AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಲಾಡ್ಜ್​ನಲ್ಲಿ ಸಿಕ್ತು ಜೀವಂತ ಗುಂಡುಗಳಿದ್ದ ಮ್ಯಾಗಜೀನ್! ಅಮೇರಿಕ ನಿರ್ಮಿತ ಬುಲೆಟ್ಸ್ ತಂದಿದ್ದ ಯುವಕ ಅಂದರ್

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ ಒಂದರಲ್ಲಿ ಯುವತಿಯೊಂದಿಗೆ ತಂಗಿದ್ದ ಅರ್ಮಾನ್ ಮುತಾಹರ್ ಎಂಬಾತ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಬಿಟ್ಟು ಹೋಗಿದ್ದ. ಹೋಟೆಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಜೆ.ಸಿ. ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.

ಬೆಂಗಳೂರಿನ ಲಾಡ್ಜ್​ನಲ್ಲಿ ಸಿಕ್ತು ಜೀವಂತ ಗುಂಡುಗಳಿದ್ದ ಮ್ಯಾಗಜೀನ್! ಅಮೇರಿಕ ನಿರ್ಮಿತ ಬುಲೆಟ್ಸ್ ತಂದಿದ್ದ ಯುವಕ ಅಂದರ್
ಲಾಡ್ಜ್ ನಲ್ಲಿ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆImage Credit source: google Gemini
ರಾಚಪ್ಪಾಜಿ ನಾಯ್ಕ್
| Edited By: |

Updated on:May 19, 2026 | 12:41 PM

Share

ಬೆಂಗಳೂರು, ಮೇ 19: ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಜೀನ್ (Live bullet) ಪತ್ತೆಯಾಗಿದ್ದು, ಈ ಸಂಬಂಧ ಜೆ.ಸಿ. ನಗರ ಪೊಲೀಸರು ಆರೋಪಿ ಅರ್ಮಾನ್ ಮುತಾಹರ್ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಯುವತಿಯೊಬ್ಬಳೊಂದಿಗೆ ಲಾಡ್ಜ್​ಗೆ ಬಂದಿದ್ದ ಆರೋಪಿ, ಪಿಸ್ತೂಲ್ ಮ್ಯಾಗಜೀನ್ ಅನ್ನು ರೂಮ್​ನಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಪದೇ ಪದೇ ಕೇಳಿದರೂ ಸರಿಯಾಗಿ ಸ್ಪಂದಿಸದ ಕಾರಣ ಹೋಟೆಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಕೊಠಡಿಯಲ್ಲಿ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆ.
  • ಮ್ಯಾಗಜೀನ್ ಬಿಟ್ಟು ಹೋಗಿದ್ದ ಆರೋಪಿ ಅರ್ಮಾನ್‌ನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
  • ಪತ್ತೆಯಾದ ಬುಲೆಟ್‌ಗಳು ಅಮೆರಿಕ ದೇಶದಲ್ಲಿ ತಯಾರಾಗಿದ್ದು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನಡೆದಿದ್ದೇನು?

ಕಳೆದ ಏಪ್ರಿಲ್ 27ರಂದು ರಾತ್ರಿ ಆರೋಪಿ ಅರ್ಮಾನ್ ಮುತಾಹರ್ ಯುವತಿಯೊಬ್ಬಳ ಜೊತೆ ಬಂದು ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ರೂಂ ಒಂದನ್ನು ಬುಕ್ ಮಾಡಿದ್ದ. ಆತನೊಂದಿಗೆ ಓರ್ವ ಯುವತಿಯೂ ಅದೇ ರೂಮ್​ನಲ್ಲಿ ತಂಗಿದ್ದಳು ಎಂದು ಲಾಡ್ಜ್​ನ ಮ್ಯಾನೇಜರ್ ತಿಳಿಸಿದ್ದಾರೆ. ಗುರುತಿನ ಚೀಟಿಗಾಗಿ ತನ್ನ ಪಾಸ್‌ಪೋರ್ಟ್ ನೀಡಿದ್ದ ಆತ, ಮರುದಿನ (ಏಪ್ರಿಲ್ 28) ಬೆಳಗ್ಗೆ ಕೊಠಡಿಯಿಂದ ಚೆಕ್-ಔಟ್ ಆಗಿದ್ದ.

“ಬುಲೆಟ್ ಇಟ್ಟಿದ್ದೀನಿ, ಎತ್ತಿಡಿ” ಎಂದು ಕರೆ ಮಾಡಿದ ಆರೋಪಿ

ಹೋಟೆಲ್‌ನಿಂದ ಹೋದ ಸ್ವಲ್ಪ ಹೊತ್ತಿನ ಬಳಿಕ ರಿಸೆಪ್ಷನ್‌ಗೆ ಕರೆ ಮಾಡಿದ ಅರ್ಮಾನ್, ಜೀವಂತ ಗುಂಡುಗಳಿರುವ ನನ್ನ ಪಿಸ್ತೂಲಿನ ಮ್ಯಾಗಜೀನ್ ಅನ್ನು ರೂಮ್‌ನಲ್ಲೇ ಮರೆತು ಬಿಟ್ಟು ಬಂದಿದ್ದೇನೆ. ಅದನ್ನು ಎತ್ತಿಡಿ ಎಂದು ತಿಳಿಸಿದ್ದ. ಅದಾದ ನಂತರ ಆತ ತಂಗಿದ್ದ ಕೊಠಡಿಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲಿಸಿದಾಗ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆಯಾಗಿದೆ. ಒಂದೆರಡು ದಿನಗಳಲ್ಲಿ ಬಂದು ಪಡೆದುಕೊಳ್ಳುತ್ತೇನೆ ಎಂದಿದ್ದ ಆರೋಪಿ, ಹೋಟೆಲ್ ಸಿಬ್ಬಂದಿ ಹಲವು ಬಾರಿ ಕರೆ ಮಾಡಿದರೂ ವಾಪಸ್ ಬಂದಿರಲಿಲ್ಲ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಮ್ಯಾನೇಜರ್

ಕೊನೆಗೆ ಮೇ 4ರಂದು ಹೋಟೆಲ್ ಮ್ಯಾನೇಜರ್ ಕರೆ ಮಾಡಿ, ನಿಮ್ಮ ಮ್ಯಾಗಜೀನ್ ಅನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದೇವೆ ಎಂದಾಗ, ಸರಿ, ನಾನು ಪೊಲೀಸ್ ಠಾಣೆಯಿಂದಲೇ ಪಡೆದುಕೊಳ್ಳುತ್ತೇನೆ ಎಂದು ಅರ್ಮಾನ್ ಉತ್ತರ ನೀಡಿದ್ದ. ಅದಾದ ಬಳಿಕ ಹೋಟೆಲ್ ಮ್ಯಾನೇಜರ್ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿ ಮ್ಯಾಗಜೀನ್ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ ಕೋಲಾರ ಗಡಿಯಲ್ಲಿ ಭಾರಿ ಪ್ರಮಾಣದ ಲೈವ್ ಬುಲೆಟ್ ಪತ್ತೆ: 1969ರ ಬ್ಯಾಚ್‌ನ ಗುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು

ಅವರ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅದು ಅಮೇರಿಕಾದಲ್ಲಿ ತಯಾರಿಸಲಾದ ಬುಲೆಟ್‌ಗಳು ಎಂಬುದು ಪತ್ತೆಯಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಈತ ದೇಶದೊಳಗೆ ಹಾಗೂ ಹೋಟೆಲ್‌ಗೆ ಇವುಗಳನ್ನು ಹೇಗೆ ತಂದಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Tue, 19 May 26

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ