory: ಬೆಂಗಳೂರಿನ ಹಲಸೂರು ಕೆರೆಯಲ್ಲಿ ದುರ್ಗಾ ದೇವಿ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಕ್ಟೋಬರ್ 20 ಮತ್ತು 21ರಂದು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿರೋದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಬದಲಿ ರಸ್ತೆಗಳು ಮತ್ತು ಪಾರ್ಕಿಂಗ್ ನಿಷೇಧವಿರುವ ಪ್ರದೇಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 18: ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಬೆಂಗಳೂರು ನಗರದ ವಿವಿಧ ಪ್ರದೇಶಗಳ ಸುಮಾರು 20,000ಕ್ಕೂ ಅಧಿಕ ದುರ್ಗಾ ದೇವಿ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮದ ನಿಮಿತ್ತ ಅಕ್ಟೋಬರ್ 20 ಮತ್ತು 21ರಂದು ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿರೋದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಳಿಗ್ಗೆ 11 ಗಂಟೆಯಿಂದ ಮರುದಿನ ಬೆಳಗಿನ ಜಾವ 6 ಗಂಟೆಯವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ನಿರ್ಬಂಧವಿರುವ ರಸ್ಯೆಗಳು
https://t.co/0uwYcFOEwi
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) October 17, 2026
- ಕೆನ್ಸಿಂಗ್ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್‌ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಕೇವಲ ಎಂಇ.ಜಿ ಕಡೆಯಿಂದ ಕೆನ್ಸಿಂಗ್‌ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ.
- ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಾಲಿಯರ್ ರಸ್ತೆ ಕಡೆಯಿಂದ ಆರ್.ಬಿ.ಐ ಜಂಕ್ಷನ್ ಮುಖಾಂತರ ಹಲಸೂರು ಲೇಕ್ ಕಡೆಗೆ ಅಣ್ಣಸ್ವಾಮಿ ಮೊದಾಲಿಯರ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಕೇವಲ ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅವಕಾಶವಿರಲಿದೆ.
ಇದನ್ನೂ ಓದಿ:
ಪರ್ಯಾಯ ಮಾರ್ಗಗಳು
- ಕೆನ್ಸಿಂಗ್‌ಟನ್ ರಸ್ತೆ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಕೆನ್ಸಿಂಗ್ಟನ್ ನಿಂದ ಗುರದ್ವಾರ ಜಂಕ್ಷನ್ ಬಲ ತಿರುವು- ಗಂಗಾಧರ ಚೆಟ್ಟಿ ರಸ್ತೆ – ಡಿಕನ್‌ಸನ್ ರಸ್ತೆ ಬಲ ತಿರುವು- ಸೆಂಟ್ ಚಾನ್ಸ್ ರಸ್ತೆ – ಶ್ರೀ ಸರ್ಕಲ್ ಲಾವಣ್ಯ ಥಿಯೇಟರ್ ಜಂಕ್ಷನ್ – ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಪ್ರಾಮಿನೇಡ್ ರಸ್ತೆ-ವೀಲರ್ ರಸ್ತೆ ಅಥವಾ ಹಲಸೂರು ಕರ ಕಡೆಗೆ ಸಣಚರಿಸಬಹುದು.
- ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಾಲಿಯರ್ ರಸ್ತೆ ಕಡೆಯಿಂದ ಹಲಸೂರು ಲೇಕ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಗಂಗಾಧರ್ ಚೆಟ್ಟಿ ರಸ್ತೆಯ ಮುಖಾಂತರ ಆರ್.ಬಿ.ಎನ್.ಎಮ್.ಎಸ್ ಹತ್ತಿರ ಎಡತಿರುವು ಪಡೆದು ಡಿಕೆನ್ಸ್‌ನ್ ರಸ್ತೆಯ ಮುಖಾಂತರ ಸೆಂಟ್ ಜಾನ್ಸ್ ರಸ್ತೆ ತಲುಪಿ ಸೆಂಟ್ ಚಾನ್ಸ್ ರಸ್ತೆ – ಶ್ರೀ ಲಾವಣ್ಯ ಥಿಯೇಟರ್ ಜಂಕ್ಷನ್ – ನಾಗಾ ಜಂಕ್ಷನ್ ಮುಖಾಂತರ ಪುಲಕೇಶಿನಗರ ಮಿಲ್ಲರ್ ರಸ್ತೆ ಕಡೆಗೆ ಅಥವಾ ಹಲಸೂರು ಕೆರೆ ಕಡೆಗೆ ಹೋಗಬಹುದಾಗಿರುತ್ತದೆ.
ಈ ಸ್ಥಳಗಳಲ್ಲಿ ಪಾರ್ಕಿಂಗ್ಗೆ ನಿಷೇಧ
ಹಲಸೂರು ಕರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ಕೆನ್ಸಿಂಗ್‌ಟನ್ ರಸ್ತೆ-ಅಣ್ಣಸ್ವಾಮಿ ಮೊದಲೀಯಾರ್ ರಸ್ತೆ- ಟ್ಯಾಂಕ್ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧ ಮಾಡಲಾಗಿರುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:42 am, Sun, 18 October 26




