ಬೀದರ್: ಪಶುಭಾಗ್ಯ ಯೋಜನೆ ಅನುದಾನ ಕಟ್, ಫಲಾನುಭವಿಗಳು ಕಂಗಾಲು
ಬೀದರ್: ಹಸು.. ಎಮ್ಮೆ.. ಕೋಳಿ.. ಕುರಿಗಳೇ ಅವರ ಬದುಕು.. ಪಶುಗಳನ್ನ ಸಾಕೋದೆ ಒಂದು ಪ್ರಪಂಚ. ಜೀವನದಲ್ಲಿ ಕಷ್ಟ ಬರ್ಲಿ. ನಷ್ಟವೇ ಆಗ್ಲಿ ಮಕ್ಕಳಂತೆ ಸಾಕೋದೆ ಕಾಯಕ. ಆದ್ರೆ, ಪಶುಸಂಗೋಪನೆ ನಂಬ್ಕೊಂಡಿದ್ದೋರು ಶಾಕ್ ಆಗಿದ್ದಾರೆ. ಸಚಿವರ ತವರು ಜಿಲ್ಲೆಯಲ್ಲೇ ‘ಪಶುಭಾಗ್ಯ’ ಅನುದಾನ ಕಟ್! ಯೆಸ್.. ಆಕಳು.. ಎಮ್ಮೆ.. ಕುರಿ ಸಾಕಾಣಿಗೆ ಮಾಡಿ ಬೀದರ್ ಜಿಲ್ಲೆ ಜನರು ಬದುಕಿನ ಬಂಡಿ ಸಾಗಿಸ್ತಿದ್ರು. ಎಲ್ಲೆ ಹೋದ್ರೂ. ಎತ್ತ ಸಾಗಿದ್ರೂ ಸಾಕಿದ ಪ್ರಾಣಿಗಳ ಜೊತೆಯಲ್ಲೇ ಹೆಜ್ಜೆ ಹಾಕ್ತಿದ್ರೂ. ಗ್ರಾಮೀಣ ಭಾಗದ ಬಡ ಜನರ […]
ಬೀದರ್: ಹಸು.. ಎಮ್ಮೆ.. ಕೋಳಿ.. ಕುರಿಗಳೇ ಅವರ ಬದುಕು.. ಪಶುಗಳನ್ನ ಸಾಕೋದೆ ಒಂದು ಪ್ರಪಂಚ. ಜೀವನದಲ್ಲಿ ಕಷ್ಟ ಬರ್ಲಿ. ನಷ್ಟವೇ ಆಗ್ಲಿ ಮಕ್ಕಳಂತೆ ಸಾಕೋದೆ ಕಾಯಕ. ಆದ್ರೆ, ಪಶುಸಂಗೋಪನೆ ನಂಬ್ಕೊಂಡಿದ್ದೋರು ಶಾಕ್ ಆಗಿದ್ದಾರೆ.
ಸಚಿವರ ತವರು ಜಿಲ್ಲೆಯಲ್ಲೇ ‘ಪಶುಭಾಗ್ಯ’ ಅನುದಾನ ಕಟ್! ಯೆಸ್.. ಆಕಳು.. ಎಮ್ಮೆ.. ಕುರಿ ಸಾಕಾಣಿಗೆ ಮಾಡಿ ಬೀದರ್ ಜಿಲ್ಲೆ ಜನರು ಬದುಕಿನ ಬಂಡಿ ಸಾಗಿಸ್ತಿದ್ರು. ಎಲ್ಲೆ ಹೋದ್ರೂ. ಎತ್ತ ಸಾಗಿದ್ರೂ ಸಾಕಿದ ಪ್ರಾಣಿಗಳ ಜೊತೆಯಲ್ಲೇ ಹೆಜ್ಜೆ ಹಾಕ್ತಿದ್ರೂ. ಗ್ರಾಮೀಣ ಭಾಗದ ಬಡ ಜನರ ಆರ್ಥಿಕ ಸುಧಾರಣೆಗಾಗಿ 2015-16ನೇ ಸಾಲಿನಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆ ನಂಬ್ಕೊಂಡು ಸಾವಿರಾರು ಫಲಾನುಭವಿಗಳು ಜೀವನ ಸಾಗಿಸ್ತಿದ್ರು. ಆದ್ರೀಗ ಪಶು ಸಂಗೋಪನೆ ಸಚಿವರ ತವರು ಜಿಲ್ಲೆಯಲ್ಲೇ ಮಹತ್ವದ ಯೋಜನೆ ಅನುದಾನಕ್ಕೆ ಕತ್ತರಿ ಬಿದ್ದಿದೆ.
ಅನುದಾನ ದಿಢೀರ್ ಕಟ್ ಆಗಿರೋದ್ರಿಂದ ಫಲಾನುಭವಿಗಳ ಸಂಖ್ಯೆ ಇಳಿಕೆಯಗಿದೆ. ಹಾಗಿದ್ರೆ ಎಷ್ಟು ಅನುದಾನ ಬಂದಿತ್ತು ಅನ್ನೋದನ್ನ ನೋಡೋದಾದ್ರೆ.
ಫಲಾನುಭವಿಗಳ ಸಂಖ್ಯೆ ಇಳಿಮುಖ! 2017-18 ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿ 2,120 ಜನ ಫಲಾನುಭವಿಗಳು ಆಯ್ಕೆಯಾಗಿ ಯೋಜನೆ ಲಾಭ ಪಡೆದುಕೊಂಡಿದ್ರು. ಇನ್ನೂ 2018-19 ನೇ ಸಾಲಿನಲ್ಲಿ 2, 245 ಪಶುಭಾಗ್ಯ ಯೋಜನ ಫಲಾನುಭವಿಗಳ ಸಂಖ್ಯೆಯಾಗಿತ್ತು. 2016ರಿಂದ 2019ನೇ ಸಾಲಿನಲ್ಲಿ ಒಟ್ಟು 996.32 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ 2019-20 ನೇ ಸಾಲಿನಲ್ಲಿ 297 ಫಲಾನುಭವಿಗಳು ಈ ಯೋಜನೆ ಲಾಭ ಪಡೆದ್ಕೊಂಡಿದ್ದು, 73.81 ಲಕ್ಷ ರೂಪಾಯಿ ರಿಲೀಸ್ ಮಾಡಿದ್ರಂತೆ.
ಪ್ರತಿ ವರ್ಷ ಜಿಲ್ಲೆಗೆ ಅನುಗುಣವಾಗಿ ಎಮ್ಮೆ, ಆಕಳು ಖರೀದಿಗೆ 1.20 ಲಕ್ಷ ರೂಪಾಯಿ, ಕುರಿ, ಮೇಕೆ ಖರೀದಿಗೆ 67 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಮೇಕೆ, ಕುರಿ ಘಟಕಕ್ಕೆ 15 ಸಾವಿರ ಸಹಾಯಧನ ನೀಡಲಾಗುತ್ತಿದೆ. ಅದ್ರಲ್ಲೂ ಪರಿಶಿಷ್ಟರಿಗೆ ಶೇಕಡ 50ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ. 25ರಷ್ಟು ಸಬ್ಸಿಡಿ ಕೊಡಲಾಗುತ್ತದೆ.
ಉಳಿದ ಹಣವನ್ನು ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ವಿತರಿಸಲಾಗುತ್ತದೆ. ಆದ್ರೆ, ಬಡವರ ಪಾಲಿಗೆ ಸಂಜೀವಿನಿಯಾಗಿದ್ದ ಈ ಯೋಜನೆ ಫಲಾನುಭವಿಗಳ ಸಂಖ್ಯೆಯನ್ನ ಇಳಿಕೆ ಮಾಡಲಾಗಿದೆ. ಅನುದಾನದಲ್ಲಿ ಕಟ್ ಮಾಡಲಾಗಿದ್ದು, 2020-2021 ನೇ ಸಾಲಿನಿಂದ ಈ ಯೋಜನೆ ಕೈ ಬಿಡೋ ಎಲ್ಲಾ ಲಕ್ಷಣಗಳು ಗೋಚರಿಸಿದೆ.
ಒಟ್ನಲ್ಲಿ ಬಡವರ ಪಾಲಿಗೆ ಆಸರೆಯಾಗ್ಲಿ ಅಂತ ಅಂದಿನ ಕಾಗ್ರೆಸ್ ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಆದ್ರೀಗ ಬಿಜೆಪಿ ಸರ್ಕಾರ ಇದಕ್ಕೆ ಎಳ್ಳು ನೀರು ಬಿಡೋ ಲಕ್ಷಣ ಗೋಚರಿಸಿದೆ. ಈ ಯೋಜನೆಯನ್ನ ನಂಬ್ಕೊಂಡೋರು ಕಂಗಾಲಾಗಿದ್ದಾರೆ.
Published On - 7:15 am, Sun, 19 January 20