AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

19ನೇ ಆವೃತ್ತಿ ಚಿತ್ರಸಂತೆ ಉದ್ಘಾಟನೆ; ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ಸವಿದು ಖುಷ್ ಆದ ಸಿಎಂ ಬೊಮ್ಮಾಯಿ

ಚಿತ್ರಕಲಾ ಪರಿಷತ್ನ ಚಿತ್ರಸಂತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐಸ್ ಮಾರುವ ಹುಡುಗನಿಂದ ಐಸ್ ಕ್ಯಾಂಡಿ ಖರೀದಿಸಿ ಅದನ್ನು ಸವಿದು ಖುಷಿ ಪಟ್ಟಿದ್ದಾರೆ.

19ನೇ ಆವೃತ್ತಿ ಚಿತ್ರಸಂತೆ ಉದ್ಘಾಟನೆ; ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ಸವಿದು ಖುಷ್ ಆದ ಸಿಎಂ ಬೊಮ್ಮಾಯಿ
ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ಸವಿದು ಖುಷ್ ಆದ ಸಿಎಂ ಬೊಮ್ಮಾಯಿ
TV9 Web
| Updated By: ಆಯೇಷಾ ಬಾನು|

Updated on:Mar 27, 2022 | 10:44 PM

Share

ಬೆಂಗಳೂರು: ಭಾನುವಾರ (ಮಾರ್ಚ್ 27) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ( Basavaraj Bommai) ಅವರು ಕರ್ನಾಟಕ ಚಿತ್ರಕಲಾ ಪರಿಷತ್ತು(Chitrakala Parishath) ವತಿಯಿಂದ ಆಯೋಜಿಸಿರುವ “19ನೇ ಆವೃತ್ತಿ ಚಿತ್ರಸಂತೆ”(Chitra Santhe) ಯನ್ನು ಉದ್ಘಾಟಿಸಿದ್ದಾರೆ. ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸ್ವಾತಂತ್ರ್ಯ ಯೋಧರಿಗೆ ಚಿತ್ರಸಂತೆ ಸಮರ್ಪಣೆ ಮಾಡಲಾಗಿದೆ. ಇನ್ನು ಚಿತ್ರಕಲಾ ಪರಿಷತ್ನ ಚಿತ್ರಸಂತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐಸ್ ಮಾರುವ ವ್ಯಕ್ತಿಯಿಂದ  ಐಸ್ ಕ್ಯಾಂಡಿ ಖರೀದಿಸಿ ಅದನ್ನು ಸವಿದು ಖುಷಿ ಪಟ್ಟಿದ್ದಾರೆ.

ಕಳೆದ ವರ್ಷ ಕೊರೊನಾ ಹಿನ್ನೆಲೆ ಚಿತ್ರಸಂತೆಯನ್ನು ಆನ್ ಲೈನ್ ಮೂಲಕ ನಡೆಸಲಾಗಿತ್ತು. ಸದ್ಯ ಈ ಬಾರಿ ಕೊರೊನಾ ಕಡಿಮೆಯಾದ ಹಿನ್ನೆಲೆ ಚಿತ್ರಸಂತೆಯನ್ನು ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸಾವಿರಾರು ಮಂದಿ ಚಿತ್ರಸಂತೆಯಲ್ಲಿ ಭಾಗಿಯಾಗಿ ಕಲಾವಿದರ ಕುಂಚದಿಂದ ಅರಳಿ ಚಿತ್ರಕಲೆಯನ್ನು ಕಣ್ತುಂಬಿಕೊಂಡು ವಿಸ್ಮಿತರಾಗುತ್ತಿದ್ದಾರೆ. ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ ಚಿತ್ರಸಂತೆಯನ್ನು ಆಯೋಜಿಸಲಾಗಿತ್ತು. 19ನೇ ಆವೃತ್ತಿಯ ಚಿತ್ರಸಂತೆಯ ಉದ್ಘಾಟನೆಗೆ ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಚಿತ್ರ ಸಂತೆಯಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿರುವುದನ್ನು ಗಮನಿಸಿ ಐಸ್ ಮಾರುವ ವ್ಯಕ್ತಿಯಿಂದ ಜಾಯ್ ಮ್ಯಾಂಗೋ ಕ್ರೀಮ್ ಐಸ್ ಕ್ಯಾಂಡಿಯನ್ನು ತಾವೇ ಹಣ ಕೊಟ್ಟು ಖರೀದಿಸಿ ಸಂತೋಷದಿಂದ ಸವಿದಿದ್ದಾರೆ.

ಇನ್ನು ಚಿತ್ರಸಂತೆ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಇಡೀ ಕರ್ನಾಟಕದ ಚಿತ್ರಕಲೆಗೆ ತವರೂರು ಚಿತ್ರಕಲಾ ಪರಿಷತ್ತು. ಇದು ಎಲ್ಲೆಡೆ ವ್ಯಾಪಿಸಬೇಕೆಂಬ ಉದ್ದೇಶವಿದೆ. ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌ಕೈಗೊಳ್ಳಲಾಗುವುದು. ಸ್ವಾಯತ್ತ ಸಂಸ್ಥೆಯಾಗಿರುವ ಚಿತ್ರ ಕಲಾ ಪರಿಷತ್ತನ್ನು ಡೀಮ್ಡ್ ವಿಶ್ವವಿದ್ಯಾಲಯ ಮಾಡಬೇಕೆಂಬ ಬೇಡಿಕೆ ಇದ್ದು, ಬರುವ ಅಧಿವೇಶನದಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಎಂದು ಘೋಷಿಸಲು ಕ್ರಮ ವಹಿಸಲಾಗುವುದು ಎಂದರು.

Basavaraj Bommai

ಐಸ್ ಕ್ಯಾಂಡಿ ಸವಿಯುತ್ತಲೇ ಚಿತ್ರ ವೀಕ್ಷಿಸಿದ ಸಿಎಂ ಬೊಮ್ಮಾಯಿ

Basavaraj Bommai

ಐಸ್ ಕ್ಯಾಂಡಿ ಸವಿಯುತ್ತಲೇ ಚಿತ್ರ ವೀಕ್ಷಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಚಿತ್ರಸಂತೆ 2021: ಗಮನ ಸೆಳೆಯುತ್ತಿದೆ ಚಿತ್ರಕಲಾ ಅಕಾಡೆಮಿ ಪ್ರದರ್ಶನಕ್ಕಿಟ್ಟಿರುವ 50 ವರ್ಷ ಹಳೆಯ ಕಲಾಕೃತಿ

ಚಿತ್ರಸಂತೆ ಆನ್​ಲೈನ್​, ಗ್ಯಾಲರಿ ಕಲಾಕೃತಿಗಳು ಆಫ್​ಲೈನ್​; ಪರಿಷತ್ ಆವರಣದಲ್ಲಿ ಏನೆಲ್ಲಾ ಇದೆ?

Published On - 6:26 pm, Sun, 27 March 22