AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ-ನಿಮ್ಮ ವಾಯ್ಸ್ ಪ್ಲೇಮಾಡಿ ರಾಜ್ಯದ ಜನರಿಗೆ ಕೇಳಿಸೋಣ: ಡಿಕೆಶಿಗೆ ದೇವರಾಜೇಗೌಡ ಸವಾಲ್

ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈ ಕುರಿತು ಇಂದು(ಮೇ.08) ದೇವರಾಜೇಗೌಡ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ನನ್ನ ಬೆತ್ತಲೆ‌ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು. ಅದು ಕೂಡ ರಾಜಕೀಯ ಷಡ್ಯಂತ್ರ, ಈಗಾಗಲೇ ದೂರು ನೀಡಿದ್ದೇನೆ. ಆಗ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ ಪ್ರಜ್ವಲ್​ ಪ್ರಕರಣದಲ್ಲಿ SIT ತನಿಖೆಗೆ ಕೊಟ್ಟ ನಂತರ FIR ಆಯ್ತು ಎಂದರು.

ನಮ್ಮ-ನಿಮ್ಮ ವಾಯ್ಸ್ ಪ್ಲೇಮಾಡಿ ರಾಜ್ಯದ ಜನರಿಗೆ ಕೇಳಿಸೋಣ: ಡಿಕೆಶಿಗೆ ದೇವರಾಜೇಗೌಡ ಸವಾಲ್
ಡಿಕೆ ಶಿವಕುಮಾರ್​ಗೆ ದೇವರಾಜೇಗೌಡ ಸವಾಲ್
Jagadisha B
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 08, 2024 | 6:49 PM

Share

ಬೆಂಗಳೂರು, ಮೇ.08: ‘ನಮ್ಮ ನಿಮ್ಮ ವಾಯ್ಸ್ ಪ್ಲೇ ಮಾಡಿ ರಾಜ್ಯದ ಜನರಿಗೆ ಕೇಳಿಸೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್​(DK Shivakumar)ಗೆ ದೇವರಾಜೇಗೌಡ(Devarajegowda) ಅವರು ಚಾಲೆಂಜ್ ಹಾಕಿದ್ದಾರೆ. ಇಂದು(ಮೇ.08)  ಪ್ರಜ್ವಲ್​ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಅಶ್ಲೀಲ ವಿಡಿಯೋ ಬಿಡುಗಡೆ ಬಳಿಕ ಹಲವು ರಾಜಕೀಯ ನಾಯಕರ‌ ರಕ್ಷಣೆಯಾಗುತ್ತಿದೆ. ನಾನು ಸರ್ಕಾರಕ್ಕೆ ಚಾಲೆಂಜ್ ಹಾಕುತ್ತೇನೆ, ಯಾವುದೇ ಬೆದರಿಕೆಗೆ ನಾನು ಹೆದರಲ್ಲ, ಪ್ರಕರಣದಿಂದ‌ ಹಿಂದೆ ಸರಿಯಲ್ಲ ಎಂದಿದ್ದಾರೆ.

ಇನ್ನು ಹಿಂದೆ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ಆದಾಗ ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದೆ ಆದರೆ ನ್ಯಾಯ ಸಿಗಲಿಲ್ಲ. ಈಗ ಅವರ ಪಕ್ಷದ ನಾಯಕರನ್ನೆ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ಪತ್ರವನ್ನ ಸಿಎಂ ಪುರಸ್ಕರಿಸುತ್ತಾರೆ. ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರೋದು ಘೋರ ಅಪರಾಧ. ಅವರ ವಿರುದ್ಧ ‌ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ನನ್ನ ಮೇಲೆ ದೂರು ಕೊಡುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.

ಇದನ್ನೂ ಓದಿ:ದೇವರಾಜೇಗೌಡ ತತ್ವ ಸಿದ್ಧಾಂತವಿಲ್ಲದ ವ್ಯಕ್ತಿ, ಒಮ್ಮೆ ತಾನು ರಾಜಕಾರಣಿ ಅಂತಾರೆ ಮತ್ತೊಮ್ಮೆ ವಕೀಲ: ಶ್ರೇಯಸ್ ಪಟೇಲ್

ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆದ್ರೂ ಬಂಧಿಸಿಲ್ಲ ಯಾಕೆ..?

ನಾನು ಪೆನ್ ಡ್ರೈವ್​ನ್ನ ದೇವರಾಜೇಗೌಡ ಕೊಟ್ಟಿದ್ದೆ ಎಂದು ಹೇಳಿದ್ದ ಕಾರ್ತಿಕ್,  4ಜಿಬಿ ಮೆಮೊರಿ ಕಾರ್ಡ್ ಕೊಟ್ಟಿದ್ದೆ ಎಂದು ಹೇಳಿದ್ದಾನೆ. ಆ 4ಜಿಬಿ ಕಾರ್ಡನ್ನ ಎಸ್ಐಟಿಗೆ ಕೊಟ್ಟಿರುವುದಾಗಿ ಕೂಡ ಹೇಳಿದ್ದಾನೆ. ಅಂತಹ ಕಾರ್ತಿಕ್​ನನ್ನ ಎಸ್ಐಟಿ ಬಂಧಿಸ್ತಾ, ಇಲ್ಲ. ಇನ್ನು ನಿರೀಕ್ಷಣಾ ಜಾಮೀನು ವಜಾ ಆದ ತಕ್ಷಣ ರೇವಣ್ಣರನ್ನ ಬಂಧಿಸಿದ್ದೀರಿ. ಆದ್ರೆ, ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆದರೂ ಯಾಕೆ ಬಂಧಿಸಿಲ್ಲ. ಕೂಡಲೇ ಆತನನ್ನು ಬಂಧಿಸಲು ದೇವರಾಜೇಗೌಡ ಆಗ್ರಹಿಸಿದರು.

ಇನ್ನು ಹಣಕ್ಕಾಗಿ ದೇವರಾಜೇಗೌಡ ಬಂದಿದ್ದ ಎಂಬ ಶಿವರಾಮೇಗೌಡ ಹೇಳಿಕೆ ವಿಚಾರ, ‘ನಾನು ಅವರಿಗೆ ಕರೆ ಮಾಡಿಲ್ಲ, ಅವರೆ ಕಾಲ್ ಮಾಡಿದ್ದು, ಕೇಂದ್ರ ಸರ್ಕಾರ ಹಾಗೂ ರೇವಣ್ಣ ಕುಟುಂಬವನ್ನ ಹೇಗೆ ಕಟ್ಟಿಹಾಕಬೇಕು ಎಂದು ಶಿವರಾಮೇಗೌಡ ಹೇಳಿದ್ದರು. ಕಾಲ್ ರೆಕಾರ್ಡ್ ‌ಮಾಡಿದ್ದಕ್ಕೆ‌ ಕ್ಷಮೆ ಕೇಳ್ತಿನಿ. ಇದು ದೊಡ್ಡ ಜಾಲ ಇದೆ ಅಂತ ಗೊತ್ತಾದ ಮೇಲೆ ಕಾಲ್ ರೆಕಾರ್ಡ್ ಮಾಡಿದೆ ಎಂದರು. ಎಸ್ಐಟಿ ಮುಂದುವರೆಯಬೇಕೆ, ಬೇಡವೇ ಎಂದು ಕೋರ್ಟ್ ನಿರ್ಧಾರ ಮಾಡುತ್ತೆ. ಈಗಾಗಲೇ ಮಹಿಳೆಯರಿಗೆ ಬ್ಲಾಕ್ ಮೇಲ್ ವಿಚಾರ ಸಕಲೇಶಪುರ ಠಾಣೆಯಲ್ಲಿ ಎರಡು ಕೇಸ್​ಗಳು ದಾಖಲಾಗಿವೆ.

ಇದನ್ನೂ ಓದಿ:ಅಶ್ಲೀಲ ವಿಡಿಯೋ ಹಂಚಿದವನನ್ನು ಎಸ್ಐಟಿ ತಂಡ ಇದುವರೆಗೆ ಮುಟ್ಟೇ ಇಲ್ಲ: ದೇವರಾಜೇಗೌಡ, ವಕೀಲ

ನನ್ನ ಬೆತ್ತಲೆ‌ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು

‘ನನ್ನನ್ನು ಹನಿಟ್ರ್ಯಾಪ್ ಮಾಡಲು ಹೋಗಿ ಗ್ಯಾಂಗ್​ ವಿಫಲವಾಯ್ತು. ಹೌದು, ನಾನು ಕೂಡ ಸಂತ್ರಸ್ತ ಎಂದ ಬಿಜೆಪಿ ಮುಖಂಡ ದೇವರಾಜೇಗೌಡ,  ‘ನನ್ನ ಬೆತ್ತಲೆ‌ ವಿಡಿಯೋ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು. ಅದು ಕೂಡ ರಾಜಕೀಯ ಷಡ್ಯಂತ್ರ, ಈಗಾಗಲೇ ದೂರು ನೀಡಿದ್ದೇನೆ. ಆಗ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ ಪ್ರಜ್ವಲ್​ ಪ್ರಕರಣದಲ್ಲಿ SIT ತನಿಖೆಗೆ ಕೊಟ್ಟ ನಂತರ FIR ಆಯ್ತು. ಎಫ್​ಐಆರ್​ ಆದ ನಂತರ ಮತ್ತೆ ಲೈಂಗಿಕ ದೌರ್ಜನ್ಯ ಕೇಸ್ ಆಯ್ತು. ಪೆನ್​ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧವೂ ಎಫ್​ಐಆರ್ ಆಗಿತ್ತು. ಆದರೆ, ಅದನ್ನು ಎಸ್​ಐಟಿಗೆ ವರ್ಗಾವಣೆ ಮಾಡಿಲ್ಲ. ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿ ಕರೆಯುವ ಅಗತ್ಯವಿಲ್ಲ. ಆದರೂ ಅಧಿಕಾರಿಗಳು ನನ್ನಿಂದ ಹೇಳಿಕೆ ಪಡೆದರು. ಒಂದು ಲೈಂಗಿಕ ದೌರ್ಜನ್ಯ ಹಾಗೂ ಎರಡನೇಯದಾಗಿ ಪೆನ್​ಡ್ರೈವ್ ಹಂಚಿಕೆ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ