AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಜೈಲಿಂದ ಕೈದಿಗಳು ಪರಾರಿ ಕೇಸ್​​: ಪ್ರಿಯಾಂಕ್​​-ವಿಜಯೇಂದ್ರ ನಡುವೆ ಸೋಷಿಯಲ್ ಮೀಡಿಯಾ ಪೋಸ್ಟ್​​ ವಾರ್​​

Karnataka Politcs: ಕಲಬುರಗಿ ಜೈಲಿನಿಂದ ಕೈದಿಗಳು ಪರಾರಿಯಾದ ಪ್ರಕರಣ ಇದೀಗ ರಾಜಕೀಯ ಕೆಸರೆರೆಚಾಟಗಳಿಗೆ ಕಾರಣವಾಗಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪರಸ್ಪರ ವಾಗ್ದಾಳಿ ನಡೆಸಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಲಬುರಗಿ ಜೈಲಿಂದ ಕೈದಿಗಳು ಪರಾರಿ ಕೇಸ್​​: ಪ್ರಿಯಾಂಕ್​​-ವಿಜಯೇಂದ್ರ ನಡುವೆ ಸೋಷಿಯಲ್ ಮೀಡಿಯಾ ಪೋಸ್ಟ್​​ ವಾರ್​​
ಪ್ರಿಯಾಂಕ್​​-ವಿಜಯೇಂದ್ರ ನಡುವೆ ಸೋಷಿಯಲ್ ಮೀಡಿಯಾ ಪೋಸ್ಟ್​​ ವಾರ್​​
ಪ್ರಸನ್ನ ಹೆಗಡೆ
|

Updated on:Jul 15, 2026 | 7:37 PM

Share

ಮುಖ್ಯಾಂಶಗಳು

  • ಕಲಬುರಗಿ ಕೇಂದ್ರ ಕಾರಾಗೃಹದಿಂದ 3 ಕೈದಿಗಳು ಪರಾರಿ ಕೇಸ್​​
  • ಪ್ರಿಯಾಂಕ್ ಖರ್ಗೆ​​-ವಿಜಯೇಂದ್ರ ನಡುವೆ ಪರಸ್ಪರ ವಾಗ್ಯುದ್ಧ
  • ಬಿಜೆಪಿಗೆ ಇತಿಹಾಸ ನೆನಪಿಸಿದ ಪ್ರಿಯಾಂಕ್​​ಗೆ ಬಿವೈವಿ ಕೌಂಟರ್​​

ಬೆಂಗಳೂರು, ಜುಲೈ 15: ಕಲಬುರಗಿ (Kalaburagi) ಕೇಂದ್ರ ಕಾರಾಗೃಹದಿಂದ ಮೂರು ಕೈದಿಗಳು ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿವೆ. ಅದರಲ್ಲೂ ಗೃಹ ಸಚಿವ ವಿರುದ್ಧ ಟೀಕಾ ಪ್ರಹಾರಗಳೇ ನಡೆಯುತ್ತಿವೆ. ಇವುಗಳಿಗೆಲ್ಲ ಪ್ರಿಯಾಂಕ್​​ ಖರ್ಗೆ (Priyank Kharge) ಕೌಂಟರ್​​ ಕೊಟ್ಟಿದ್ದು, ಟೀಕೆಗಳಿಗೆ ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು ಎಂದಿದ್ದಾರೆ.

ಬಿಜೆಪಿಗೆ ಇತಿಹಾಸ ನೆನಪಿಸಿದ ಪ್ರಿಯಾಂಕ್​​

2010ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ 8 ಕೈದಿಗಳು ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಪ್ರಕರಣ ಎಂದು ಪರಿಗಣಿಸಬಹುದು. ಇದು ಅಂದಿನ ಗೃಹಸಚಿವರ ವೈಫಲ್ಯವೆಂದು ಬಿಜೆಪಿ ಹೇಳುತ್ತದೆಯೇ? ಬಿಜೆಪಿ ಅವಧಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅತಿಥಿ ಗೃಹವಾಗಿ ಬದಲಾಗಿ ಖೈದಿಗಳಿಗೆ ಸಕಲ ಸವಲತ್ತುಗಳು ದೊರಕುತ್ತಿದ್ದ ಸುದ್ದಿಗಳನ್ನು ರಾಜ್ಯ ನೋಡಿದೆ. ಇದನ್ನು ಬಿಜೆಪಿ ಸರ್ಕಾರದ ವೈಫಲ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಿನಿಂದ ಕೈದಿಗಳು ಪರಾರಿ ಕೇಸ್; 8 ಜೈಲಧಿಕಾರಿಗಳ ಅಮಾನತು

ಗೃಹ ಸಚಿವರ ಆರೋಪಕ್ಕೆ ವಿಜಯೇಂದ್ರ ಕೌಂಟರ್

ಈ ಬೆನ್ನಲ್ಲೇ ಪ್ರಿಯಾಂಕ್​​ ಖರ್ಗೆ ಆರೋಪಗಳಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಯೇಂದ್ರ ಕೌಂಟರ್​​ ಕೊಟ್ಟಿದ್ದಾರೆ. ಐಸಿಸ್ ಉಗ್ರನಿಗೆ ರಾಜಾತಿಥ್ಯ ನೀಡಿದ ಮಹಾನ ಸರ್ಕಾರದ ಮಹಾನ್ ಗೃಹ ಸಚಿವರೇ, ನೀವು RSS ಬಗ್ಗೆ ಚಿಂತೆ ಮಾಡುವುದನ್ನು ಬಿಡಿ. ನಿಮ್ಮ ತವರು ಜಿಲ್ಲೆಯಲ್ಲಿಯೇ ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡಿದ್ದು ನಿಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿ. 2010ರಲ್ಲಿ ಆಯಿತು ಅಂತ ಈಗ ನೀವು ಜೈಲಿನಿಂದ ತಪ್ಪಿಸಿಕೊಳ್ಳಲು ಬಿಟ್ಟಿದ್ದೀರಾ? ನಿಮ್ಮ ವೈಪಲ್ಯ ಮರೆ ಮಾಚಲು ಕಾಗಕ್ಕ ಗುಬ್ಬಕ್ಕ ಕಥೆ ಹೇಳಬೇಡಿ. ಪಾಪ, ನಿಮಗೆ RSS ಬಗ್ಗೆ ಅಧ್ಯಯನ ಮಾಡೋಕೆ ಸಮಯ ಸಿಗುತ್ತಿಲ್ಲ, ಇನ್ನೂ ಜೈಲು, ಕಾನೂನು ಸುವವ್ಯಸ್ಥೆ ಕಾಪಾಡೋಕೆ ಸಮಯ ಎಲ್ಲಿದೆ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.

ಮಹತ್ವದ ಇಲಾಖೆಯ ಜವಾಬ್ದಾರಿ ಹೊತ್ತಿರುವ ತಾವು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಮ್ಮ ಯೋಗ್ಯತೆಯನ್ನು ತೋರಿಸುತ್ತದೆ. ತಮ್ಮ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ಜೈಲಿನಲ್ಲಿ ಏನೇನಾಗಿತ್ತು ಎನ್ನುವದು ಇಡೀ ದೇಶದ ಜನತೆಗೆ ಗೊತ್ತಿದೆ ಮಿಸ್ಟರ್ ಹೋಮ್ ಮಿನಿಸ್ಟರ್. ನಾಚಿಕೆ ಆಗಬೇಕು ನಿಮಗೆ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡೋಕೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​

Published On - 7:28 pm, Wed, 15 July 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'