‘ನಮ್ಮ ದಿವಾಕರ್’: ನ. 26ಕ್ಕೆ ಕಥೆಗಾರ ಎಸ್ ದಿವಾಕರ್ಗೆ ಅಭಿನಂದನೆ, ಸಾಹಿತ್ಯ-ಸಂಗೀತ ಸಂಭ್ರಮ ಕಾರ್ಯಕ್ರಮ
‘ಎಸ್ ದಿವಾಕರ್ ಸ್ನೇಹಿತರ ಬಳಗ’ ಸಂಪಾದಿಸಿ, ವೀರಲೋಕ ಪ್ರಕಾಶನ ಪ್ರಕಟಿಸಿರುವ ‘ಪರಿಮಳದ ಪಡಸಾಲೆ’ ಎಂಬ ಕೃತಿ ವಿಶೇಷ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಸಂಗೀತ ಸಂಭ್ರಮದಲ್ಲಿ ದಿವಾಕರ್ ವಿರಚಿತ ಭಾವಗೀತೆಗಳ ಗಾಯನ ನಡೆಯಲಿದೆ. ಎಂ ಪರಮೇಶ್ವರ ಹೆಗಡೆ ಅವರ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು, ನವೆಂಬರ್ 18: ಕನ್ನಡದ ಖ್ಯಾತ ಕಥೆಗಾರ ಎಸ್ ದಿವಾಕರ್ 80ನೇ ವರ್ಷಕ್ಕೆ ಕಾಲಿಡುತ್ತಿರುವ ಪ್ರಯುಕ್ತ ‘ಎಸ್ ದಿವಾಕರ್ ಸ್ನೇಹಿತರ ಬಳಗ’ ನವೆಂಬರ್ 26ರಂದು ‘ನಮ್ಮ ದಿವಾಕರ್’ ಕಾರ್ಯಕ್ರಮ ಆಯೋಜಿಸಿದೆ. ಬೆಂಗಳೂರಿನ ಬಸವನಗುಡಿಯ ಬಿಪಿ ವಾಡಿಯಾ ರಸ್ತೆ ಬಳಿ ಇರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಬೆಳಗ್ಗೆ 10.15ರಿಂದ ಕಾರ್ಯಕ್ರಮ ನಡೆಯಲಿದೆ. ದಿವಾಕರ್ ಅವರಿಗೆ ಅಭಿನಂದನೆ, ಸಾಹಿತ್ಯ ಮತ್ತು ಸಂಗೀತ ಸಂಭ್ರಮ ಇರಲಿದೆ ಎಂದು ‘ಎಸ್ ದಿವಾಕರ್ ಸ್ನೇಹಿತರ ಬಳಗ’ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಹಿತ್ಯ ಸಂಭ್ರಮದಲ್ಲಿ ದಿವಾಕರ್ ಪದಚಿತ್ರಗಳು, ಪುಸ್ತಕ ಬಿಡುಗಡೆಯೂ ನಡೆಯಲಿದೆ. ಅತಿಥಿಗಳಾಗಿ ಎಂಎಸ್ ಆಶಾದೇವಿ, ವಿವೇಕ ಶಾನಭಾಗ ಭಾಗವಹಿಸಲಿದ್ದಾರೆ.
‘ಎಸ್ ದಿವಾಕರ್ ಸ್ನೇಹಿತರ ಬಳಗ’ ಸಂಪಾದಿಸಿ, ವೀರಲೋಕ ಪ್ರಕಾಶನ ಪ್ರಕಟಿಸಿರುವ ‘ಪರಿಮಳದ ಪಡಸಾಲೆ’ ಎಂಬ ಕೃತಿ ವಿಶೇಷ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.
ಸಂಗೀತ ಸಂಭ್ರಮದಲ್ಲಿ ದಿವಾಕರ್ ವಿರಚಿತ ಭಾವಗೀತೆಗಳ ಗಾಯನ ನಡೆಯಲಿದೆ. ಎಂ ಪರಮೇಶ್ವರ ಹೆಗಡೆ ಅವರ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಲಕ್ಷ್ಮೀ ನಾಗರಾಜ, ಕೀರ್ತನ್ ಹೊಳ್ಳ, ಸುನಿಧಿ ಗಣೇಶ್, ನಿಶಿತಾ ಪ್ರಸಾದ್, ಸಾನ್ವಿ ಶೆಟ್ಟಿ, ವೀಣಾ ರಮೇಶ್ ಗಾಯನ ಮಾಡಲಿದ್ದು, ಗುರುಮೂರ್ತಿ ವೈದ್ಯ ತಬಲಾದಲ್ಲಿ, ಸಮೀರ್ ರಾವ್ ಬಾನ್ಸುರಿ ಮತ್ತು ರಂಜನ್ ಬೇವೂರ ವಯಲಿನ್ನಲ್ಲಿ ಸಹಕರಿಸಲಿದ್ದಾರೆ. ನಯನ್ ಯಾವಗಲ್ ಕೀಬೋರ್ಡ್, ನಾಗೇಂದ್ರ ಭಟ್ಟ ತಾಳವಾದ್ಯ ಹಾಗೂ ಪಂ. ಪರಮೇಶ್ವರ ಹೆಗಡೆ ಹಾರ್ಮೋನಿಯಮ್ ನಲ್ಲಿ ಸಹಕರಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ