ಒಂದು ವಾರ ವ್ಯಾಪಾರಿಗಳಿಂದ ಚಿಕ್ಕಪೇಟೆ ಸ್ವಯಂ ಲಾಕ್‌ಡೌನ್
ಬೆಂಗಳೂರು: ಕೊರಾನಾ ಹೆಮ್ಮಾರಿ ದಿನೇ ದಿನೇ ತನ್ನ ಆರ್ಭಟವನ್ನ ಹೆಚ್ಚಿಸ್ತಾನೆ ಇದೆ. ಅದ್ರಲ್ಲೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕೊರೊನಾದ ಭಯ ಮತ್ತು ಆತಂಕ ಹೆಚ್ಚಾಗಿಯೇ ಇದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಒಂದು ವಾರಗಳ ಕಾಲ ಚಿಕ್ಕಪೇಟೆಯನ್ನ ಲಾಕ್‌ಡೌನ್ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಪ್ರಮುಖ ವ್ಯಾಪಾರಿಗಳ ಸಂಘಟನೆಗಳಾದ ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಅಂಡ್ ಗೋಲ್ಡ್ ತಯಾರಕರ ಸಂಘ, ಸ್ವರ್ಣಕಾರ್ ಅಸೋಸಿಯೇಷನ್, ಜೆಮ್ಸ್ & ಪರ್ಲ್ಸ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್ , ಸ್ವಿಚ್ […]

ಬೆಂಗಳೂರು: ಕೊರಾನಾ ಹೆಮ್ಮಾರಿ ದಿನೇ ದಿನೇ ತನ್ನ ಆರ್ಭಟವನ್ನ ಹೆಚ್ಚಿಸ್ತಾನೆ ಇದೆ. ಅದ್ರಲ್ಲೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕೊರೊನಾದ ಭಯ ಮತ್ತು ಆತಂಕ ಹೆಚ್ಚಾಗಿಯೇ ಇದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಒಂದು ವಾರಗಳ ಕಾಲ ಚಿಕ್ಕಪೇಟೆಯನ್ನ ಲಾಕ್‌ಡೌನ್ ಮಾಡಲು ಮುಂದಾಗಿದ್ದಾರೆ.
ಈ ಸಂಬಂಧ ಪ್ರಮುಖ ವ್ಯಾಪಾರಿಗಳ ಸಂಘಟನೆಗಳಾದ ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಅಂಡ್ ಗೋಲ್ಡ್ ತಯಾರಕರ ಸಂಘ, ಸ್ವರ್ಣಕಾರ್ ಅಸೋಸಿಯೇಷನ್, ಜೆಮ್ಸ್ & ಪರ್ಲ್ಸ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್ , ಸ್ವಿಚ್ ಗೇರ್ ಅಸೋಸಿಯೇಷನ್ ಮತ್ತು ಹಾರ್ಡ್ ವೇರ್ ಅಸೋಸಿಯೇಷನ್‌ಗಳು ಸಭೆ ಸೇರಿ ಲಾಕ್‌ಡೌನ್ ಮಾಡಲು ತಿರ್ಮಾನಿಸಿವೆ.
ವ್ಯಾಪಾರಿ ಸಂಘಟನೆಗಳು ಹೀಗೆ ಸ್ವಯಂ ಪ್ರೇರಿತರಾಗಿ ವಿಧಿಸಿಕೊಳ್ಳಲಿರುವ ಈ ಲಾಕ್‌ಡೌನ್ ಒಂದು ವಾರಗಳ ಕಾಲ ಇರಲಿದೆ. ಹೀಗಾಗಿ ಸೋಮವಾರದಿಂದ ಒಂದು ವಾರ ಕಾಲ ಅಂದರೆ ಮುಂದಿನ ಭಾನುವಾರದ ವರೆಗೆ ಚಿಕ್ಕಪೇಟೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ.