ನಗರದಲ್ಲಿಂದು ಬಿಸಿಯಾದ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ
ಬೆಂಗಳೂರು: ನಿಷೇಧಾಜ್ಞೆ ನಡುವೆಯೂ ಇಂದು ನಗರದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಿಐಟಿಯು ವರಲಕ್ಷ್ಮೀ ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಇಂದು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿ ಪ್ರತಿಭಟನೆ ಮಾಡದಂತೆ ಆದೇಶ ಮಾಡಿದ್ದಾರೆ. ಅನುಮತಿ ನೀಡದಿದ್ದರೂ […]
ಬೆಂಗಳೂರು: ನಿಷೇಧಾಜ್ಞೆ ನಡುವೆಯೂ ಇಂದು ನಗರದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಸಿಐಟಿಯು ವರಲಕ್ಷ್ಮೀ ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಇಂದು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿ ಪ್ರತಿಭಟನೆ ಮಾಡದಂತೆ ಆದೇಶ ಮಾಡಿದ್ದಾರೆ. ಅನುಮತಿ ನೀಡದಿದ್ದರೂ ಪ್ರತಿಭಟನೆ ಮಾಡುವುದಕ್ಕೆ ಕಾರ್ಯಕರ್ತೆಯರು ಮುಂದಾಗಿದ್ದಾರೆ.
ಪ್ರತಿಭಟನೆ ತಡೆಯಲು ಪೊಲೀಸರಿಂದ ಸಿದ್ಧತೆ: ರೈಲ್ವೆ ನಿಲ್ದಾಣದ ಬಳಿ 200ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ, ಮೂರು ಫೈರ್ ಇಂಜಿನ್ಗಳ ನಿಯೋಜನೆ ಮಾಡಿದ್ದು. ಆಜ್ಞೆ ಮೀರಿ ಪ್ರತಿಭಟನೆ ನಡೆಸಿದರೆ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ. ಆದರೆ ಬಿಸಿಯೂಟ ಕಾರ್ಯಕರ್ತೆಯರು ನಾವು ಯಾವುದಕ್ಕೂ ಬಗ್ಗಲ್ಲ ಎಂದು ನಿಷೇಧದ ನಡುವೆಯೂ ಧರಣಿಗೆ ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಬಜೆಟ್ನಲ್ಲಿ ನಮಗೆ ಯಾವುದೇ ಸವಲತ್ತು ನೀಡಿಲ್ಲ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈಗ ರಾಜ್ಯ ಸರ್ಕಾರದ ಬಜೆಟ್ ಇರೋದ್ರಿಂದ ರಾಜ್ಯ ಸರ್ಕಾರವಾದ್ರೂ ನಮ್ಮ ಬೇಡಿಕೆಗಳನ್ನು ಈಡೇರಿಸಲಿ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀ ತಿಳಿಸಿದ್ದಾರೆ.
ವರಲಕ್ಷ್ಮೀ ಪೊಲೀಸ್ ವಶಕ್ಕೆ: ನಿಷೇಧದ ನಡುವೆಯೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಮಹಾಲಕ್ಷ್ಮೀ ಲೇಔಟ್‌ನ ಸಿಐಟಿಯು ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀಯನ್ನ ಪೊಲೀಸರು ವಶಕ್ಕೆ ಪಡೆದು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳು: -ಬಿಸಿಯೂಟ ಯೋಜನೆ ಖಾಸಗೀಕರಣ ಬೇಡಾ -ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡುವ ಆದೇಶವನ್ನ ಸರ್ಕಾರ ಮಾಡಬೇಕು -ನಿವೃತ್ತಿ ವೇತನ ನೀಡಬೇಕು -ಬಿಸಿಯೂಟ ನೌಕರರನ್ನ ಶಿಕ್ಷಣ ಇಲಾಖೆಯ ಅಡಿಯಲ್ಲಿ ಖಾಯಂ ಮಾಡಬೇಕು -ಮಕ್ಕಳ ಹಾಜರಾತಿ ಆಧಾರದ ಮೇಲೆ ಅಡುಗೆ ಕೆಲಸದವರನ್ನ ಕೆಲಸದಿಂದ ಕೈ ಬೀಡಬಾರದು -ಬಿಸಿಯೂಟ ನೌಕರರನ್ನ ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು -ಬಿಸಿಯೂಟ ಯೋಜನೆಯನ್ನ 12ನೇ ತರಗತಿವರೆಗೆ ವಿಸ್ತರಣೆ ಮಾಡಬೇಕು -ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಲೇಬೇಕು -ವಿಶೇಷ ಸಂಧರ್ಭದಲ್ಲಿನ ಕೆಲಸಕ್ಕೆ ವಿಶೇಷ ಭತ್ಯ ನೀಡಬೇಕು -ಸುರಕ್ಷಾ ಭತ್ಯ ಹಾಗೂ ಸ್ವಚ್ಛತಾ ಭತ್ಯ ಒದಗಿಸಬೇಕು -ಅಡುಗೆಯ ಸಂಪೂರ್ಣ ಜವಾಬ್ದಾರಿಯನ್ನ ಶಿಕ್ಷಕರಿಗೆ ಬಿಡಿಸಿ ಕಾರ್ಯಕರ್ತೆಯರಿಗೆ ನೀಡಬೇಕು -ಹೆರಿಗೆ ರಜಾ ಹೆರಿಗೆ ಭತ್ಯೆ ನೀಡಬೇಕು -ಸಾಮಾಜಿಕ ಭದ್ರತೆಗಾಗಿ ರಾಷ್ಟ್ರೀಯ ಭೀಮಾಯೋಜನೆ ಜಾರಿ ಮಾಡಬೇಕು -ಎಲ್ಲ ಬಿಸಿಯೂಟ ಕಾರ್ಯಕರ್ತೆಯರಿಗೆ ಬಿ.ಪಿ.ಎಲ್ ಕಾರ್ಡ್ ನೀಡಬೇಕು.
Published On - 11:03 am, Mon, 3 February 20