‘ನಾವು ನಿಮ್ಮಂತಹ ಕಾರ್ಪೋರೇಟ್ ಓತಿಕ್ಯಾತಗಳಲ್ಲ’: ಪ್ರಿಯಾಂಕ್ ‘ವಿಲೇಜ್ ಈಡಿಯಟ್’ ಹೇಳಿಕೆಗೆ ಜೆಡಿಎಸ್ ಕೌಂಟರ್
ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಪ್ರಿಯಾಂಕ್ ಖರ್ಗೆ ನೀಡಿದ್ದ ಹಳ್ಳಿಗುಗ್ಗು ಹೇಳಿಯೀಗ ಹೊಸ ಅಭಿಯಾನವನ್ನೇ ಹುಟ್ಟುಹಾಕಿದೆ. ಕರ್ನಾಟಕದ ಗೃಹ ಸಚಿವರ ಹೇಳಿಕೆ ಖಂಡಿಸಿ 'ಗೃಹ ಸಚಿವರೇ ನಾವು ಹಳ್ಳಿಯವರೇ ಏನಿವಾಗ ಎಂದು' ಜೆಡಿಎಸ್ ಕ್ಯಾಂಪೇನ್ ಆರಂಭಿಸಿದೆ. ಮತ್ತೊಂದೆಡೆ ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ, ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಹೆಚ್ಡಿಕೆ ಸಿಟಿಯಲ್ಲಿಯೇ ಬೆಳೆದ ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಟ್ಟಿದ್ದಾರೆ.

ಬೆಂಗಳೂರು, ನವೆಂಬರ್ 05: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಸಮರ ಮತ್ತೊಂದು ಹಂತ ತಲುಪಿದೆ. ಸ್ಟಿಂಗ್ ಕೇಸ್ ವಿಚಾರವಾಗಿ ಉಭಯ ನಾಯಕರು ಒಬ್ಬರಾದಮೇಲೊಬ್ಬರಂತೆ ಜಿದ್ದಿಗೆ ಬಿದ್ದು ಆರೋಪ-ಪ್ರತ್ಯಾರೋಪಗಳ ಮಳೆಯನ್ನೇ ಗೈಯುತ್ತಿದ್ದು, ಈ ನಡುವೆ ಪ್ರಿಯಾಂಕ್ ನೀಡಿದ್ದ ಒಂದು ಹೇಳಿಕೆಯನ್ನೇ ಜೆಡಿಎಸ್ ಬ್ರಹ್ಮಾಸ್ತ್ರವಾಗಿಸಿಕೊಂಡಿದೆ. ಹೆಚ್ಡಿಕೆ ವಿಲೇಜ್ ಈಡಿಯಟ್ ರೀತಿ ಆಡ್ತಾರೆ ಎಂಬ ಗೃಹ ಸಚಿವರ ಹೇಳಿಕೆಯ ವಿರುದ್ಧ ಜೆಡಿಎಸ್ ಅಭಿಯಾನವನ್ನೇ ಆರಂಭಿಸಿದ್ದು, ‘ಗೃಹ ಸಚಿವರೇ ನಾವು ಹಳ್ಳಿಯವರೇ ಏನಿವಾಗ ಎಂದು’ ಪ್ರತಿಯೊಬ್ಬ ಜೆಡಿಎಸ್ ನಾಯಕರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಸಾಲದ್ದಕ್ಕೆ ರಾಮನಗರ ತಾಲೂಕಿನ ಬಿಡದಿ ಬಳಿ ಇದೇ ರೀತಿಯ ಬರಹ ಹೊಂದಿರು ಫ್ಲೆಕ್ಸ್ ಕೂಡ ರಾರಾಜಿಸಿದೆ. ಪ್ರಿಯಾಂಕ್ ಹೇಳಿಕೆ ವಿರುದ್ಧ ರಾಜ್ಯವ್ಯಾಪಿ ಹೋರಾಟಕ್ಕೂ ಜೆಡಿಎಸ್ ನಿರ್ಧರಿಸಿದೆ.
‘ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ’
“ಭಾರತದ ಆತ್ಮ ಹಳ್ಳಿಗಳಲ್ಲಿದೆ.” -ರಾಷ್ಟ್ರಪಿತ ಮಹಾತ್ಮ ಗಾಂಧಿ
ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 5, 2026
ಮತ್ತೊಂದೆಡೆ ಪ್ರಿಯಾಂಕ್ ಹೇಳಿಕೆ ವಿಚಾರವಾಗಿ ಎಕ್ಸ್ ಪೋಸ್ಟ್ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂಧಿ ಅವರೇ ಹೇಳಿದ್ದಾರೆ. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ, ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಸಿಟಿಯಲ್ಲಿಯೇ ಬೆಳೆದ ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ನಾವು ಹಳ್ಳಿಯವರೇ ಏನಿವಾಗ?’: ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್ನಿಂದ ಫ್ಲೆಕ್ಸ್
ಪ್ರಿಯಾಂಕ್ ಖರ್ಗೆಗೆ ಕುಟುಕಿದ ಜೆಡಿಎಸ್
ಮಿಸ್ಟರ್ Useless Fellow, ‘ಇಟಲಿ’ ಪ್ರಿಯಾಂಕ ಖರ್ಗೆ (@PriyankKharge) ಅವರೇ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಹಾಗೂ ‘ಈಡಿಯಟ್’ ಎಂದು ಜರಿದು ನಿಮ್ಮ ‘ಹೈಟೆಕ್’ ಅಹಂಕಾರವನ್ನು ಹಾಗೂ ನಿಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದೀರಿ.
ಅಧಿಕಾರದ ಮದದಲ್ಲಿ ನೀವು ಆಡಿರುವ ಈ ಮಾತು ಕೇವಲ ಕುಮಾರಸ್ವಾಮಿ ಅವರಿಗಷ್ಟೇ ಅಲ್ಲ, ಇಡೀ ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಹಾಗೂ ಕಷ್ಟಪಟ್ಟು ದುಡಿಯುವ ರೈತರಿಗೆ ಮಾಡಿದ ಘೋರ ಅಪಮಾನ. ದೆಹಲಿ ಮತ್ತು ಇಟಲಿ ನಾಯಕರ ಎದುರು ಜೀ ಹುಜೂರ್ ಎನ್ನುವ ‘ನಿಮ್ಮಂತಹ ಗುಲಾಮರಿಗೆ’ ಹಳ್ಳಿಗರ ಸ್ವಾಭಿಮಾನ ಎಂದಿಗೂ ಅರ್ಥವಾಗುವುದಿಲ್ಲ.
ರೈತರ ಕಷ್ಟಗಳ ಬಗ್ಗೆ, ಹಳ್ಳಿ ಜನರ ಬವಣೆಗಳ ಬಗ್ಗೆ ನಿಮ್ಮಂತಹ ‘ಟ್ವಿಟ್ಟರ್ ರಾಜಕಾರಣಿ’ಗಳಿಗೆ ವಿವರಿಸುವುದು “ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ”! ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದಿರುವ ನಿಮಗೆ, ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಹಾಗೂ ಮುಖ್ಯಮಂತ್ರಿಯಾಗಿ ಎರಡು ಬಾರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಅನ್ನದಾತರ ಬೆನ್ನಿಗೆ ನಿಂತ ಮಣ್ಣಿನ ಮಗನ ನೈಜತೆ ‘ಗುಗ್ಗು’ ಮತ್ತು ‘ಈಡಿಯಟ್’ ತರಹವೇ ಕಾಣುತ್ತದೆ. ಹೌದು, ನಾವು ರೈತರ ಪರ ನಿಲ್ಲುವ ಹೆಮ್ಮೆಯ ‘ಹಳ್ಳಿ ಗುಗ್ಗು’ಗಳೇ ಹೊರತು, ಬಣ್ಣ ಬದಲಿಸುವ ನಿನ್ನಂತಹ ‘ಕಾರ್ಪೋರೇಟ್ ಓತಿಕ್ಯಾತ’ಗಳಲ್ಲ.
ನಿಮ್ಮ @INCKarnataka ಆಡಳಿತದಲ್ಲಿ ಜನಸಾಮಾನ್ಯರಿಗೆ ಕಿಂಚಿತ್ತೂ ಒಳಿತಾಗಿಲ್ಲ. ಆದರೆ ನಿಮ್ಮ ಶೋಕಿ ಹಾಗೂ ವ್ಯಂಗ್ಯದ ಮಾತುಗಳಿಗೆ ಮಾತ್ರ ಕಮ್ಮಿಯಿಲ್ಲ. ಎಸಿ ಕೊಠಡಿಯಲ್ಲಿ ಕೂರುವ ಇಟಲಿ ಕಾಂಗ್ರೆಸ್‌ನ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನ್ಗೊತ್ತು?
ಮರೆಯಬೇಡಿ ಇಟಲಿ ಪ್ರಿಯಾಂಕ ಖರ್ಗೆಯವರೇ, ಎಲೆಕ್ಷನ್ ಬಂದಾಗ ಇದೇ ‘ಹಳ್ಳಿ ಗುಗ್ಗು’ಗಳ ಮನೆ ಬಾಗಿಲಿಗೆ ನೀವು ವೋಟು ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯವರು ಮುಗ್ಧರಿರಬಹುದು, ಆದರೆ ನಿಮ್ಮ ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ. ಇದೇ ಹಳ್ಳಿಗರು 2028ಕ್ಕೆ ವೋಟ್ ಒತ್ತುವಾಗ ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯುತ್ತಾರೆ.
#ನಾವುಹಳ್ಳಿಯವರುಏನಿವಾಗ #ನಾವು_ಹಳ್ಳಿಗರು #ಜೆಡಿಎಸ್
— Janata Dal Secular (JDS) (@JanataDal_S) November 5, 2026
ಮಿಸ್ಟರ್ ನಿಷ್ಪ್ರಯೋಜಕ ವ್ಯಕ್ತಿ’ಇಟಲಿ’ ಪ್ರಿಯಾಂಕ ಖರ್ಗೆ ಅವರೇ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಹಾಗೂ ‘ಈಡಿಯಟ್’ ಎಂದು ಜರಿದು ನಿಮ್ಮ ‘ಹೈಟೆಕ್’ ಅಹಂಕಾರವನ್ನು ಹಾಗೂ ನಿಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದೀರಿ. ಅಧಿಕಾರದ ಮದದಲ್ಲಿ ನೀವು ಆಡಿರುವ ಈ ಮಾತು ಕೇವಲ ಕುಮಾರಸ್ವಾಮಿ ಅವರಿಗಷ್ಟೇ ಅಲ್ಲ, ಇಡೀ ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಹಾಗೂ ಕಷ್ಟಪಟ್ಟು ದುಡಿಯುವ ರೈತರಿಗೆ ಮಾಡಿದ ಘೋರ ಅಪಮಾನ. ದೆಹಲಿ ಮತ್ತು ಇಟಲಿ ನಾಯಕರ ಎದುರು ಜೀ ಹುಜೂರ್ ಎನ್ನುವ ನಿಮ್ಮಂತಹ ಗುಲಾಮರಿಗೆ ಹಳ್ಳಿಗರ ಸ್ವಾಭಿಮಾನ ಎಂದಿಗೂ ಅರ್ಥವಾಗುವುದಿಲ್ಲ ಎಂದು ಎಕ್ಸ್ ಪೋಸ್ಟ್ ಮೂಲಕ ಜೆಡಿಎಸ್ ಕೂಡ ಕಿಡಿ ಕಾರಿದೆ.
ರೈತರ ಕಷ್ಟಗಳ ಬಗ್ಗೆ, ಹಳ್ಳಿ ಜನರ ಬವಣೆಗಳ ಬಗ್ಗೆ ನಿಮ್ಮಂತಹ ‘ಟ್ವಿಟ್ಟರ್ ರಾಜಕಾರಣಿ’ಗಳಿಗೆ ವಿವರಿಸುವುದು “ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ”! ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದಿರುವ ನಿಮಗೆ, ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಹಾಗೂ ಮುಖ್ಯಮಂತ್ರಿಯಾಗಿ ಎರಡು ಬಾರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಅನ್ನದಾತರ ಬೆನ್ನಿಗೆ ನಿಂತ ಮಣ್ಣಿನ ಮಗನ ನೈಜತೆ ‘ಗುಗ್ಗು’ ಮತ್ತು ‘ಈಡಿಯಟ್’ ತರಹವೇ ಕಾಣುತ್ತದೆ. ಹೌದು, ನಾವು ರೈತರ ಪರ ನಿಲ್ಲುವ ಹೆಮ್ಮೆಯ ‘ಹಳ್ಳಿ ಗುಗ್ಗು’ಗಳೇ ಹೊರತು, ಬಣ್ಣ ಬದಲಿಸುವ ನಿನ್ನಂತಹ ‘ಕಾರ್ಪೋರೇಟ್ ಓತಿಕ್ಯಾತ’ಗಳಲ್ಲ.
ಆಡಳಿತದಲ್ಲಿ ಜನಸಾಮಾನ್ಯರಿಗೆ ಕಿಂಚಿತ್ತೂ ಒಳಿತಾಗಿಲ್ಲ. ಆದರೆ ನಿಮ್ಮ ಶೋಕಿ ಹಾಗೂ ವ್ಯಂಗ್ಯದ ಮಾತುಗಳಿಗೆ ಮಾತ್ರ ಕಮ್ಮಿಯಿಲ್ಲ. ಎಸಿ ಕೊಠಡಿಯಲ್ಲಿ ಕೂರುವ ಇಟಲಿ ಕಾಂಗ್ರೆಸ್‌ನ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನ್ಗೊತ್ತು? ಮರೆಯಬೇಡಿ ಇಟಲಿ ಪ್ರಿಯಾಂಕ ಖರ್ಗೆಯವರೇ, ಎಲೆಕ್ಷನ್ ಬಂದಾಗ ಇದೇ ‘ಹಳ್ಳಿ ಗುಗ್ಗು’ಗಳ ಮನೆ ಬಾಗಿಲಿಗೆ ನೀವು ವೋಟು ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯವರು ಮುಗ್ಧರಿರಬಹುದು, ಆದರೆ ನಿಮ್ಮ ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ. ಇದೇ ಹಳ್ಳಿಗರು 2028ಕ್ಕೆ ವೋಟ್ ಒತ್ತುವಾಗ ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯುತ್ತಾರೆ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




