ಬಿಬಿಎಂಪಿಯಲ್ಲ ಇನ್ಮುಂದೆ ಗ್ರೇಟರ್ ಬೆಂಗಳೂರು: ನಾಳೆಯಿಂದಲೇ ಜಾರಿ
ಸಾಕಷ್ಟು ಪರ-ವಿರೋಧದ ಮಧ್ಯೆ ನಾಳೆಯಿಂದ ಅಂದರೆ ಮೇ 15ರಿಂದ ಗ್ರೇಟರ್ ಬೆಂಗಳೂರು ಆಡಳಿತ ಜಾರಿ ಆಗಲಿದೆ. ಈ ಬಗ್ಗೆ ಗ್ರೇಟರ್ ಬೆಂಗಳೂರು ಆಡಳಿತಕ್ಕೆ ರಾಜ್ಯ ಸರ್ಕಾರದಿಂದ ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ.

ಬೆಂಗಳೂರು, ಮೇ 14: ರಾಜಧಾನಿ ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ಬಿಬಿಎಂಪಿಗೆ (bbmp) ಕೊಕ್ ಕೊಡುವ ಸಮಯ ಕೊನೆಗೂ ಬಂದಿದೆ. ನಾಳೆಯಿಂದ (ಮೇ 15) ಗ್ರೇಟರ್ ಬೆಂಗಳೂರು (Greater Bengaluru) ಜಾರಿ ಆಗಲಿದೆ. ಆ ಮೂಲಕ ಬಿಬಿಎಂಪಿ ಗ್ರೇಟರ್ ಬೆಂಗಳೂರು ಅಥಾರಿಟಿ ಆಗಲಿದೆ. ಸದ್ಯ ಮೇ 5ರಿಂದ ಗ್ರೇಟರ್ ಬೆಂಗಳೂರು ಜಾರಿಗೆ ಬರುವಂತೆ ಸರ್ಕಾರ ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರಾಗಲಿದ್ದು, ಡಿಸಿಎಂ ಡಿಕೆ ಶಿವಕುಮಾರ್ಗೆ ಉಪಾಧ್ಯಕ್ಷರಾಗಲಿದ್ದಾರೆ.
ಈಗಾಗಲೇ ಗ್ರೇಟರ್ ಬೆಂಗಳೂರಿಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ಅಲರ್ಟ್ ಆದ ಸರ್ಕಾರ ನಾಳೆ (ಮೇ 15)ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ತಯಾರಿ ನಡೆಸಿತ್ತು. ಹಾಗಾಗಿ ನಾಳೆಯಿಂದ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದೆ. ಆ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗಲಿದೆ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬಂದಾಗ ಅತಿಹೆಚ್ಚು ಫಲಾನುಭವಿ ಕುಮಾರಸ್ವಾಮಿ ಆಗಲಿದ್ದಾರೆ: ಶಿವಕುಮಾರ್
ಬೆಂಗಳೂರಿನ ಆಡಳಿತ ನೋಡಿಕೊಳ್ಳುತ್ತಿದ್ದ ಬಿಬಿಎಂಪಿ ಇನ್ಮುಂದೆ ನೆನಪಾಗಿ ಉಳಿಯಲಿದೆ. ಬೆಂಗಳೂರನ್ನ ವಿಭಾಗ ಮಾಡಿ ಆಡಳಿತ ನಡೆಸುವ ಸರ್ಕಾರದ ಗ್ರೇಟರ್ ಬೆಂಗಳೂರು ಕನಸಿಗೆ ಇತ್ತೀಚೆಗಷ್ಟೇ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಸರ್ಕಾರ ಈ ವಿಧೆಯಕ ಜಾರಿ ಮಾಡಿ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಮಾಡಿದೆ. ಹಾಗಾಗಿ ನಾಳೆ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕ ಜಾರಿಗೆ ತಂದು ಶಿವಕುಮಾರ್ ಹೆಸರು ಕೆಡಿಸಿಕೊಳ್ಳುವುದು ಬೇಡ: ಎಸ್ ಎಸ್ ವಿಶ್ವನಾಥ್
ಇನ್ನು ಬಿಬಿಎಂಪಿ ನಾಳೆಯಿಂದ ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಹೆಸರು-ಸ್ವರೂಪದಲ್ಲಿ ಭಾರೀ ರೂಪಾಂತರಗೊಂಡು ಬಿಬಿಎಂಪಿ ಅನ್ನೋ ಹೆಸರು ಇತಿಹಾಸದ ಪುಟ ಸೇರಲಿದೆ. ಮೇ15 ರ ನಂತರ ಬಿಬಿಎಂಪಿ ಬದಲು ಅಂದಿನಿಂದಲೇ ಜಿಬಿಎ ಅಸ್ಥಿತ್ವಕ್ಕೆ ಬರಲಿದ್ದು, ಬೆಂಗಳೂರು ಆಡಳಿತ ಕಾಯ್ದೆ-2024 ಜಾರಿಯಾಗಲಿದೆ. ಈಗಿರುವ ಬಿಬಿಎಂಪಿಯನ್ನ ಮೂರು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆಗಳಿವೆ. ಈ ಮೂರು ಪಾಲಿಕೆಗಳ ವ್ಯಾಪ್ತಿ ಗ್ರೇಟರ್ ಬೆಂಗಳೂರಿಗೆ ಬರುವುದರಿಂದ ಜಿಬಿಎಗೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಾಗುತ್ತೆ. ಆಡಳಿತಾಧಿಕಾರಿ ಅಡಿಯಲ್ಲೇ ಮೂರು ಪಾಲಿಕೆಗಳ ಅಡಳಿತ ನಿರ್ವಹಣೆಯಾಗಲಿದ್ದು, ಮೂರು ಪಾಲಿಕೆಗಳಿಗೂ ಆಡಳಿತಾಧಿಕಾರಿಯೇ ಬಾಸ್ ಆಗಿರುತ್ತಾರೆ.
ಹೇಗಿರಲಿದೆ ಗ್ರೇಟರ್ ಬೆಂಗಳೂರು?
- ಗ್ರೇಟರ್ ಬೆಂಗಳೂರು ಅಥಾರಿಟಿಗೆ ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆ ಅಧಿಕಾರ ಇರಲಿದೆ.
- ಸುಮಾರು 1400 Sq ಕಿ.ಲೋ ಮೀಟರ್ GBA ವ್ಯಾಪ್ತಿಗೆ ಬರಲಿದೆ.
- 1 ರಿಂದ 10 ಕಾರ್ಪೊರೇಷನ್ ಗಳು GBA ವ್ಯಾಪ್ತಿಗೆ ಬರಲಿದೆ.
- ಈ ಕರಡು ಮಸೂದೆ ಸುಮಾರು 400 ವಾರ್ಡ್ಗಳ ರಚನೆಗೆ ಪ್ರಸ್ತಾಪಿಸಿದೆ.
- 5 ರಿಂದ10 ಕಾರ್ಪೋರೇಷನ್ ಇದ್ದು, ಒಂದೊಂದು ಕಾರ್ಪೋರೇಷನ್‌ಗೆ ಒಬ್ಬ ಅಯುಕ್ತ ಇರುತ್ತಾರೆ.
- ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:47 pm, Wed, 14 May 25







