ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್​ರೇಪ್​ ಪ್ರಕರಣ; ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್

ಬೆಳಗಿನ ಜಾವ ಅರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಬಂಧನಕ್ಕೆ ಒಳಗಾಗುವಂತೆ ಆರೋಪಿಗೆ ಹೇಳಿದರು. ಆದರೆ ಪೊಲೀಸರ ಮಾತನ್ನು ಕೇಳದ ಶೂಬೂಜ್ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಪಿಎಸ್ಐ ಶಿವರಾಜ್ ಮತ್ತು ದೇವೇಂದ್ರ ನಾಯಕ್​ಗೆ ಗಾಯವಾಗಿದೆ.

ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್​ರೇಪ್​ ಪ್ರಕರಣ; ಮತ್ತೊಬ್ಬ ಆರೋಪಿಯ ಮೇಲೆ ಫೈರಿಂಗ್
ಬಂಧಿತ ಆರೋಪಿ ಶೂಬೂಜ್

ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶೂಬೂಜ್ ಎಂಬುವವನ ಮೇಲೆ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿ ಶೂಬೂಜ್ ಬಂಧನಕ್ಕೆ ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ.

ಇಂದು ಬೆಳಗಿನ ಜಾವ ಅರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಬಂಧನಕ್ಕೆ ಒಳಗಾಗುವಂತೆ ಆರೋಪಿಗೆ ಹೇಳಿದರು. ಆದರೆ ಪೊಲೀಸರ ಮಾತನ್ನು ಕೇಳದ ಶೂಬೂಜ್ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಪಿಎಸ್ಐ ಶಿವರಾಜ್ ಮತ್ತು ದೇವೇಂದ್ರ ನಾಯಕ್​ಗೆ ಗಾಯವಾಗಿದೆ. ಶರಣಾಗಲು ಪೊಲೀಸರು ತಿಳಿಸಿದರೂ ಕೇಳದ ಹಿನ್ನೆಲೆ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರಾಂಪುರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸರು ಪೇಪರ್ ಆಯುವವರ ಶೆಡ್​ನಲ್ಲಿ ಆರೋಪಿ ಇರುವ ಮಾಹಿತಿ ಕಲೆ ಹಾಕಿದ್ದರು. ಆರೋಪಿಯನ್ನು ಜೀಪ್​ನಲ್ಲಿ ಕೂರಿಸಿಕೊಂಡಾಗ ಯೂರಿನ್ ಅರ್ಜೆಂಟ್ ಆಗುತ್ತಿದೆ. ಇಲ್ಲದಿದ್ದರೇ ಕಾರಿನಲ್ಲಿ ಮೂತ್ರ ವಿಸರ್ಜನೆ ಮಾಡ್ಕೊತಿನಿ ಎಂದು ಸುಳ್ಳು ಹೇಳುತ್ತಾನೆ. ನಂತರ ಕೆಳಗೆ ಇಳಿಸಿದಾಗ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಹಿಡಿಯಲು ಹೋದ ಪೊಲೀಸರಿಗೆ ಚಾಕುವಿನಿಂದ ಇರಿಯುತ್ತಾನೆ. ಪಿಎಸ್ಐ ಶಿವರಾಜ್ ಎಡಗೈಗೆ ಮತ್ತು ದೇವೇಂದ್ರ ನಾಯಕ್ ಬಲಗೈಗೆ ಗಾಯವಾಗುತ್ತದೆ. ಓಡಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸುತ್ತಾರೆ.

ತಪ್ಪೊಪ್ಪಿಕೊಂಡ ಆರೋಪಿಗಳು
ಈ ಮೊದಲು ಬಂಧಿತಕ್ಕೊಳಗಾದ ಆರೋಪಿಗಳು ತಮ್ಮ ತಪ್ಪನ್ನು ಒಪ್ಪೊಕೊಂಡಿದ್ದಾರೆ. ತಾವೂ ಅಕ್ರಮ ನುಸುಳುಕೊರರು ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾವೆಲ್ಲಾ ಬಾಂಗ್ಲಾದವರು. ನಾವು ಯಾವುದೇ ಪಾಸ್ ಪೋರ್ಟ್ ಹೊಂದಿಲ್ಲ. ಭಾರತಕ್ಕೆ ಅತಿಕ್ರಮವಾಗಿ ನುಸುಳುತ್ತಿದ್ದೇವೆ. ನಂತರ ಬೆಂಗಳೂರಿಗೆ ಬಂದು ನಾನಾ ಕಡೆಯಲ್ಲಿ ವಾಸಿಸುತ್ತಿದ್ದೇವೆ. ಆಕೆಗೂ ನಮಗೂ ವ್ಯವಹಾರಿಕ ವಿಚಾರಕ್ಕೆ ಗಲಾಟೆಯಾಗುತ್ತು. ಇದೇ ಕಾರಣಕ್ಕೆ 6 ಜನರು ಕೃತ್ಯ ಎಸಗಿದ್ದೇವೆ ಎಂದು ತನಿಖೆ ವೇಳೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಹೊರಬಿತ್ತು ಬೃಹತ್ ಮಾನವ ಕಳ್ಳಸಾಗಣೆ ಜಾಲದ ಕರಾಳ ಮುಖ

ಬಾಂಗ್ಲಾ ಯುವತಿಯ ಗ್ಯಾಂಗ್​ರೇಪ್ ಪ್ರಕರಣ: ಮೂವರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ವಶಕ್ಕೆ

(Police have firing to gang rape Accused in Bengaluru)