AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ಕೋಟಿ ರೂ. ಮೌಲ್ಯದ ಶ್ವಾನ ಖರೀದಿಸಿದ್ದೇನೆ ಎಂದು ಬಿಲ್ಡಪ್​ ಕೊಟ್ಟಿದ್ದ ಬೆಂಗಳೂರಿನ ವ್ಯಕ್ತಿಗೆ ಇಡಿ ಶಾಕ್

ಬೆಂಗಳೂರಿನ ಶ್ವಾನ ಪ್ರೇಮಿ ಎಸ್‌.ಸತೀಶ್‌ ಬಗ್ಗೆ ಗೊತ್ತಿರಬಹುದು. ಕಳೆದ ತಿಂಗಳು ಎಷ್ಟು ದೊಡ್ಡ ಸುದ್ದಿ ಮಾಡಿದ್ದರು ಅಂದ್ರೆ 50 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ವೂಲ್ಫ್‌ ಡಾಗ್‌ಅನ್ನು ಖರೀದಿ ಮಾಡಿದ್ದೆ ಎಂದು ಹೇಳಿಕೊಂಡಿದ್ದರು. ಇದು ಸಖತ್‌ ಸುದ್ದಿಯಾಗಿ ವೈರಲ್‌ ಆಗಿತ್ತು. ಅಬ್ಬಬ್ಬಾ 50 ಕೋಟಿ ರೂ. ಕೊಟ್ಟು ಶ್ವಾನ ಖರೀದಿ ಮಾಡಿದ್ದಾರೆಯೇ ಎಂದು ಎಲ್ಲರೂ ದಂಗಾಗಿದ್ದರು. ಆದ್ರೆ, ಇದೀಗ ನಾಯಿ ಪ್ರೇಮಿ ಸತೀಶನ ಬಂಡವಾಳವನ್ನು ಇಡಿ ಬಿಚ್ಚಿಟ್ಟಿದೆ.

50 ಕೋಟಿ ರೂ. ಮೌಲ್ಯದ ಶ್ವಾನ ಖರೀದಿಸಿದ್ದೇನೆ ಎಂದು ಬಿಲ್ಡಪ್​ ಕೊಟ್ಟಿದ್ದ ಬೆಂಗಳೂರಿನ ವ್ಯಕ್ತಿಗೆ ಇಡಿ ಶಾಕ್
Dog Satish
ರಮೇಶ್ ಬಿ. ಜವಳಗೇರಾ
|

Updated on:Apr 17, 2025 | 3:49 PM

Share

ಬೆಂಗಳೂರು, (ಏಪ್ರಿಲ್ 17): 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ(Dog) ನಾಯಿಯೊಂದನ್ನು ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದ ಬೆಂಗಳೂರಿನ (Bengaluru) ಶ್ವಾನಪ್ರೇಮಿ ಸತೀಶ್‌ (Bengaluru Dog Breeder Satish) ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು (ಏಪ್ರಿಲ್ 17) ಜೆಪಿ ನಗರ ಮೂರನೇ ಹಂತದಲ್ಲಿರುವ ಸತೀಶ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಎನ್ನುವುದು ಸುಳ್ಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಸದ್ಯ ಇಡಿ ಅಧಿಕಾರಿಗಳು ಸತೀಶ್​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು ಮೂಲದ ನಾಯಿ ತಳಿಗಾರ ಎಸ್. ಸತೀಶ್ 49 ಕೋಟಿ (4.4 ಮಿಲಿಯನ್ ಪೌಂಡ್‌ಗಳು) ರೂ.ಗೆ ಅತ್ಯಂತ ಅಪರೂಪದ ತೋಳ ನಾಯಿಯನ್ನು (ವುಲ್ಫ್ ಡಾಗ್) ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ಅಪರೂಪದ ನಾಯಿಯನ್ನು ಖರೀದಿಸಲು ಸುಮಾರು ರೂ.50 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ 50 ಕೋಟಿ ರೂ,ಗೆ ಒಂದು ನಾಯಿ ಖರೀದಿ ಮಾಡಿದ್ದೇನೆ ಎಂದು ಸತೀಶ್ ಹೇಳಿಕೊಂಡಿರುವುದು ಸುಳ್ಳು ಅಂತೆಲ್ಲಾ ಮಾತುಗಳು ಕೇಳಿಬಂದಿದ್ದವು. ಇದೇ ವಿಚಾರವಾಗಿ ಸತೀಶ್ ವಿರುದ್ಧ ಇಡಿ ಪ್ರಕರಣವನ್ನೂ ದಾಖಲಿಸಿಕೊಂಡಿತ್ತು. ಆದ್ರೆ, ಇದೀಗ ಇಡಿ ದಾಳಿ ಮಾಡಿ ಸತೀಶನ ಬಂಡವಾಳ ಬಟಾಬಯಲು ಮಾಡಿದೆ.

ಇದನ್ನೂ ಓದಿ: ತೋಳದ ರೂಪದ ನಾಯಿ! 49 ಕೋಟಿ ಕೊಟ್ಟು ಜಗತ್ತಿನ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ

ಯಾರು ಈ ಶ್ವಾನ ಪ್ರಿಯ ಸತೀಶ್​?

ಸತೀಶ್‌ ಬೆಂಗಳೂರಿನ ಶ್ವಾನಪ್ರಿಯರಲ್ಲಿ ಒಬ್ಬರು. ಇವರು ಹಲವು ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ ಸತೀಶ್‌ ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ಶ್ವಾನದೊಂದಿಗೆ ಹೋದ್ರೆ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.

ಇದನ್ನೂ ಓದಿ
Image
49 ಕೋಟಿ ಕೊಟ್ಟು ವಿಶ್ವದ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ
Image
ಕಾನ್ಪುರದ 90 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಜರ್ಮನ್ ಶೆಫರ್ಡ್ ನಾಯಿ
Image
ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
Image
ರಕ್ಷಣೆ ಪಡೆಯಲು ದೊಣ್ಣೆ ಬೀಸಿದ ಸೆಕ್ಯುರಿಟಿ ಗಾರ್ಡ್‌ ಮೇಲೆಯೇ ಕೈ ಮಾಡಿದಯುವಕ

ವಿಚಾರ ಏನೆಂದರೆ, ಈತ ಹೇಳಿದ್ದು ಬರೀ ಸುಳ್ಳು.’ಬೇರೆಯವರಿಂದ ನಾಯಿಗಳನ್ನ ಬಾಡಿಗೆ ಪಡೆದು ಸತೀಶ್‌ ವಿಡಿಯೋ ಮಾಡಿಕೊಳ್ಳುತ್ತಿದ್ದ. ಕೋಟ್ಯಾಂತರ ರೂಪಾಯಿ ಗೆ ವಿದೇಶಿ ನಾಯಿ ಖರೀದಿ ಎಂದು ಹೇಳಿಕೊಳ್ಳುತ್ತಿದ್ದ. ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಇಡೀ ವ್ಯವಹಾರ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Thu, 17 April 25