ಕರ್ನಾಟಕ ರಾಜ್ಯ ಛತ್ರ, ತಿರುಮಲದಲ್ಲಿ ನಿರ್ಮಿಸಿರುವ 132 ಕೊಠಡಿ ಉದ್ಘಾಟಿಸಿದ ರಾಮಲಿಂಗಾರೆಡ್ಡಿ

ಕರ್ನಾಟಕ ಸರ್ಕಾರವು ತಿರುಮಲದಲ್ಲಿ ಯಾತ್ರಾರ್ಥಿಗಳಿಗೆ ಸುಧಾರಿತ ವಸತಿ ಸೌಲಭ್ಯಗಳನ್ನು ಒದಗಿಸಲು 200 ಕೋಟಿ ರೂ. ಹೂಡಿಕೆ ಮಾಡಿದೆ. ಹೊಸ ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಮತ್ತು ನವೀಕರಿಸಿದ ಪ್ರವಾಸಿ ಸೌಧವು ಯಾತ್ರಿಗಳಿಗೆ ಅನುಕೂಲವಾಗಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್ ಸೌಲಭ್ಯಗಳೂ ಲಭ್ಯವಿದೆ.

ಕರ್ನಾಟಕ ರಾಜ್ಯ ಛತ್ರ, ತಿರುಮಲದಲ್ಲಿ ನಿರ್ಮಿಸಿರುವ 132 ಕೊಠಡಿ ಉದ್ಘಾಟಿಸಿದ ರಾಮಲಿಂಗಾರೆಡ್ಡಿ
ಕರ್ನಾಟಕ ರಾಜ್ಯ ಛತ್ರ, ತಿರುಮಲದಲ್ಲಿ ನಿರ್ಮಿಸಿರುವ 132 ಕೊಠಡಿ ಉದ್ಘಾಟಿಸಿದ ರಾಮಲಿಂಗಾರೆಡ್ಡಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 21, 2025 | 8:05 PM

ಬೆಂಗಳೂರು, ಜನವರಿ 21: ಕರ್ನಾಟಕ ರಾಜ್ಯ ಸರ್ಕಾರವು ತಿರುಮಲಕ್ಕೆ (Tirumala) ಶ್ರೀವೆಂಕಟೇಶ್ವರಸ್ವಾಮಿಯ ದರ್ಶನಕ್ಕಾಗಿ ಭೇಟಿ ನೀಡುವ ಯಾತ್ರಾರ್ಥಿಗಳಿಗೆ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಈಗಾಗಲೇ 110 AC ಕೊಠಡಿಗಳ ಬ್ಲಾಕ್ -2 (ಹಂಪಿ ಬ್ಲಾಕ್) ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಸಂಕೀರ್ಣಗಳ ಪೈಕಿ 132 ಹವಾನಿಯಂತ್ರಣ ರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಕಟ್ಟಡವನ್ನು ಜ. 20 ರಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉದ್ಘಾಟಿಸಿದರು.

ಇದನ್ನೂ ಓದಿ: ಕಕರಸಾ ನಿಗಮದಲ್ಲಿ 26 ಬ್ಯಾಕ್ ಲಾಗ್ ಹುದ್ದೆಗಳಿಗೆ ನೇಮಕಾತಿ: ಆದೇಶ ಪ್ರತಿ ನೀಡಿದ ರಾಮಲಿಂಗಾರೆಡ್ಡಿ

  • ಈ ಕಟ್ಟಡದಲ್ಲಿನ ಪ್ರತಿ ಕೊಠಡಿಗಳಿಗೆ 24 ಗಂಟೆಗಳ ಅವಧಿಗೆ ಕೊಠಡಿ ನಿರ್ವಹಣಾ ಶುಲ್ಕ ರೂ.1350 (+GST) ನಿಗದಿ ಪಡಿಸಿದ್ದು, ಕಡಿಮೆ ಬೆಲೆಯಲ್ಲಿ ಸುಸಜ್ಜಿತ ಕೊಠಡಿಗಳನ್ನು ಯಾತ್ರಾರ್ಥಿಗಳಿಗೆ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ.
  • ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಮತ್ತು ಶ್ರೀ ಕೃಷ್ಣದೇವರಾಯ ಬ್ಲಾಕ್ ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 500 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.
  • ತಿರುಪತಿ ಹಾಗೂ ತಿರೂಚಾನೂರಿನಲ್ಲಿ ಕರ್ನಾಟಕ ರಾಜ್ಯ ಛತ್ರದಲ್ಲಿ ಹಾಲಿ ಇರುವ 24 ಕೊಠಡಿಗಳನ್ನು ಮತ್ತು ಕಲ್ಯಾಣ ಮಂಟಪಗಳನ್ನು ನವೀಕರಣಗೊಳಿಸಿ, ಯಾತ್ರಾರ್ಥಿಗಳಿಗೆ ಹಂಚಿಕೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
  • ಕರ್ನಾಟಕ ರಾಜ್ಯ ಛತ್ರದಲ್ಲಿ 50 ಸುಸಜ್ಜಿತ ಕೊಠಡಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ಸಿದ್ಧಗೊಳಿಸುತ್ತಿದೆ.
  • ಕಲ್ಯಾಣ ಮಂಟಪ ಬ್ಲಾಕ್ ಹಾಗೂ ವಿವಿಐಪಿ ಕೊಠಡಿಗಳ ಬ್ಲಾಕ್ 2025ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದ್ದು, ಸದರಿ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸಿಎಂ ಹಾಗೂ ಆಂಧ್ರ ಸಿಎಂ ಸಮ್ಮುಖದಲ್ಲಿ ನೆರವೇರಲಿದೆ.
  • ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ದೇವಾಲಯಗಳ ವಸತಿ ಕಾಯ್ದಿರಿಸುವಿಕೆಯ ವೆಬ್ ಸೈಟ್ Karnatakatemplesaccommodation.com ಮೂಲಕ ಶೇ.60% ರಷ್ಟು ಆನ್​ ಲೈನ್ ಮೂಲಕ ಹಾಗೂ ಶೇ.40% ಆಪ್​ ಲೈನ್​ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಿ ಅನುಕೂಲ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ