AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಮಾರತ್ತ​​ಹಳ್ಳಿಯಲ್ಲಿ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುವ ಬಗ್ಗೆ ಈವರೆಗೆ ನಿರ್ಧಾರವಾಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಅರವಿಂದ ಲಿಂಬಾವಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಳೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on: Mar 06, 2025 | 10:21 AM

ಬೆಂಗಳೂರು, ಮಾರ್ಚ್ 6: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಬೆಂಗಳೂರಿಗೆ (Bengaluru) ಆಗಮಿಸಲಿದ್ದಾರೆ. ಮಾರತ್ತ​​ಹಳ್ಳಿಯಲ್ಲಿ ನಡೆಯಲಿರುವ ‘‘ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ’’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa), ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌ (BY Vijayendra), ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ. ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.

ಆದರೆ, ಅಮಿತ್ ಶಾ ಬೆಂಗಳೂರು ಭೇಟಿ ವೇಳೆ ರಾಜ್ಯ ಬಿಜೆಪಿ ಬೆಳವಣಿಗೆಗಳ ಕುರಿತು ಕರ್ನಾಟಕದ ನಾಯಕರ ಯಾವುದೇ ಭೇಟಿ ನಿಗದಿಯಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಮಿತ್ ಶಾ ಭೇಟಿಯಾಗಲು ಶ್ರೀರಾಮುಲು ಪ್ಲಾನ್

ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಬಿಜೆಪಿ ನಾಯಕ ಶ್ರೀರಾಮುಲು ಪ್ಲಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾ ಅವರನ್ನು ಭೇಟಿಯಾಗಿ ತಮಗೆ ಪಕ್ಷದಲ್ಲಾಗಿರುವ ಅವಮಾನದ ಬಗ್ಗೆ ವಿವರಣೆ ನೀಡಲು ಶ್ರೀರಾಮುಲು‌ ಸಿದ್ಧವಾಗಿದ್ದಾರೆ. ಈಗಾಗಲೇ ಅಮಿತ್ ಶಾ ತಂಡದ ಜೊತೆಗೆ ಸಂಪರ್ಕದಲ್ಲಿರುವ ರಾಮುಲು ರಾಜ್ಯ ನಾಯಕರ ಜೊತೆಗೆ ಅಲ್ಲದೆ, ಪ್ರತ್ಯೇಕವಾಗಿ ಭೇಟಿಯಾಗಲು ಉದ್ದೇಶಿಸಿದ್ದಾರೆ.

ಇದನ್ನೂ ಓದಿ
Image
ವಿಜಯೇಂದ್ರ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದು ಡೋಂಗಿಗಳು: ಯತ್ನಾಳ್
Image
ಬಿಹಾರದಲ್ಲಿ ಹಿಂದೂ-ಮುಸ್ಲಿಂ ಗಲಭೆ ಅಂತ್ಯವಾಗಿದೆ; ಸಿಎಂ ನಿತೀಶ್ ಕುಮಾರ್
Image
ದಕ್ಷಿಣದವರಿಗೆ ಮುಂದಿನ ಬಿಜೆಪಿ ಅಧ್ಯಕ್ಷ ಪಟ್ಟ? ರೇಸ್​ನಲ್ಲಿ ಯಾರಿದ್ದಾರೆ?
Image
ಸಂಬಳ ಹೆಚ್ಚಳ ಜೊತೆಗೆ ಶಾಸಕರಿಗಾಗಿ ರಿಕ್ಲೈನರ್‌, ಮಸಾಜ್ ಚೇರ್‌ಗಳು!

2018ರ ಚುನಾವಣೆ ವೇಳೆ ಅಮಿತ್ ಶಾ ಸೂಚನೆ ಮೇರೆಗೆ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು‌ ಸ್ಪರ್ಧೆ ಮಾಡಿದ್ದರು. ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಹಾಗೂ ಆ ನಂತರ ಪ್ರಚಾರಕ್ಕೂ ಶ್ರೀರಾಮುಲು‌ ಜೊತೆಗೆ ಅಮಿತ್ ಶಾ ಬಂದಿದ್ದರು. 2023ರಲ್ಲಿ ಹೈದರಾಬಾದ್​ನಲ್ಲಿ ನಡೆದ ‘ವಿಮೋಚನಾ ದಿನಾಚರಣೆ’ ಧ್ವಜಾರೋಹಣದ ವೇಳೆಯೂ ಶ್ರೀರಾಮುಲು‌ವನ್ನು ಅಮಿತ್ ಶಾ ಕರೆಸಿಕೊಂಡಿದ್ದರು. ಹೀಗಾಗಿ, ಅಮಿತ್ ಶಾ ಜೊತೆಗೆ ಇರುವ ಹಳೆಯ ನಂಟಿನ ಸದ್ಭಳಕೆ ಮಾಡಿಕೊಳ್ಳಲು ಶ್ರೀರಾಮುಲು‌ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದಕ್ಷಿಣ ಭಾರತದವರಿಗೆ ಮುಂದಿನ ಬಿಜೆಪಿ ಅಧ್ಯಕ್ಷ ಪಟ್ಟ? ಹೋಳಿ ಹಬ್ಬದ ಬಳಿಕ ಹೆಸರು ಘೋಷಣೆ

ಸದ್ಯದ ಮಟ್ಟಿಗೆ ರಾಮುಲು ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೋರ್ ಕಮಿಟಿಯಲ್ಲಾದ ಅಪಮಾನದ ಬಳಿಕ ಪಕ್ಷದ ನಾಯಕರೊಂದಿಗೆ ಅಂತರ ಕಾಯ್ದಕೊಂಡಿದ್ದಾರೆ. ಶಾ ಅವರನ್ನು ಒಂದು ವೇಳೆ ನಾಳೆ ಭೇಟಿಯಾದರೆ ನಂತರ ಎಲ್ಲವೂ ಸರಿ ಹೋಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್