ಹೊಸ ವರ್ಷದ ಮಧ್ಯ ರಾತ್ರಿ ಬೆಂಗಳೂರಿನಲ್ಲಿ ಮಹಿಳೆಯರ ಸೇಫ್ಟಿಗೆ ಹೊಸ ಐಡಿಯಾ..!
ಹೊಸ ವರ್ಷಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗಿದೆ.. ನ್ಯೂ ಈಯರ್ ಗೆ ಕೌಂಟ್ ಡೌನ್ ಶುರುವಾಗುತ್ತಿದ್ದಂತೆಯೇ ಬ್ರಿಗೇಡ್ ರೋಡ್ ಲಕ ಲಕ ಹೊಳೆಯುತ್ತಿದೆ. ಕ್ರಿಸ್ಮಸ್, ನ್ಯೂ ಈಯರ್ ಥೀಮ್ ನಲ್ಲಿ ಬ್ರಿಗೇಡ್ ರಸ್ತೆಯನ್ನು ನವ ವಧುವಿನಂತೆ ಅಲಂಕಾರ ಮಾಡಲಾಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಇದರ ಜೊತೆಗೆ ಹೊಸ ವರ್ಷದ ಮಧ್ಯ ರಾತ್ರಿ ಮಹಿಳೆಯರ ಸೇಫ್ಟಿಗೆ ಪಬ್, ರೆಸ್ಟೋರೆಂಟ್ ಗಳು ಹೊಸ ಐಡಿಯಾ ಕಂಡುಕೊಂಡಿವೆ.
ಬೆಂಗಳೂರು, (ಡಿಸೆಂಬರ್ 24): ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗಿದೆ. ಈ ಸಲದ ನ್ಯೂ ಈಯರ್ ಪ್ಲಾನ್ ಎಲ್ಲಿ ಎಂದು ಕೇಳಿದ್ರೆ ಬೆಂಗಳೂರಿನ ಅರ್ಧಕರ್ಧ ಜನ ಹೇಳುವುದು ಬ್ರಿಗೇಡ್ ರೋಡ್ ಅಂತ. ಇನ್ನು ಹೊಸ ವರ್ಷಕ್ಕೆ ಈಗಾಗಲೇ ಪಬ್, ರೆಸ್ಟೋರೆಂಟ್ ಗಳಲ್ಲಿ ಬುಕ್ಕಿಂಗ್ ಶುರುವಾಗಿದೆ. ಕಪಲ್ ಬುಕ್ಕಿಂಗ್ ಮೇಲೆ ಸಖತ್ ಆಫರ್ ಕೊಡಲಾಗುತ್ತಿದೆ. ಬ್ರಿಗೇಡ್ ರೋಡ್ ಸೇರಿದಂತೆ ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ಹೆಚ್ ಎಸ್ ಆರ್ ಲೇಔಟ್ ಹೀಗೆ ನಾನಾ ಕಡೆಗಳಲ್ಲಿ ಪಬ್, ಬಾರ್ ರೆಸ್ಟೋರೆಂಟ್ ಗಳಲ್ಲಿ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಈ ಸಲ ಪಾರ್ಟಿ ಮಾಡುವವರ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ ಕೂಡ ಮಾಡಲಾಗಿದೆ. ಪಾರ್ಟಿ ಮಾಡಿ ಮನೆಗೆ ಹೋಗಲು ಕ್ಯಾಬ್ ಫೆಸಿಲಿಟಿ ನೀಡಲಾಗುತ್ತಿದೆ.
ಪಬ್ ಬುಕ್ಕಿಂಗ್ ಜೊತೆ ಕ್ಯಾಬ್ ಸೇವೆ
ಹೌದು…ರಾತ್ರಿಯಲ್ಲ ಪಾರ್ಟಿ ಮಾಡಿ ಎಲ್ಲೊಂದರಲ್ಲಿ ಓಡಾಡುವುದು. ಹಾಗೇ ಕುಡಿದ ಮತ್ತಲ್ಲಿ ಬೈಕ್, ಕಾರು ಓಡಿಸಲಾಗದೇ ಅಪಘಾತ ಪ್ರಕರಣಗಳು ಸಂಭವಿಸಿವೆ. ಹೀಗಾಗಿ ಈ ಬಾರಿ ಈ ರೀತಿಯ ಅನಾಹುತಗಳಿಗೆ ಬ್ರೇಕ್ ಹಾಕಲು ಪಬ್ನವರೇ ವಿಶೇಷ ಕ್ಯಾಬ್ ಫೆಸಿಲಿಟಿ ನೀಡುತ್ತಿವೆ. ಹೀಗಾಗಿ ಪಬ್ ಬುಕ್ಕಿಂಗ್ ಜೊತೆ ಕ್ಯಾಬ್ ಸೇವೆ ಇರಲಿದೆ.
ಇದನ್ನೂ ಓದಿ: ಬೆಂಗಳೂರು ಹೊಸ ವರ್ಷಾಚರಣೆ: ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗಿಲ್ಲ ನಿರ್ಬಂಧ, ಪರಮೇಶ್ವರ್
ಪಬ್ ಪಾರ್ಟಿ ಬುಕ್ಕಿಂಗ್ ಜೊತೆ ಕ್ಯಾಬ್ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. ಮಹಿಳೆಯರ ಸೇಫ್ಟಿಗೂ ಹೆಚ್ಚಿನ ಗಮನ ಕೊಡಲು ಗೃಹ ಇಲಾಖೆ ಸೂಚಿಸಿದೆ. ಬ್ರಿಗೇಡ್ ರೋಡ್ ಸೇರಿ ಕ್ರೌಡ್ ಜಾಗಗಳಲ್ಲಿ ಸೇಫ್ ಸ್ಪಾಟ್ ರಚಿಸಲು ಸೂಚಿಸಲಾಗಿದೆ.. ಡಿಸೆಂಬರ್ 31 ರಂದು ನಗರದಲ್ಲಿ 7 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬ್ರಿಗೇಡ್ ರೋಡ್ ಒಂದರಲ್ಲೇ 2 ರಿಂದ 3 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆ ತನಕ ಪಬ್, ರೆಸ್ಟೋರೆಂಟ್ ಗಳನ್ನು ತೆರೆಯುವ ಅವಕಾಶ ಕೇಳಲಾಗಿದೆ. ಪೊಲೀಸ್ ಇಲಾಖೆಯಿಂದ ರಾತ್ರಿ 1 ಗಂಟೆ ತನಕ ಅವಕಾಶ ಕೊಡಲು ಸಾಧ್ಯತೆ ಇದೆ.
ಹೊಸ ವರ್ಷಕ್ಕೆ ಬ್ರಿಗೇಡ್ ರೋಡ್ ಲಕಲಕ
ಹೊಸ ವರ್ಷಕ್ಕೆ ಹೇಳಿ ಮಾಡಿಸಿದಂತಿರೋ ಬ್ರಿಗೇಡ್ ರೋಡ್ ನಲ್ಲಿ ಈ ಸಲವೂ ನ್ಯೂ ಈಯರ್ ಸೆಲೆಬ್ರೇಷನ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬ್ರಿಗೇಡ್ ರೋಡ್ ಟ್ರೇಡರ್ಸ್ ಅಸೋಸಿಯೇಷನ್ ವತಿಯಿಂದ ಈಗಾಗಲೇ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ..ಸರಾಸರಿ 15 ಲಕ್ಷ ವೆಚ್ಚದಲ್ಲಿ ಬ್ರಿಗೇಡ್ ರೋಡ್ ಅನ್ನು ನವ ವಧುವಿನಂತೆ ಸಿಂಗಾರ ಮಾಡಲಾಗಿದೆ. ಡಿಸೆಂಬರ್ 15 ರಿಂದಲೇ ಲೈಟಿಂಗ್ಸ್ ಹಾಕಲಾಗಿದ್ದು, ಈಗಾಗಲೇ ನ್ಯೂ ಈಯರ್ ಹ್ಯಾಪಿ ಮೂಡ್ನಲ್ಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.