AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಗಳಿಗೆ ಔಷಧಿ ಕೊರತೆ ಆತಂಕ: ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ

ಯುದ್ಧದ ಕರಿನೆರಳು ಮತ್ತು ಎಲ್‌ಪಿಜಿ ಗ್ಯಾಸ್ ಕೊರತೆಯು ದೇಶದಲ್ಲಿ ಔಷಧ ತಯಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದರಿಂದ ಉತ್ಪಾದನೆ ಕಷ್ಟವಾಗುತ್ತಿದೆ ಎಂದು ಫಾರ್ಮಾಸ್ಯುಟಿಕಲ್ ಕಂಪನಿಗಳು ಆರೋಗ್ಯ ಸಚಿವರಿಗೆ ಪತ್ರ ಬರೆದಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಔಷಧಿಗಳ ಕೊರತೆ ಎದುರಾಗುವ ಭೀತಿ ಇದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ರೋಗಿಗಳಿಗೆ ಔಷಧಿ ಕೊರತೆ ಆತಂಕ: ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ
ಔಷಧಿImage Credit source: apikospharma.com
ಪ್ರಸನ್ನ ಗಾಂವ್ಕರ್​
| Edited By: |

Updated on: Apr 09, 2026 | 3:48 PM

Share

ಬೆಂಗಳೂರು, ಏಪ್ರಿಲ್ 09: ಇರಾನ್, ಅಮೆರಿಕ ನಡುವಿನ ಯುದ್ಧಕ್ಕೆ 15 ದಿನಗಳ ವಿರಾಮ ಬಿದ್ದಿದೆ. ಇದರಿಂದ ಹೊರ್ಮುಝ್​​​​​​​​​​​​​ನಲ್ಲಿ ಸಿಲುಕಿಕೊಂಡಿರುವ ಭಾರತದ ಹಡಗುಗಳು ಇನ್ಮುಂದೆ ಬರಲಿದೆ. ಆದರೆ ಕರ್ನಾಟಕದಲ್ಲಿ ಎಲ್‌ಪಿಜಿ ಗ್ಯಾಸ್ ಸಮಸ್ಯೆ ಮಾತ್ರ ಮುಂದುವರಿದಿದೆ. ಆ ಮೂಲಕ ಔಷಧಿ ತಯಾರಿಕೆಯ (medicine manufacturing) ಮೇಲೂ ಯುದ್ಧದ ಕರಿನೆರಳು ಆವರಿಸಿದಂತಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕುರಿತಾಗಿ ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ ಬರೆದಿವೆ.

ಔಷಧಿ ತಯಾರಿಕೆಗೂ ಹೊಡೆತ

ಎಲ್‌ಪಿಜಿ ಗ್ಯಾಸ್​ ಸಮಸ್ಯೆ ಸರಿಯಾಗಿಲ್ಲ. ಹೀಗಾಗಿ ಹೋಟೆಲ್ ಉದ್ಯಮಕ್ಕೆ ಒಂದು ಕಡೆ ಸಂಕಷ್ಟದಲ್ಲಿ ಇದ್ದರೆ, ಮತ್ತೊಂದಡೆ ಔಷಧ ವಲಯದ ಮೇಲೆ ಯುದ್ಧದ ಕರಿನೆರಳು ಆವರಿಸಿದೆ. ಅಮೆರಿಕ, ಇಸ್ರೇಲ್, ಇರಾನ್‌ ಯುದ್ಧದ ಎಫೆಕ್ಟ್ ಸಾಕಷ್ಟು ವಲಯಗಳ ಮೇಲೆ ಪರಿಣಾಮ ಬೀರಿದೆ‌. ಇದರ ಮಧ್ಯೆ ಔಷಧಿ ತಯಾರಿಕೆಗೂ ಹೊಡೆತ ಬಿದ್ದಿದೆ.

ಇದನ್ನೂ ಓದಿ: ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಈ ವಾರದಿಂದಲೇ ಔಷಧ ಬೆಲೆ ಏರಿಕೆ

ಎಲ್‌ಪಿಜಿ ಗ್ಯಾಸ್ ಕೊರತೆ ಬೆನ್ನಲ್ಲೇ ಔಷಧಿತಯಾರಿಕೆಗೂ ಹೊಡೆತ ಹಿನ್ನೆಲೆ ಫಾರ್ಮಾಸ್ಯುಟಿಕಲ್ಸ್ ಕಂಪನಿಯಿಂದ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಔಷಧಿ ತಯಾರಿಕೆಗೆ ಕಷ್ಟವಾಗಲಿದೆ ಎಂದು ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಔಷಧಗಳ ದರ ಏರಿಕೆ ಸಾಧ್ಯತೆ

ಇನ್ನು ಎಲ್​ಪಿಜಿ ಗ್ಯಾಸ್ ಅಭಾವ ಹಿನ್ನಲೆ ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಯುದ್ಧದ ಪರಿಣಾಮ ಸಪ್ಕೈ ಚೈನ್ ಮೇಲೆ ಪರಿಣಾಮ ಬಿದ್ದ ಕಾರಣ ಔಷಧಗಳ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಮುಂದಿನ ವಾರದಿಂದ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಔಷಧಗಳ ದರ ಹೆಚ್ಚಳವಾಗಲಿದೆ.

ಇದನ್ನೂ ಓದಿ: ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ

ಸರಾಸರಿ 15 ರಿಂದ 20% ಔಷಧ ದರಗಳು ಹೆಚ್ಚಳ ಆಗಲಿದ್ದು. ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್‌ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ಸ್ ಸೇರಿ 600 ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಳ ಆಗಲಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಔಷಧ ದರ ಹೆಚ್ಚಳ ಮಾಡಲಾಗುತ್ತದೆ. 5 ರಿಂದ 10% ದರ ಹೆಚ್ಚಳ ಇರುತ್ತದೆ‌. ಆದರೆ ಈ ಬಾರಿ ಯುದ್ಧದ ಎಫೆಕ್ಟ್ ಕಾರಣ 15 ರಿಂದ 20% ಪೂರ್ಣ ಏರಿಕೆ ಆಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us