Republic Day: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಜ. 26 ರ ಭಾನುವಾರ ಬೇಗ ಆರಂಭವಾಗಲಿದೆ ರೈಲು

ಗಣರಾಜ್ಯೋತ್ಸವದ ಅಂಗವಾಗಿ, ಬೆಂಗಳೂರು ಮೆಟ್ರೋ ರೈಲುಗಳು ಜನವರಿ 26 ರಂದು ಬೆಳಿಗ್ಗೆ 6 ಗಂಟೆಗೆ ಕಾರ್ಯಾರಂಭಿಸಲಿವೆ. ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಹೆಚ್ಚುವರಿ 20 ರೈಲುಗಳನ್ನು ಸೇವೆಗೆ ಒದಗಿಸಲಾಗುವುದು. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪೇಪರ್ ಟಿಕೆಟ್‌ಗಳನ್ನು 30 ರೂಪಾಯಿಗಳಿಗೆ ಮಾರಾಟ ಮಾಡಲಾಗುವುದು. ಸ್ಮಾರ್ಟ್ ಕಾರ್ಡ್, NCMC ಕಾರ್ಡ್, ಅಥವಾ QR ಟಿಕೆಟ್‌ಗಳನ್ನು ಬಳಸಬಹುದು.

Republic Day: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಜ. 26 ರ ಭಾನುವಾರ ಬೇಗ ಆರಂಭವಾಗಲಿದೆ ರೈಲು
ಮೆಟ್ರೋ
Follow us
Kiran Surya
| Updated By: ವಿವೇಕ ಬಿರಾದಾರ

Updated on:Jan 24, 2025 | 1:25 PM

ಬೆಂಗಳೂರು, ಜನವರಿ 24: ಗಣರಾಜ್ಯೋತ್ಸವ (Republic Day) ಅಂಗವಾಗಿ ನಮ್ಮ ಮೆಟ್ರೋ (Namma Metro) ರೈಲು ಕಾರ್ಯಾಚರಣೆ ಭಾನುವಾರ (ಜನವರಿ 26) ರಂದು ಒಂದು ಗಂಟೆ ಬೇಗ ಆರಂಭವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಭಾನುವಾರ ನಮ್ಮ ಮೆಟ್ರೋ ರೈಲು ಸೇವೆಗಳು ಬೆಳಿಗ್ಗೆ 7 ಗಂಟೆಯ ಬದಲಿಗೆ ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾರಂಭ ಮಾಡಲಿವೆ. ನಾಲ್ಕೂ ಟರ್ಮಿನಲ್​ಗಳಿಂದ ಮತ್ತು ಮೆಜೆಸ್ಟಿಕ್​ನಿಂದ ಮೊದಲ ರೈಲು ಬೆಳಗ್ಗೆ 6 ಗಂಟೆಗೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.

ಲಾಲ್​ಬಾಗ್​​ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಮತ್ತು ಅಂದು ಮಾದಾವರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ತೆರಳುವವರ ಅನುಕೂಲಕ್ಕಾಗಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚುವರಿಯಾಗಿ 20 ರೈಲುಗಳು ಸಂಚಾರ ಮಾಡಲಿವೆ. ಈ ವೇಳೆ ಸ್ಮಾರ್ಟ್ ಕಾರ್ಡ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಅಥವಾ ಕ್ಯೂಆರ್ ಟಿಕೆಟ್ ಬಳಸಬಹುದಾಗಿ ಎಂದು ತಿಳಿಸಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಮುಂದಿನ ವಾರದಿಂದ ಬಹುತೇಕ ಖಚಿತ

ಪೇಪರ್ ಟಿಕೆಟ್ ವ್ಯವಸ್ಥೆ

ಲಾಲ್​ಬಾಗ್​ ಮೆಟ್ರೋ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಟೋಕನ್ ಬದಲಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಫ್ಲಾಟ್ 30 ರೂಪಾಯಿಯಂತೆ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಈ ಪೇಪರ್ ಟಿಕೆಟ್​ಗಳ ಮೂಲಕ ಲಾಲ್​ಬಾಗ್​ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.

3 ಲಕ್ಷ ರೂ. ದಂಡ ವಸೂಲಿ

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ, ಅಸಭ್ಯವಾದ ಫೋಟೋ, ವಿಡಿಯೋ ಮಾಡುವ, ರೀಲ್ಸ್ ಮಾಡುವ, ಜೋರಾಗಿ ಹಾಡು ಹಾಕಿ ತೊಂದರೆ ಕೊಡುವವರಿಗೆ ನಮ್ಮ ಮೆಟ್ರೋ ಬಿಸಿ ಮುಟ್ಟಿಸಿದೆ. ನೂರಾರು ಕೇಸ್ ದಾಖಲಿಸಿ, ಲಕ್ಷಾಂತರ ರುಪಾಯಿ ದಂಡ ವಸೂಲಿ ಮಾಡಿದೆ. ಕಳೆದೊಂದು ವರ್ಷದಲ್ಲಿ 702 ಮಂದಿಯಿಂದ ಬರೋಬ್ಬರಿ 3,17,220 ರೂ. ದಂಡ ವಸೂಲಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Fri, 24 January 25