ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಸಬ್ಸಿಡಿ ಆಸೆಗಾಗಿ ಉದ್ಯಮ ಸ್ಥಾಪನೆ, ಅದರಲ್ಲೂ ಸ್ಥಳೀಯರಿಗೆ ಇಲ್ಲ ಉದ್ಯೋಗಾವಕಾಶ

KIADB: ಕೈಗಾರಿಕೆ ನಡೆಸುವುದಾಗಿ ಹೇಳಿ ಕೆಐಎಡಿಬಿಯಿಂದ ಬೀದರ್ ನಗರದ ನೌಬಾದ್ ಕೈಗಾರಿಕಾ ಪ್ರದೇಶದಲ್ಲಿ ಜಾಗ ಪಡೆದ ಅನೇಕ ಉದ್ಯಮಿಗಳು ಅಲ್ಲಿ ಕಾರ್ಖಾನೆ ಸ್ಥಾಪಿಸಿಲ್ಲ, ಬಹುತೇಕ ಕಾರ್ಖಾನೆಗಳು ಅಕ್ಕಪಕ್ಕದ ರಾಜ್ಯದವರ ಪಾಲಾಗಿದೆ. ಅವರು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಜೊತೆಗೆ ಹೊಸ ಯುವ ಉದ್ಯಮಿಗಳಿಗೆ ಕೈಗಾರಿಕೆ ನಡೆಸಲು ಇಲ್ಲಿ ಜಾಗವೇ ಇಲ್ಲ ಎಂಬಂತಹ ವಾತಾವರಣವೂ ನಿರ್ಮಾಣವಾಗಿದೆ.

ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಸಬ್ಸಿಡಿ ಆಸೆಗಾಗಿ ಉದ್ಯಮ ಸ್ಥಾಪನೆ, ಅದರಲ್ಲೂ ಸ್ಥಳೀಯರಿಗೆ ಇಲ್ಲ ಉದ್ಯೋಗಾವಕಾಶ
ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಗೋಲ್​ಮಾಲ್​​
Follow us
ಸುರೇಶ ನಾಯಕ
| Updated By: ಸಾಧು ಶ್ರೀನಾಥ್​

Updated on: Nov 24, 2023 | 4:49 PM

ಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಕೈಗಾರಿಕಾ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಭೂಮಿ ಕೊಡುತ್ತದೆ. ಹೀಗೆ ಜಮೀನು ಪಡೆದವರು ಆ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸಬೇಕು, ಸ್ಥಳೀಯರಿಗೆ ಉದ್ಯೋಗ (Employment) ಕೊಡಬೇಕು. ಆದರೆ, ಬೀದರ್ ( Bidar) ಜಿಲ್ಲೆಯಲ್ಲಿ ಈ ನಿಯಮ ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ. ಆ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ. ಹೆಸರಿಗೆ ಮಾತ್ರ ಬೀದರ್ ಕೈಗಾರಿಕಾ ಪ್ರದೇಶ…. ಶೇಕಡಾ 20 ರಷ್ಟು ಕಾರ್ಖಾನೆಗಳು ಬಂದ್, ಹತ್ತಾರು ವರ್ಷದಿಂದ ಬಂದ್ ಇರುವ ಕಾರ್ಖಾಗಳನ್ನ ತನ್ನ ವಶಕ್ಕೆ ಪಡೆಯುವಲ್ಲಿ ಕೆಐಡಿಬಿ (Karnataka Industrial Areas Development Board) ಅಧಿಕಾರಿಗಳು ವಿಫಲ… ಇನ್ನು ಶೇಕಡಾ 80 ರಷ್ಟು ಚಾಲ್ತಿಯಲ್ಲಿರುವ ಕಾರ್ಖಾಗಳಲ್ಲಿ ಸ್ಥಳೀಯರಿಗೆ ಅವಕಾಶವೇ ಇಲ್ಲ; ಎಲ್ಲಾ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದವರೆ ಇದ್ದಾರೆ ಕಾರ್ಮಿಕರು

ಹೌದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) – ಕೈಗಾರಿಕೆ ಉತ್ತೇಜನಕ್ಕಾಗಿ ಮೀಸಲಿರುವ ಸಂಸ್ಥೆ. ಈ ಸಂಸ್ಥೆಯು ಕೈಗಾರಿಕೆ ನಡೆಸಲು ಉದ್ಯಮಿಗಳಿಗೆ ಕಡಿಮೆ ಬೆಲೆಯಲ್ಲಿ ಭೂಮಿ ನೀಡುತ್ತದೆ. ಆದರೆ ಕೈಗಾರಿಕೆ ನಡೆಸುವುದಾಗಿ ಹೇಳಿ ಬೀದರ್ ನಗರದ ನೌಬಾದ್ ಕೈಗಾರಿಕಾ ಪ್ರದೇಶದಲ್ಲಿ ಜಾಗ ಪಡೆದ ಜಿಲ್ಲೆಯ ಕೆಲವು ಉದ್ಯಮಿಗಳು ಅಲ್ಲಿ ಕಾರ್ಖಾನೆ ಸ್ಥಾಪಿಸಿಲ್ಲ, ಕೆಲವರು ಕಾರ್ಖಾನೆಯನ್ನ ಆರಂಭಿಸಿ ಕೆಲವು ವರ್ಷ ನಡೆಸಿ ಅದನ್ನ ಬಂದ್ ಮಾಡಿದ್ದಾರೆ. ಇನ್ನೂ ಕೆಲವರು ಒಂದು ಉದ್ದೇಶಕ್ಕೆ ಜಮೀನು ಪಡೆದುಕೊಂಡು ಇತರೆ ಉದ್ದೇಶಕ್ಕಾಗಿ ಜಮೀನು ಬಳಸುತ್ತಿದ್ದಾರೆ.

ಮಂಡಳಿಯಿಂದ ನಿವೇಶನ ಪಡೆದ ಮಾಲೀಕರು ಕಾರ್ಖಾನೆ ಸ್ಥಾಪಿಸಬೇಕೆಂಬ ಒಡಂಬಡಿಕೆ ಮೇರೆಗೆ ನಿವೇಶನ ನೀಡಲಾಗುತ್ತದೆ. ಕೈಗಾರಿಕಾ ಪ್ರದೇಶದಲ್ಲಿ ಕೇವಲ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಹಂಚಿಕೆ ಮಾಡಲಾಗುತ್ತದೆ. ಭೂಮಿ ಪಡೆದ ಭೂ ಮಾಲೀಕರು ಕಡ್ಡಾಯವಾಗಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬ ನಿಯಮ ಕೂಡ ಇದೆ. ಅಷ್ಟಕ್ಕೂ, 15 ವರ್ಷಗಳ ಕಾಲ ನಿರಂತರ ಕಾರ್ಖಾನೆ ನಡೆಸುವ ಮಾಲೀಕರು ಕೈಗಾರಿಕಾ ಪ್ರದೇಶದಲ್ಲಿ ಪಡೆದ ಭೂಮಿಗೆ ಹಕ್ಕುದಾರರು ಆಗುತ್ತಾರೆ. ಭೂಮಿಯ ಹಕ್ಕು ಪಡೆದರೂ ಬೇರೆ ಯಾವುದೋ ಉದ್ಯೋಗ ಅಥವಾ ಇನ್ನಿತರೆ ಉದ್ದೇಶಕ್ಕೆ ಭೂಮಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಕಾರ್ಖಾನೆಗಳು ಬಂದ್ ಆಗಿ ಹತ್ತಾರು ವರ್ಷಗಳು ಉರುಳಿದರು ಆ ಜಾಗೆಯನ್ನ ಕೆಐಡಿಬಿಯವರು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕೆಐಎಡಿಬಿ ಹಂಚಿಕೆಯಲ್ಲಿ 4,248 ಕೋಟಿ ರೂ. ಬಾಕಿ: 4 ತಿಂಗಳಲ್ಲಿ ವಸೂಲಿ ಮಾಡುವಂತೆ ಸಚಿವ ಎಂಬಿ ಪಾಟೀಲ್​​ ಗಡುವು

ಇನ್ನು ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಶೇಕಡಾ 20 ರಷ್ಟು ಕಾರ್ಖಾನೆಗಳು ಬಂದ್ ಆಗಿದ್ದು ಹತ್ತಾರು ವರ್ಷಗಳೇ ಉರುಳಿಹೋಗಿವೆ. ಒಂದೊಂದು ಕಾರ್ಖಾನೆಯವರು 50-60 ಎಕರೆಯಷ್ಟು ಜಮೀನನ್ನ ಪಡೆದುಕೊಂಡು ಹೆಸರಿಗೆ ಮಾತ್ರ ಒಂದೆಡರು ವರ್ಷಗಳ ಕಾಲ ಕಾರ್ಖಾನೆ ಆರಂಭಿಸಿ ಸರಕಾರದ ಎಲ್ಲಾ ಸೌಲಭ್ಯಗಳನ್ನ, ಸಬ್ಸಿಡಿಗಳನ್ನ ಪಡೆದುಕೊಂಡು ಕಾರ್ಖಾನೆಗಳನ್ನ ಬಂದ್ ಮಾಡಿದ್ದಾರೆ!

ಆದರೆ ಆ ಹತ್ತಾರು ಎಕರೆಯಷ್ಟು ಜಾಗೆಯನ್ನ ಕೆಐಡಿಬಿಯವರಿಗೆ ಹಸ್ತಾಂತರಿಸಿಲ್ಲ. ಇದರಿಂದಾಗಿ ಹೊಸದಾಗಿ ಉದ್ಯೋಗ ಮಾಡಬೇಕು ಅನ್ನೋ ಆಸೆ ಇರುವ ಯುವ ಉದ್ಯಮಿಗಳಿಗೆ ಕೈಗಾರಿಕೆ ನಡೆಸಲು ಜಾಗವೇ ಇಲ್ಲ ಎಂಬಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಇದರ ಜೊತೆಗೆ ಬೀದರ್ ನ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಕಾರ್ಖಾನೆಗಳು ಅಕ್ಕಪಕ್ಕದ ರಾಜ್ಯದವರದ್ದೇ. ಆದರೆ ಅವರು ತಮ್ಮದೆ ರಾಜ್ಯದವರನ್ನ ಕರೆದುಕೊಂದು ಬಂದು ಇಲ್ಲಿ ಉದ್ಯೋಗ ಕೊಡುತ್ತಿದ್ದಾರೆ. ಕೆಲಸದ ನೈಪುಣ್ಯ ಹೊಂದಿದ್ದರೂ, ಸ್ಥಳೀಯರಿಗೆ ಉದ್ಯೋಗವಕಾಶ ನೀಡದೆ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ.

ಸ್ಥಳೀಯರಿಗೆ ಉದ್ಯೋಗ ನಿರಾಕರಿಸಿ ಹೊರ ರಾಜ್ಯದವರಿಗೆ ಉದ್ಯೋಗವಕಾವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಹತ್ತಾರು ಸಲ ಪ್ರತಿಭಟನೆ ಮಾಡಿದರು ಕೂಡಾ ಸ್ಥಳೀಯರಿಗೆ, ಕನ್ನಡಿಗರಿಗೆ ಇಲ್ಲಿನ ಕಾರ್ಖಾನೆಯ ಮಾಲೀಕರು ಉದ್ಯೋಗ ಕೊಡುತ್ತಿಲ್ಲ ಎಂದು ಸಹಜವಾಗಿಯೇ ಇಲ್ಲಿನ ಜನರು ಆಕ್ರೋಶಗೊಂಡಿದ್ದಾರೆ. ಹೆಚ್ಚು ಹೆಚ್ಚು ಕೈಗಾರಿಕೆ ಸ್ಥಾಪಿಸಬೇಕು ಅನ್ನೋ ಉದ್ದೇಶದಿಂದ ಹೊಸದಾಗಿ 6 ನೂರು ಎಕರೆಯಷ್ಟು ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಇಲ್ಲಿಯೂ ಜಮೀನು ಹಂಚಿಕೆಯಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕೊಡಲಾಗಿದೆಯೆ ವಿನಃ ಚಿಕ್ಕಚಿಕ್ಕ ಉದ್ಯಮಿಗಳನ್ನ ಕಡೆಗಣಿಸಲಾಗಿದೆ. ಸಬ್ಸಿಡಿ ಆಸೆಗಾಗಿ ಕಾರ್ಖಾನೆಯನ್ನ ಸ್ಥಾಪಿಸಿ ಒಂದೆಡರು ವರ್ಷ ನಡೆಸಿ ಅದನ್ನ ಬಂದ್ ಮಾಡುತ್ತಿರುವುದು ನಿಜಕ್ಕೂ ದುರಂತ ಅಂತಾ ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ಬಿ.ಜಿ. ಶಟಿಗಾರ ಹೇಳುತ್ತಾರೆ.

ಸರಕಾರ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಕಷ್ಟು ಶ್ರಮಿಸುತ್ತಿದೆ. ಕೈಗಾರಿಕೆ ಅಭ್ಯುದಯಕ್ಕಾಗಿಯೂ ಕಡಿಮೆ ವೆಚ್ಚದಲ್ಲಿ ಭೂಮಿ ನೀಡುತ್ತಿದೆ. ಆದರೆ, ಹೀಗೆ ಭೂಮಿ ಪಡೆದವರು ಸರ್ಕಾರವನ್ನು ನೇರವಾಗಿಯೇ ವಂಚಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು