AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ.1ರಿಂದ ಇರಲ್ಲ ವರ್ಕ್ ಫ್ರಮ್ ಹೋಮ್: ಬೆಂಗಳೂರಲ್ಲಿ ಟ್ರಾಫಿಕ್​ ಡಬಲ್​?

ಉದ್ಯೋಗಿಗಳಿಗೆ ನೀಡಲಾಗಿರುವ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನ ಅಕ್ಟೋಬರ್ 1ರಿಂದ ಹಿಂಪಡೆಯಲು ಬಹುತೇಕ ಖಾಸಗಿ ಕಂಪನಿಗಳು ನಿರ್ಧರಿಸಿವೆ. ಇದರಿಂದಾಗಿ ಬೆಂಗಳೂರಲ್ಲಿ ಟ್ರಾಫಿಕ್​ ಸಮಸ್ಯೆ ಡಬಲ್​ ಆಗುವ ಸಾಧ್ಯತೆ ಇದ್ದು, ಅಂದಾಜಿನ ಪ್ರಕಾರ ಔಟರ್​ ರಿಂಗ್​ರೋಡ್​ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.

ಅ.1ರಿಂದ ಇರಲ್ಲ ವರ್ಕ್ ಫ್ರಮ್ ಹೋಮ್: ಬೆಂಗಳೂರಲ್ಲಿ ಟ್ರಾಫಿಕ್​ ಡಬಲ್​?
ಅ.1ರಿಂದ ಬೆಂಗಳೂರಲ್ಲಿ ಟ್ರಾಫಿಕ್​ ಡಬಲ್​?
ಕಿರಣ್​ ಸೂರ್ಯ
| Edited By: |

Updated on: Sep 29, 2025 | 4:25 PM

Share

ಬೆಂಗಳೂರು, ಸೆಪ್ಟೆಂಬರ್​ 29: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ (Work from Home) ಅಂತ್ಯವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್​ ಡಬಲ್​ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ ವಾಹನಗಳ ಓಡಾಟದ ಸಂಖ್ಯೆಯೂ ಸಹಜವಾಗಿ ಹೆಚ್ಚಲಿದೆ. ಅಂದಾಜಿನ ಪ್ರಕಾರ ಔಟರ್​ ರಿಂಗ್​ ರೋಡ್​ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.

ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ಸೌಲಭ್ಯ ಹಿಂಪಡೆಯಲು ನಿರ್ಧರಿಸಿವೆ ಎನ್ನಲಾಗಿದ್ದು, ಶೇಕಡಾ 80ರಷ್ಟು ಐಟಿ ಕಂಪನಿಗಳು ಈ ತೀರ್ಮಾನಕ್ಕೆ ಮುಂದಾಗಿವೆಯಂತೆ. ಔಟರ್​ ರಿಂಗ್​ ರೋಡ್ ನಲ್ಲಿ ಸುಮಾರು 500ರಷ್ಟು ಪ್ರತಿಷ್ಟಿತ ಕಂಪನಿಗಳಿದ್ದು, ಎರಡು ಸಾವಿರ ಆಫೀಸ್ ಗಳಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ನೀಡಿದ್ದವು. ಆದರೆ ಈಗ ಉದ್ಯೋಗಿಗಳು ಮತ್ತೆ ಆಫೀಸ್​ ನತ್ತ ಮುಖ ಮಾಡಬೇಕಿರುವ ಕಾರಣ ಟ್ರಾಫಿಕ್​ ಸಹಜವಾಗಿಯೇ ಇನ್ನಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ಮೈಸೂರು ದಸರಾ ನೋಡಲು ಹೊರಟವರಿಗೆ ದರ ಏರಿಕೆಯ ಶಾಕ್

ಕಳೆದ ವರ್ಷದ ಅಂಕಿ-ಅಂಶದ ಆಧಾರದಲ್ಲಿ ಪ್ರತಿನಿತ್ಯ ಸುಮಾರು 82 ಸಾವಿರ ವಾಹನಗಳು ಔಟರ್​ ರಿಂಗ್​ ರೋಡ್ ಮೂಲಕ ಸಂಚರಿಸಿದ್ದವು. ಈ ವರ್ಷದಲ್ಲಿ ಅವುಗಳ ಸಂಖ್ಯೆ ಸುಮಾರು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿತ್ತು. ಈಗ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗುತ್ತಿರುವ ಕಾರಣ ಅಕ್ಟೋಬರ್ 1ರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಸಂಚಾರ ದಟ್ಟಣೆ ಸಮಸ್ಯೆಯಿಂದ ಹೈರಾಣಾಗ್ತಿರೋ ವಾಹನ ಸವಾರರಿಗೆ ಖಾಸಗಿ ಕಂಪನಿಗಳ ಈ ನಿರ್ಧಾರ ಮತ್ತಷ್ಟು ತಲೆನೋವು ತಂದಿದೆ. ಒಂದೊಮ್ಮೆ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗಿದ್ದೇ ಆದಲ್ಲಿ ಪ್ರತಿನಿತ್ಯ ಓಡಾಡುವ ಉದ್ಯೋಗಿಗಳ ಸಂಖ್ಯೆ ಬೆಂಗಳೂರಲ್ಲಿ ದ್ವಿಗುಣವಾಗುವ ನಿರೀಕ್ಷೆ ಇದೆ.

ಖಾಸಗಿ ಕಂಪನಿಗಳ ನಿರ್ಧಾರಕ್ಕೆ ವಿರೋಧ

ಖಾಸಗಿ ಕಂಪನಿಗಳ ಈ ನಿರ್ಧಾರಕ್ಕೆ ಗ್ರೇಟರ್ ಬೆಂಗಳೂರು ಐಟಿ ಕಂಪನೀಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಉದ್ಯೋಗಿಗಳಿಗೆ ನೀಡಲಾಗಿರುವ ವರ್ಕ್ ಫ್ರಮ್ ಹೋಮ್ ಸೌಲಭ್ಯ ಹಿಂಪಡೆಯದಂತೆ ಆಗ್ರಹಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!