AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್​ಗೆ ಎಪಿಕೆ ಫೈಲ್​ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ!

ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್ ರೂಪದಲ್ಲಿ ಬಂದ ನಕಲಿ ಮದುವೆ ಆಮಂತ್ರಣವನ್ನು ಕ್ಲಿಕ್ ಮಾಡಿದ ಪರಿಣಾಮ ಬೆಂಗಳೂರಿನ ಅರಣ್ಯ ಇಲಾಖೆ ನೌಕರರೊಬ್ಬರು 9.96 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಉತ್ತರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸೈಬರ್ ವಂಚಕರು ಹೊಸ ಹೊಸ ವಿಧಾನದ ಮೂಲಕ ವಂಚಿಸುತ್ತಿದ್ದು, ಜನರು ಎಚ್ಚರಿಕೆ ವಹಿಸಬೇಕಿದೆ.

ವಾಟ್ಸಾಪ್​ಗೆ ಎಪಿಕೆ ಫೈಲ್​ನಲ್ಲಿ ಬಂತು ಮದುವೆ ಆಮಂತ್ರಣ: ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 9.96 ಲಕ್ಷ ರೂ. ಮಾಯ!
ಸಾಂದರ್ಭಿಕ ಚಿತ್ರImage Credit source: TV9 Network
ಶಿವಪ್ರಸಾದ್​ ಬಿ.
| Edited By: |

Updated on: Jul 21, 2026 | 11:58 AM

Share

ಬೆಂಗಳೂರು, ಜುಲೈ 21: ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್ (APK File)ರೂಪದಲ್ಲಿ ಬಂದಿದ್ದ ನಕಲಿ ಮದುವೆ ಆಮಂತ್ರಣವನ್ನು (Wedding Card) ಕ್ಲಿಕ್ ಮಾಡಿದ ಪರಿಣಾಮ ಅರಣ್ಯ ಇಲಾಖೆಯ ನೌಕರರೊಬ್ಬರು ಸುಮಾರು 9.96 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ವರದಿಯಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಸೈಬರ್ ವಂಚಕರು ಹೊಸ ಹೊಸ ವಿಧಾನದ ಮೂಲಕ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಂತಾಗಿದೆ.

ಅಪರಿಚಿತ ಮೊಬೈಲ್​ ಸಂಖ್ಯೆಯಿಂದ ಬಂತು ಮದುವೆ ಆಮಂತ್ರಣ

ದೂರುದಾರ ರಮೇಶ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣದ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಲಾಗಿತ್ತು. ಅದು ಸಾಮಾನ್ಯ ಆಹ್ವಾನ ಪತ್ರಿಕೆ ಎಂದು ಭಾವಿಸಿ ಅವರು ಕ್ಲಿಕ್ ಮಾಡಿದ್ದರು. ತಕ್ಷಣವೇ ಎಪಿಕೆ ಫೈಲ್ ಡ್ಔನ್​ಲೋಡ್ ಆಗಿದ್ದು, ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ಡೆಬಿಟ್ ಆಗಿರುವ ಸಂದೇಶಗಳು ಬಂದಿವೆ.

ಲಕ್ಷಾಂತ ರೂ. ಕಳಕೊಂಡ ಬಳಿಕ ತಿಳಿದ ಸತ್ಯ

ಒಟ್ಟಾರೆ 9 ಲಕ್ಷ 96 ಸಾವಿರ ರೂಪಾಯಿ ಖಾತೆಯಿಂದ ವರ್ಗಾವಣೆಯಾದ ಬಳಿಕ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ರಮೇಶ್ ಅವರಿಗೆ ಗೊತ್ತಾಗಿದೆ. ಬಳಿಕ ಅವರು ಬೆಂಗಳೂರಿನ ಉತ್ತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತರಿಂದ ಬಂದ ಫೈಲ್​ಗಳನ್ನು ಕ್ಲಿಕ್ ಮಾಡಬೇಡಿ

ಅಪರಿಚಿತ ವ್ಯಕ್ತಿಗಳಿಂದ ಬರುವ APK ಫೈಲ್‌ಗಳು, ಲಿಂಕ್‌ಗಳು ಅಥವಾ ಮದುವೆ ಆಮಂತ್ರಣಗಳ ಹೆಸರಿನಲ್ಲಿರುವ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಓಪನ್ ಮಾಡಬಾರದು ಎಂದು ಸಾರ್ವಜನಿಕರಿಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಾಟ್ಸ್ಆ್ಯಪ್​ನಲ್ಲಿ ಹರಿದಾಡುತ್ತಿದೆ ಆರ್​ಟಿಒ ಚಲನ್ ಸ್ಕ್ಯಾಮ್: ಈರೀತಿ ಮೆಸೇಜ್ ಬಂದರೆ ಎಚ್ಚರ

ಈ ಹಿಂದೆ, ಬ್ಯಾಂಕ್​ಗಳ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿ ವಂಚಿಸುತ್ತಿದ್ದ ಅನೇಕ ಪ್ರಕರಣಗಳು ವರದಿಯಾಗಿದ್ದವು. ಆ ನಂತರ, ಟ್ರಾಫಿಕ್ ಚಲನ್ ಹೆಸರಿನಲ್ಲಿ ಎಪಿಕೆ ಫೈಲ್​ಗಳನ್ನು ವಾಟ್ಸಾಪ್​ನಲ್ಲಿ ಕಳುಹಿಸಿ ವಂಚಿಸಿದ ಅನೇಕ ಪ್ರಕರಣಗಳು ವರದಿಯಾಗಿದ್ದವು. ಇದೀಗ ಮದುವೆ ಆಮಂತ್ರಣದ ಎಪಿಕೆ ಫೈಲ್ ಕಳುಹಿಸಿ ವಂಚಿಸಲಾಗುತ್ತಿದೆ. ಮದುವೆ ಆಮಂತ್ರಣ, ನೋಡೋಣ ಎಂದು ಕ್ಲಿಕ್ ಮಾಡಿದರೆ ಎಪಿಕೆ ಫೈಲ್ ಮೊಬೈಲ್​ನಲ್ಲಿ ಡೌನ್​ಲೋಡ್ ಆಗಿ ಮೊಬೈಲ್ ಹ್ಯಾಕ್ ಆಗುತ್ತದೆ. ಇದರಿಂದ ಮೊಬೈಲ್​​ನಲ್ಲಿರುವ ದತ್ತಾಂಶಗಳು ಸೈಬರ್ ವಂಚಕರ ಪಾಲಾಗಿ ಅವರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು. ಹೀಗಾಗಿ ಎಚ್ಚರ ವಹಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!