AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲ್ ಬಾಗ್ ಫ್ಲವರ್ ಶೋಗೆ ಇಂದು ತೆರೆ: ಯಾರೆಲ್ಲ ಹೋಗಿಲ್ಲ, ಹೋಗಿ ನೋಡಿಕೊಂಡು ಬನ್ನಿ

ಲಾಲ್ ಬಾಗ್ ಶೋಗೆ ಇಂದು ಕೊನೆ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಜೆ ಇರುವ ಕಾರಣ ಇಂದು ಲಾಲ್​ ಬಾಗ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ, ವಿದ್ಯಾರ್ಥಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಲಾಲ್ ಬಾಗ್​ನ ನಾಲ್ಕು ಗೇಟ್​ಗಳಲ್ಲಿ ಜನರ ಎಂಟ್ರಿಗೆ ಅವಕಾಶ ನೀಡಲಾಗಿದೆ.

ಲಾಲ್ ಬಾಗ್ ಫ್ಲವರ್ ಶೋಗೆ ಇಂದು ತೆರೆ: ಯಾರೆಲ್ಲ ಹೋಗಿಲ್ಲ, ಹೋಗಿ ನೋಡಿಕೊಂಡು ಬನ್ನಿ
ಲಾಲ್ ಬಾಗ್ ಫ್ಲವರ್ ಶೋ
Poornima Agali Nagaraj
| Edited By: |

Updated on: Aug 15, 2023 | 10:40 AM

Share

ಬೆಂಗಳೂರು, ಆ.15: ಸ್ವಾತಂತ್ರ್ಯ ದಿನಾಚರಣೆ(Independence Day) ಪ್ರಯುಕ್ತ ಸಸ್ಯಕಾಶಿ ಲಾಲ್ ಬಾಗ್​ನಲ್ಲಿ(Lalbagh Flower Show) ಹಮ್ಮಿಕೊಳ್ಳಲಾಗಿದ್ದ 214ನೇ ಫ್ಲವರ್ ಶೋ ಇಂದು ಕೊನೆಗೊಳ್ಳಲಿದೆ. ವಿಧಾನ ಸೌಧ ಹಾಗೂ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ ನಲ್ಲಿ ನಿರ್ಮಿಸಿದ್ದ ಫ್ಲವರ್ ಶೋ ಯಶಸ್ವಿಯಾಗಿ 11 ದಿನಗಳನ್ನು ಪೂರೈಸಿದ್ದು ಇಂದು ಲಾಲ್ ಬಾಗ್ ಶೋ ಕೊನೆಯ ದಿನಕ್ಕೆ ಕಾಲಿಟ್ಟಿದೆ. ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿರುವವರಿಗೆ ನಮ್ಮ ಮೆಟ್ರೋ(Namma Metro) ಕೂಡ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಫಲಪುಷ್ಪ ಪ್ರದರ್ಶನ ಹಿನ್ನೆಲೆ ಲಾಲ್​ಬಾಗ್​ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು 30 ರೂಪಾಯಿಗೆ ನಿಗದಿ ಮಾಡಿದೆ.

ಲಾಲ್ ಬಾಗ್ ಶೋಗೆ ಇಂದು ಕೊನೆ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಜೆ ಇರುವ ಕಾರಣ ಇಂದು ಲಾಲ್​ ಬಾಗ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ, ವಿದ್ಯಾರ್ಥಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿಯಲ್ಲದೇ, ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಬಹುದು. ಹೀಗಾಗಿ ಲಾಲ್ ಬಾಗ್​ನ ನಾಲ್ಕು ಗೇಟ್​ಗಳಲ್ಲಿ ಜನರ ಎಂಟ್ರಿಗೆ ಅವಕಾಶ ನೀಡಲಾಗಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಹಿನ್ನೆಲೆ ಸಂಜೆ 8 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ಇಂದು ಫ್ಲವರ್ ಶೋ ಬರುವವರಿಗೆ ಮೆಟ್ರೋದಲ್ಲಿ ಪೇಪರ್ ಟಿಕೆಟ್ ವಿತರಣೆಯ ಜೊತೆಗೆ ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಎಲ್ಲಿಗೆ ಹೋದ್ರು 30 ರೂ‌ ನಿಗಧಿ ಮಾಡಲಾಗಿದೆ. ಹಾಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು: ಆಗಸ್ಟ್ 15 ರಂದು ಮೆಟ್ರೋ ಪ್ರಯಾಣ ದರ 30 ರೂ. ನಿಗದಿ ಮಾಡಿದ ಬಿಎಂಆರ್​ಸಿಎಲ್

ಲಾಲ್ ಬಾಗ್​ಗೆ ಈವರೆಗೆ 4 ಲಕ್ಷ ಮಂದಿ ಭೇಟಿ

ಇನ್ನು ಈ ಬಾರಿಯ ಲಾಲ್ ಬಾಗ್ ಫ್ಲವರ್ ಶೋನಲ್ಲಿ ವಿಧಾನಸೌಧದ 18 ಅಡಿ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಜನರನ್ನು ಸೆಳೆದಿದೆ. 214ನೇ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಅವರು ಆಗಸ್ಟ್ 4 ರಂದು ಉದ್ಘಾಟಿಸಿದ್ದರು. ಆಗಸ್ಟ್ 4ರಿಂದ ಆಗಸ್ಟ್ 14ರ ವರೆಗೆ ಒಟ್ಟು ನಾಲ್ಕು ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಹಾಗೂ 1.8 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಲಾಲ್​​ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಹಿರಿಯರಿಗೆ 70 ರೂ., ಮಕ್ಕಳಿಗೆ 30 ರೂ. ಹಾಗೂ ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌
New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌