ಗ್ರೀನ್, ಯೆಲ್ಲೋ, ಬ್ಲೂ, ಪರ್ಪಲ್ ಬೆನ್ನಲ್ಲೇ ಈಗ ಆರೆಂಜ್ ಲೈನ್ ಮೆಟ್ರೋ ಸರದಿ: ಇಲ್ಲಿದೆ ಎಲ್ಲಿಂದ ಎಲ್ಲಿಗೆ ಎನ್ನುವ ವಿವರ

ಕಳೆದ ವರ್ಷ ಆಗಸ್ಟ್ ನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ‌ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿದ್ರು. ಆದರೆ ಇಲ್ಲಿಯವರೆಗೆ ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. ಅದಕ್ಕೆ ಕಾರಣ ಅಂದರೆ ‌ಡಬಲ್ ಡೆಕ್ಕರ್ ಫ್ಲೈ ಓವರ್. ಈ ಬಗ್ಗೆ ಕೇಂದ್ರ ಅಸಮಾಧಾನ ವ್ಯಕ್ತಪಡಿಸಿತ್ತು, ಆದರೆ ಇದೀಗ ಬಿಎಂಆರ್ಸಿಎಲ್ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡಗಳನ್ನು ತೆರವು ಮಾಡಲು ಟೆಂಡರ್ ಕರೆದಿದೆ.

ಗ್ರೀನ್, ಯೆಲ್ಲೋ, ಬ್ಲೂ, ಪರ್ಪಲ್ ಬೆನ್ನಲ್ಲೇ ಈಗ ಆರೆಂಜ್ ಲೈನ್ ಮೆಟ್ರೋ ಸರದಿ: ಇಲ್ಲಿದೆ ಎಲ್ಲಿಂದ ಎಲ್ಲಿಗೆ ಎನ್ನುವ ವಿವರ
Bmrcl
Edited By:

Updated on: Sep 13, 2026 | 10:31 PM

ಬೆಂಗಳೂರು, (ಸೆಪ್ಟೆಂಬರ್ 13): ಗ್ರೀನ್, ಯೆಲ್ಲೋ, ಬ್ಲೂ, ಪರ್ಪಲ್ ಬೆನ್ನಲ್ಲೇ ಇದೀಗ ಆರೆಂಜ್ ಲೈನ್ ನಮ್ಮ ಮೆಟ್ರೋ ಕಾಮಗಾರಿಗೆ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಹೌದು..ಜೆ.ಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರ, ಹೊಸಹಳ್ಳಿ ಟು ಕಡಬಗೆರೆ ಮಾರ್ಗದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಗೆ ಅಡ್ಡಲಾಗಿದ್ದ ಬಿಲ್ಡಿಂಗ್ ಗಳ ತೆರವು ಮಾಡಲು ಟೆಂಡರ್ ಕರೆಯಲಾಗಿದೆ. ಆರೆಂಜ್ ಲೈನ್ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಆದ್ರೆ, ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. ರಾಜ್ಯ ಸರ್ಕಾರ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮೆಟ್ರೋ ಜೊತೆಗೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಮುಂದಾಗಿತ್ತು. ಹೀಗಾಗಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ, ಇದೀಗ ಬಿಎಂಆರ್​​ಸಿಎಲ್ ಕಾಮಗಾರಿಗೆ ಅಡ್ಡಲಾಗಿದ್ದ ಬಿಲ್ಡಿಂಗ್ ಗಳ ತೆರವು ಮಾಡಲು ಟೆಂಡರ್ ಕರೆದಿದೆ.

ಕಾಮಗಾರಿ ವಿಳಂಬಕ್ಕೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಬಿಎಂಆರ್ಸಿಎಲ್ ನಮ್ಮ ಮೆಟ್ರೋ 3ನೇ ಹಂತದ ಯೋಜನೆಯ ಮಾರ್ಗ ಮಧ್ಯೆ ಬರುವ ಕಟ್ಟಡಗಳು ತೆರವುಗೊಳಿಸುವುದಕ್ಕಾಗಿ 17.57 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ 4 ಪ್ಯಾಕೇಜ್ ಗಳ ಟೆಂಡರ್‌ ಕರೆದಿದೆ.

ಆರೇಂಜ್ ಮೆಟ್ರೋ ಮಾರ್ಗದ ಮಾಹಿತಿ

ಇನ್ನೂ 44.65 ಕಿ.ಮೀ. ಉದ್ದದ ಫೇಸ್-3 ಯೋಜನೆಯು 2 ಕಾರಿಡಾರ್‌ಗಳನ್ನು ಒಳಗೊಂಡಿದೆ. ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದದ ಕಾರಿಡಾರ್-1 ನಿರ್ಮಾಣವಾಗಲಿದ್ದು, 22 ಸ್ಟೇಷನ್ ಬರಲಿದೆ. ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ. ಉದ್ದದ ಕಾರಿಡಾರ್-2 ನಿರ್ಮಾಣವಾಗಲಿದ್ದು, 9 ಸ್ಟೇಷನ್ ಇರಲಿವೆ. ಒಟ್ಟು 31 ಎಲಿವೇಟೆಡ್ ಸ್ಟೇಷನ್ ನಿರ್ಮಾಣವಾಗಲಿದೆ.ಯೋಜನೆಯನ್ನು 2032ರೊಳಗೆ ಮುಗಿಸಲು ಪ್ಲ್ಯಾನ್ ಮಾಡಲಾಗಿದೆ.

ಮೊದಲ ಪ್ಯಾಕೇಜ್‌ಗೆ 4.74 ಕೋಟಿ 2ನೇ ಪ್ಯಾಕೇಜ್ 4.54 ರುಪಾಯಿ 3ನೇ ಪ್ಯಾಕೇಜ್‌ಗೆ 4.29 ಕೋಟಿ ರುಪಾಯಿ. 4ನೇ ಪ್ಯಾಕೇಜ್‌ ಗೆ 4 ಕೋಟಿ ರುಪಾಯಿನಿಗದಿಪಡಿಸಲಾಗಿದೆ.ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ತೆರವುಗೊಳಿಸುವುದು ಈ ಕಾಮಗಾರಿಯ ಪ್ರಮುಖ ಉದ್ದೇಶವಾಗಿದೆ.ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಜನ್ರಿಗೆ ಸಂಚಾರ ಮಾಡಲು ಸಾಕಷ್ಟು ಸಹಾಯ ಆಗಲಿದೆ. ಪೀಣ್ಯದಲ್ಲಿರುವ ಸಾವಿರಾರು ಇಂಡಸ್ಟ್ರಿಗಳಿದ್ದು, ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ.

ಒಟ್ನಲ್ಲಿ ಆರೆಂಜ್ ಲೈನ್‌ ಗೆ ಕಳೆದ ವರ್ಷವೇ ಶಂಕುಸ್ಥಾಪನೆ ಮಾಡಿದ್ರು, ಬಿಎಂಆರ್ಸಿಎಲ್ ಕಾಮಗಾರಿ ಆರಂಭಿಸಿಲ್ಲ ಎಂದು ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದು, ನಂತರವಾದ್ರು ಕಾಮಗಾರಿ ಆರಂಭವಾಗಲಿದೆಯಾ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us