AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಅಪ್ಪ-ಅಮ್ಮನನ್ನ ಕಳೆದುಕೊಂಡೆ, ಮೆಡಿಕಲ್ ಓದುತ್ತಿರುವೆ.. ಯಾರಾದರೂ ನನ್ನ ಶಿಕ್ಷಣಕ್ಕೆ ನೆರವಾಗಿ: ​ಯುವತಿ ಮೊರೆ

TV9 Helpline: ಅಪ್ಪ-ಅಮ್ಮನ ಚಿಕಿತ್ಸೆಗೆ ಒಟ್ಟು ಐದಾರು ಲಕ್ಷ ರೂಪಾಯಿ ಖರ್ಚಾ ಗಿದೆ. ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವವರು ಯಾರೂ ಇಲ್ಲ. ಹೀಗಾಗಿ ನನಗೆ ಯಾರಾದರೂ ಸಹಾಯ ಮಾಡಿ. ನನ್ನ ತಂಗಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಜೀವನದ ಹೊಣೆಯೂ ನನ್ನ ಮೇಲಿದೆ ಎಂದು ವೈದ್ಯಕೀಯ ವಿದ್ಯಾರ್ಥಿನಿ ತಮ್ಮ ವ್ಯಥೆಯನ್ನು ಹೇಳಿಕೊಂಡಿದ್ದಾರೆ.

ಕೊರೊನಾದಿಂದ ಅಪ್ಪ-ಅಮ್ಮನನ್ನ ಕಳೆದುಕೊಂಡೆ, ಮೆಡಿಕಲ್ ಓದುತ್ತಿರುವೆ.. ಯಾರಾದರೂ ನನ್ನ ಶಿಕ್ಷಣಕ್ಕೆ ನೆರವಾಗಿ: ​ಯುವತಿ ಮೊರೆ
ಕೊರೊನಾದಿಂದ ಮೃತಪಟ್ಟ ಪೋಷಕರು
ಸಾಧು ಶ್ರೀನಾಥ್​
| Edited By: |

Updated on:May 27, 2021 | 2:00 PM

Share

ಬೆಂಗಳೂರು: ಇದು ಕೊರೊನಾ ಮಾರಿಯಿಂದ ಅಪ್ಪ-ಅಮ್ಮನನ್ನ ಕಳೆದುಕೊಂಡ ಯುವತಿಯ ಕಥೆ. ಆಯುರ್ವೇದಿಕ್ ಸ್ಟುಡೆಂಟ್ ಬದುಕಿನಲ್ಲಿ ಎದ್ದಿರುವ ಬಿರುಗಾಳಿ. ಅಮ್ಮ-ಅಮ್ಮನ ದೇಹ ಪಡೆಯಲು ಆಸ್ಪತ್ರೆಯವರು ಏಕಾಂಗಿ ಯುವತಿಯ ಮುಂದೆ 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಾಗ ಟಿವಿ9 ಸಹಾಯವಾಣಿ ನೆರವಿಗೆ ಬಂದಿತ್ತು. ‘ಆಸ್ಪತ್ರೆಯವರು 10 ದಿನದ ನಂತರ ಕೊನೆಗೂ ಅಪ್ಪನ ಮೃತ ದೇಹ ಕೊಟ್ಟಾಗ ಅಪ್ಪನ ಮುಖ ನೋಡೋಕೆ ಆಗಲಿಲ್ಲ. ನನಗೆ ಸ್ಟಡಿ ಡಿಸ್ಕಟಿನ್ಯೂ ಮಾಡೋಕೆ ಮನಸ್ಸಿಲ್ಲ. ವೈದ್ಯಕೀಯ ಶಿಕ್ಷಣ ಮುಂದುವರಿಸುವ ಇರಾದೆಯಿದೆ. ಹೀಗಾಗಿ ಯಾರಾದಾರೂ ನನಗೆ ಸಹಾಯ ಮಾಡಿ’ ಅಂತಿರೋ ಯುವತಿ ಮುಂದೆ ಏನು ಮಾಡಬೇಕೋ ದಿಕ್ಕುತೋಚದೆ ಜೀವನ ಘಟ್ಟದಲ್ಲಿ ಕುಸಿದು ಕುಳಿತಿದ್ದಾರೆ.

ಯುವತಿಯ ಬಾಳಲ್ಲಿ ಕೊರೊನಾ ಮಾರಿ ಅಟ್ಟಹಾಸ ಹೀಗಿತ್ತು… ಯುಗಾದಿಗೆ ಸ್ಟಡಿ ಹಾಲಿಡೇಸ್ ಗೆ ಬಂದಿದ್ದ ಯುವತಿಗೆ ಬಿಗ್ ಶಾಕ್ ಕಾದಿತ್ತು.  ಕ್ರೂರಿ ಕೊರೊನಾ ಇಡೀ ಕುಟುಂಬಕ್ಕೆ ಕೊಳ್ಳಿ ಇಟ್ಟಿದೆ. ಇಬ್ಬರು ಹೆಣ್ಣು ಮಕ್ಕಳು ಅಪ್ಪ ಅಮ್ಮನನ್ನ ಕಳೆದುಕೊಂಡು ಅನಾಥರಾಗಿದ್ದಾರೆ. ಕೊವಿಡ್ ನಿಂದ ವೈದೇಹಿ ಆಸ್ಪತ್ರೆಯಲ್ಲಿ 43 ವರ್ಷದ ತಾಯಿ ಮೇ 9 ರಂದು ಮೃತ ಪಟ್ಟಿದ್ರು. ನಂತರ ತಂದೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಂದೆ ಮೇ 14ರಂದು ಇಹಲೋಕ ತ್ಯಜಿಸಿದರು.

tv9 helpline medical student studying in chitradurga loses parents for coronavirus needs financial help to continue studies 2

ಕೊರೊನಾದಿಂದ  ಯುವತಿಯ ತಾಯಿ ಮೇ 9 ರಂದು ಮೃತ ಪಟ್ಟಿದ್ರು…

ಅಪ್ಪನ ಮೃತದೇಹ ಪಡೆಯಲು TV9 Helpline ಯುವತಿಗೆ ನೆರವಾಗಿತ್ತು… ತಂದೆ, ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ರು. ಹತ್ತು ದಿನ ಆದರೂ ತಂದೆಯ ಮೃತದೇಹ ಕೊಟ್ಟಿರಲಿಲ್ಲ. ಒಂದು ಲಕ್ಷದ 80 ಸಾವಿರ ಕೊಡುವಂತೆ ಡಿಮಾಂಡ್ ಮಾಡಿದ್ರು. ಹಣ ಇಲ್ಲದ ಕಾರಣ ಡೆಡ್ ಬಾಡಿ ಪಡೆದುಕೊಂಡಿರಲಿಲ್ಲ. ನಂತರ ಟಿವಿ9 ಸಹಾಯವಾಣಿಗೆ ಮೊರೆಯಿಟ್ಟಾಗ ಟಿವಿ9 ಯುವತಿಯ ಕೈಹಿಡಿದಿತ್ತು. ಕಾಡಿಬೇಡಿದ ಮೇಲೆ ಬಾಡಿ ಕಂಪೋಸ್ ಆದ್ಮೇಲೆ ಕೊನೆಗೂ ಬಾಡಿ ಕೊಟ್ಟಿದ್ದಾರೆ.

ಮೇ 26ರಂದು ವೈದ್ಯರೇ ಕರೆದು ಮೃತದೇಹ ಕೊಟ್ಟರು. ಅಪ್ಪನ ಮುಖ ನೋಡೋಕೆ ಆಗಲಿಲ್ಲ. ಅಪ್ಪ-ಅಮ್ಮನ ಚಿಕಿತ್ಸೆಗೆ ಒಟ್ಟು ಐದಾರು ಲಕ್ಷ ರೂಪಾಯಿ ಖರ್ಚಾ ಗಿದೆ. ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವವರು ಯಾರೂ ಇಲ್ಲ. ಹೀಗಾಗಿ ನನಗೆ ಯಾರಾದರೂ ಸಹಾಯ ಮಾಡಿ. ನನ್ನ ತಂಗಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಜೀವನದ ಹೊಣೆಯೂ ನನ್ನ ಮೇಲಿದೆ ಎಂದು ವೈದ್ಯಕೀಯ ವಿದ್ಯಾರ್ಥಿನಿ ತಮ್ಮ ವ್ಯಥೆಯನ್ನು ಹೇಳಿಕೊಂಡಿದ್ದಾರೆ.

ನಾವು ಬೆಂಗಳೂರಿನಲ್ಲಿ ವಾಸವಾಗಿದ್ದೇವೆ . ನಾನು ಚಿತ್ರದುರ್ಗದ ಶ್ರೀ ರಾಘವೇಂದ್ರ ಆಯುರ್ವೇದಿಕ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ಇವಾಗ ಥರ್ಡ್ ಇಯರ್, ಇನ್ನೂ ಎರಡೂವರೆ ವರ್ಷ ಓದಬೇಕು. ಒಂದು ವರ್ಷಕ್ಕೆ ಹಾಸ್ಟೆಲ್ ಫೀಸ್ ಎಲ್ಲಾ ಸೇರಿ 2 ಲಕ್ಷ ಹಣ ಬೇಕು. ನನಗೆ ಸ್ಟಡಿ ನಿಲ್ಲಿಸುವ ಮನಸ್ಸಿಲ್ಲ.  ಹೀಗಾಗಿ ಯಾರಾದಾರೂ ನನಗೆ ಸಹಾಯ ಮಾಡಿ ಎಂದು ಯುವತಿ ಮೊರೆಯಿಟ್ಟಿದ್ದಾರೆ.

(tv9 helpline medical student studying in chitradurga loses parents for coronavirus needs financial help to continue studies)

Published On - 1:59 pm, Thu, 27 May 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ