AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈ. ಮಂಜುನಾಥ್​​ ಮತ್ತು ಆಪ್ತರ ಮನೆಗಳ ಮೇಲೆ ಇಡಿ ದಾಳಿ ಕೇಸ್​​: ರೇಡ್​​ ವೇಳೆ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕವೇ ಪತ್ತೆ!

ED Raid: ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಇಡಿ ದಾಳಿಯಲ್ಲಿ 13.3 ಕೋಟಿ ರೂ. ಮೌಲ್ಯದ ನಗದು-ಚಿನ್ನದೊಂದಿಗೆ, ಲಂಚ ಹಂಚಿಕೆಯ ಲೆಕ್ಕ ಪುಸ್ತಕ ಕೂಡ ಪತ್ತೆಯಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಇಡಿ ಮಾಹಿತಿ ನೀಡಿದ್ದು, ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿರುವ ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಬಗ್ಗೆ ತಿಳಿಸಿದೆ.

ವೈ. ಮಂಜುನಾಥ್​​ ಮತ್ತು ಆಪ್ತರ ಮನೆಗಳ ಮೇಲೆ ಇಡಿ ದಾಳಿ ಕೇಸ್​​: ರೇಡ್​​ ವೇಳೆ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕವೇ ಪತ್ತೆ!
ದಾಳಿ ಬಗ್ಗೆ ಇಡಿ ಮಾಹಿತಿImage Credit source: Tv9 Kannada and ED X Account
ಪ್ರಸನ್ನ ಹೆಗಡೆ
|

Updated on:Jun 25, 2026 | 6:38 PM

Share

ಮುಖ್ಯಾಂಶಗಳು

  • ಮಂಜುನಾಥ್ & ಆಪ್ತರ ಮನೆಗಳ ಮೇಲೆ ಇಡಿ ರೇಡ್​​ ಪ್ರಕರಣ
  • ದಾಳಿ ವೇಳೆ ಪತ್ತೆಯಾದ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕ
  • ಒಟ್ಟಾರೆ 13.3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ ಎಂದ ED

ಬೆಂಗಳೂರು, ಜೂನ್​​ 25: ಸಚಿವ ಸತೀಶ್ ಜಾರಕಿಹೊಳಿ ಬಾಮೈದ ಮತ್ತು ಬೆಳಗಾವಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಸೇರಿ ಅವರ ಆಪ್ತರ ಮನೆಗಳ ಮೇಲೆ ನಿನ್ನೆ (ಜೂನ್​​ 24) ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿರುವ ಒಟ್ಟು 14 ಸ್ಥಳಗಳಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆದಿತ್ತು. ಈ ಸಂಬಂಧ ಇಡಿ ಮಾಹಿತಿ ನೀಡಿದ್ದು, ಪರಿಶೀಲನೆ ವೇಳೆ ಕೆಲ ದಾಖಲೆ ಪತ್ರಗಳು, ಹಣ ಮತ್ತು ಆಭರಣಗಳು ಸೇರಿ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕ ಸಿಕ್ಕಿರೋದು ಅಧಿಕಾರಿಗಳೇ ಹೌಹಾರುವಂತೆ ಮಾಡಿದೆ.

ರೇಡ್​​ ವೇಳೆ ಸಿಕ್ಕಿದ್ದೇನು?

ದಾಳಿಯ ವೇಳೆ ಡಿಜಿಟಲ್ ಸಾಧನಗಳು, ಲಂಚದ ಹಣ ಹಂಚಿಕೆ ಕುರಿತ ನಗದು ಪುಸ್ತಕ, ಆಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ವಿಶೇಷವಾಗಿ ವೈ.ಡಿ. ಮಂಜುನಾಥ್, ಅವರ ಚಾಲಕ, ಕುಟುಂಬ ಸದಸ್ಯರು ಹಾಗೂ ಸಹಚರರ ಸ್ಥಳಗಳಿಂದ ಸುಮಾರು 5.5 ಕೋಟಿ ನಗದು, ಸುಮಾರು 7.8 ಕೋಟಿ ಮೌಲ್ಯದ ಚಿನ್ನಾಭರಣ, 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 13.3 ಕೋಟಿ ಮೌಲ್ಯದ ಅಕ್ರಮ ಆಸ್ತಿ (Proceeds of Crime) ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ: ಅಬಕಾರಿ ಎಸ್ಪಿ, ಡಿವೈಎಸ್ಪಿ ಮನೆಗಳ ಮೇಲೂ ರೇಡ್​

ಅಧಿಕಾರಿಗಳಿಂದಲೇ ಮದ್ಯದಂಗಡಿ!

ಇನ್ನು ಇಡಿ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅಬಕಾರಿ ಇಲಾಖೆ ಅಧಿಕಾರಿಗಳು, ಅವರ ಸಹಚರರು ಮತ್ತು ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಸಂಘಟಿತ ಭ್ರಷ್ಟಾಚಾರದ ಜಾಲ ಕಾರ್ಯನಿರ್ವಹಿಸುತ್ತಿತ್ತು. ರಾಜ್ಯದ ವಿವಿಧ ಮದ್ಯ ಮಾರಾಟ ಮಳಿಗೆಗಳಿಂದ ಪ್ರತಿ ತಿಂಗಳು ನಿಗದಿತ ಪ್ರಮಾಣದ ಲಂಚವನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳು ಸಂಗ್ರಹಿಸುತ್ತಿದ್ದರು. ಪರವಾನಗಿ ನವೀಕರಣ, ಸ್ಥಳಾಂತರ ಮತ್ತು ಹೊಸ ಲೈಸೆನ್ಸ್ ನೀಡುವ ಸಂದರ್ಭದಲ್ಲಿಯೂ ಹಣ ಸಂಗ್ರಹಿಸಲಾಗುತ್ತಿತ್ತು. ಸಂಗ್ರಹಿಸಿದ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ಕೇಂದ್ರೀಕೃತವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಈ ಹಣದ ಲೆಕ್ಕಪತ್ರವನ್ನು ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಅಂತಹ ಒಂದು ನಗದು ಪುಸ್ತಕವನ್ನು ಇಡಿ ವಶಪಡಿಸಿಕೊಂಡಿದೆ. ಈ ಅಕ್ರಮ ಹಣವನ್ನು ಅಧಿಕಾರಿಗಳು ವೈಯಕ್ತಿಕ ಖರ್ಚು, ಆಸ್ತಿ ಖರೀದಿ ಹಾಗೂ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಬಳಸುತ್ತಿದ್ದರು. ತನಿಖೆಯಲ್ಲಿ ಪತ್ತೆಯಾದ ಮತ್ತೊಂದು ಪ್ರಮುಖ ಅಂಶವೆಂದರೆ, ಹಲವಾರು ಅಬಕಾರಿ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಮದ್ಯದ ಅಂಗಡಿ ಪರವಾನಗಿಗಳನ್ನು ಪಡೆದು, ಪರೋಕ್ಷವಾಗಿ ಮದ್ಯ ವ್ಯವಹಾರ ನಡೆಸುತ್ತಿದ್ದರು ಎಂದು ಇಡಿ ತಿಳಿಸಿದೆ.

ಯಾರ್ಯಾರ ಮೇಲೆ ಇಡಿ ದಾಳಿ ನಡೆದಿತ್ತು?

ಅಬಕಾರಿ ಇಲಾಖೆಯ ಅಧಿಕಾರಿಗಳಾದ ಜಗದೀಶ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ.ಡಿ. ಮಂಜುನಾಥ್ ಸೇರಿದಂತೆ ಅವರ ಕುಟುಂಬ ಸದಸ್ಯರು, ವ್ಯವಹಾರ ಪಾಲುದಾರರು ಮತ್ತು ಆಪ್ತ ಸಹಚರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:32 pm, Thu, 25 June 26

Follow Us
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ