ಹೊಲಗಳಿಗೆ ಹೋಗಲು ಈ ಗ್ರಾಮದ ರೈತರಿಗೆ ತೆಪ್ಪವೇ ಆಸರೆ: ಮಾಂಜ್ರಾ ನದಿಗೆ ಸೇತುವೆ ನಿರ್ಮಿಸುವಂತೆ ಮನವಿ
ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮಸ್ಥರು ನಿತ್ಯ ತೆಪ್ಪದಲ್ಲಿ ಸಾಗಿಕೊಂಡು ತಮ್ಮ ಹೊಲಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ವರ್ಷದಿಂದ ಈ ಗ್ರಾಮದ ಕೆಲವು ರೈತರು ತಮ್ಮ ಹೊಲಕ್ಕೆ ಹೋಗಬೇಕಾದರೆ ಈ ತೆಪ್ಪವೇ ಇವರಿಗೆ ಆಸರೆಯಾಗಿದೆ. ಮಾಂಜ್ರಾ ನದಿಗೆ ಒಂದು ಸೇತುವೆ ನಿರ್ಮಿಸಿಕೊಂಡಿ ಎಂದು ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
ಬೀದರ್, ಸೆಪ್ಟೆಂಬರ್ 1: ಆ ಗ್ರಾಮದ ರೈತರು (Farmers) ನಿತ್ಯ ತಮ್ಮ ಹೊಲಗಳಿಗೆ ಹೋಗಲು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿಯಿದೆ. ರಭಸದಿಂದ ಹರಿಯುವ ನೀರಿನಲ್ಲಿ ತೆಪ್ಪದ ಸಹಾಯದಿಂದ ತಮ್ಮ ಹೊಲಕ್ಕೆ ಆ ಗ್ರಾಮದ ರೈತರು ಹೋಗಬೇಕಾಗಿದೆ. ಮಕ್ಕಳು, ಮಹಿಳೆಯರು, ವಯಸ್ಸಾದವರು ಎಲ್ಲರೂ ಕೂಡ ಅದೇ ಹತ್ತಿಕೊಂಡು ಹೊಲಕ್ಕೆ ಹೋಗುತ್ತಾರೆ. ಮಾಂಜ್ರಾ ನದಿಗೆ ಒಂದು ಸೇತುವೆ ನಿರ್ಮಿಸಿಕೊಂಡಿ ಎಂದು ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮಸ್ಥರು ನಿತ್ಯ ತೆಪ್ಪದಲ್ಲಿ ಸಾಗಿಕೊಂಡು ತಮ್ಮ ಹೊಲಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ವರ್ಷದಿಂದ ಈ ಗ್ರಾಮದ ಕೆಲವು ರೈತರು ತಮ್ಮ ಹೊಲಕ್ಕೆ ಹೋಗಬೇಕಾದರೆ ಈ ತೆಪ್ಪವೇ ಇವರಿಗೆ ಆಸರೆಯಾಗಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಕೂಡಾ ಈ ತೆಪ್ಪದ ಮೂಲಕವೇ ಸಾಗಿಕೊಂಡು ತಮ್ಮ ಹೊಲಕ್ಕೆ ಹೋಗುತ್ತಾರೆ. ಹೀಗೆ ತೆಪ್ಪದಲ್ಲಿ ಸಾಗುವಾಗ ತೆಪ್ಪದಿಂದ ಜಾರಿ ಬಿದ್ದು ಅದೃಷ್ಯವಶಾತ್ ಪ್ರಾಣಾಪಾಯದಿಂದ ಪಾರಾದ ಸಾಕಷ್ಟು ಉದಾಹರಣೆಗಳು ಕೂಡಾ ಇಲ್ಲಿವೆ.
ಆದರೆ ನಮಗೆ ಚಿಕ್ಕದಾದ ಒಂದು ದೋಣಿ ಅಥವಾ ಚಿಕ್ಕದಾದ ಸೇತುವೆಯನ್ನ ನಿರ್ಮಾಣ ಮಾಡಿಕೊಡಿ ಎಂದು ಅದೆಷ್ಟೋ ಸಲ ಮನವಿ ಮಾಡಿದ್ರು ಕೂಡಾ ಯಾರೊಬ್ಬರು ಕೂಡಾ ಇವರ ಸಮಸ್ಯೆಗೆ ಸ್ಫಂದಿಸಿಲ್ಲ. ಇಸ್ಲಾಂಪುರ ಗ್ರಾಮದ ನೂರಕ್ಕೂ ಹೆಚ್ಚು ಎಕರೆಯಷ್ಟು ಜಮೀನಿಗೆ ಹೋಗಬೇಕಾದರೆ ಅವರಿಗೆ ಕಾಲುದಾರಿಯಿಲ್ಲ ಬದಲಾಗಿ ಅವರು ತಮ್ಮ ತಮ್ಮ ಹೊಲಕ್ಕೆ ಹೋಗಬೇಕಾದರೆ ಅವರಿಗೆ ಆಸರೆಯಾಗಿದ್ದೇ ಈ ತೆಪ್ಪ.
ಇದನ್ನೂ ಓದಿ: Bidar Fort: ಬೀದರ್ ಕೋಟೆ ಮೇಲೆ ಗಿಡ-ಗಂಟಿಗಳ ಆಕ್ರಮಣ; ಕೋಟೆ ಶಿಥಿಲಗೊಳ್ಳುವ ಆತಂಕದಲ್ಲಿ ಜನ
ಈ ದೋಣಿಯ ಸಹಾಯದಿಂದಲೇ ರೈತರು ತಮ್ಮ ತಮ್ಮ ಹೊಲಕ್ಕೆ ಬಂದು ಹೋಗಿ ಮಾಡುತ್ತಿದ್ದಾರೆ. ಇನ್ನೂ ತಮ್ಮ ಹೊಲದಲ್ಲಿ ಬೆಳೆದ ರಾಶಿಯನ್ನ ಸಹ ಇದೆ ತೆಪ್ಪದ ಸಹಾಯದಿಂದಲೇ ತೆಗದುಕೊಂಡು ಬರುತ್ತಾರೆ. ಇನ್ನೂ ಹೀಗೆ ತೆಪ್ಪದಲ್ಲಿ ಸಾಗುವಾಗಿ ನಾವು ಎಷ್ಟೋ ಸಲ ನೀರಿನಲ್ಲಿ ಬಿದ್ದಿದ್ದು ಅನ್ನದ ಖುಣ ಇನ್ನೂ ಇತ್ತು ಅನ್ನೋ ಕಾರಣಕ್ಕೆ ಬದುಕಿ ಬಂದಿದ್ದೇವೆಂದು ಇಲ್ಲಿನ ರೈತ ಮಹಿಳೆ ಹೇಳುತ್ತಿದ್ದಾಳೆ.
ಈ ಮಾಂಜ್ರಾ ನದಿಯ ನೀರು ಯಾವಾಗಲು ಇರುತ್ತದೆ ಬೆಸಿಗೆಯ ಸಮಯದಲ್ಲಿ ಕೆಲವು ಸಲ ಮಾತ್ರ ಇರೋದಿಲ್ಲ ಅಂತಹ ಸಮಯದಲ್ಲಿ ಮಾತ್ರಾ ನದಿಯಲ್ಲಿ ನಡೆದುಕೊಂಡು ತಮ್ಮ ಜಾನುವಾರುಗಳನ್ನ ಕರೆದುಕೊಂಡು ಹೋಗುತ್ತಾರೆ. ಇನ್ನೂಳಿದ ಎಲ್ಲಾ ಸಮಸಯದಲ್ಲಿಯೂ ರೈತರು ತೆಪ್ಪದ ಮೇಲೆ ಜಾನುವಾರುಗಳು ನೀರಿನಲ್ಲಿ ಈಜಿಕೊಂಡು ಹೋಗಿ ಹೊಲ ಸೇರುತ್ತವೆ. ತೆಪ್ಪದ ಸಹಾಯವಿಲ್ಲದೆ ಆ ಗ್ರಾಮದ ಜನರು ತಮ್ಮ ಹೊಲಗಳಿಗೆ ಹೋಗಲಾಗುತ್ತಿಲ್ಲ.
ಇದನ್ನೂ ಓದಿ: ಬಳಕೆ ಅನುಕೂಲ ಮಾಡದೆ ಐತಿಹಾಸಿಕ ಬಾವಿಗಳ ನಿರ್ಲಕ್ಷ್ಯ: ಅಧಿಕಾರಿಗಳು ಮತ್ತು ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಬೇಸರ
ನಿತ್ಯ ತೆಪ್ಪದಲ್ಲಿ ಸಾಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ತಮ್ಮ ಹೊಲಕ್ಕೆ ಹೋಗಬೇಕಾಗಿದೆ. ಆ ಹಿನ್ನೀರಿಗೆ ಚಿಕ್ಕದಾದ ಒಂದು ಸೇತುವೆ ನಿರ್ಮಿಸಿ ಎಂದು ಎಷ್ಟೇ ಕೇಳಿದರೆ ಅಲ್ಲಿ ಸೇತುವೆ ನಿರ್ಮಿಸುತ್ತಿಲ್ಲ. ಇದು ಸಹಜವಾಗಿಯೇ ಗ್ರಾಮಸ್ಥರು ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಮಹಿಳೆಯರು ಹೊಲಕ್ಕೆ ಹೋಗಬೇಕಾದರೆ ಒಬ್ಬರೆ ಹೋಗಲು ಸಾದ್ಯವೇ ಇಲ್ಲದಂತಾ ಸ್ಥಿತಿಯಿದೆ ಹೀಗಾಗಿ ಮಹಿಳೆಯರು ಮಕ್ಕಳು ಹೊಲಕ್ಕೆ ಹೋಗಬೇಕಾದರೆ ಜೊತೆಗೆ ಒಂದಿಬ್ಬರನ್ನ ಕರೆದುಕೊಂಡು ಬರಲೇ ಬೇಕಾದ ಅನಿವಾರ್ಯತೆಯಿದೆ.
ಗ್ರಾಮಸ್ಥರು ತೆಪ್ಪದ ಮುಖಾಂತರ ಹೋಗುವುದು ಬೇಡ ಎಂದರೆ 15 ಕಿಲೋಮೀಟರ್ ಸುತ್ತಿಕೊಂಡು ಗ್ರಾಮಸ್ಥರು ತಮ್ಮ ಹೊಲಗಳಿಗೆ ಬರಬೇಕಾಗುತ್ತದೆ. ಆದರೆ ತೆಪ್ಪದ ಮೂಲಕ ಸಾಗಿದರೆ ನೂರು ಮೀಟರ್ ನಲ್ಲಿ ತಮ್ಮ ಹೊಲಗಳಿಗೆ ರೈತರು ಹೋಗುತ್ತಾರೆ. ಹೀಗಾಗಿ ನಮಗೆ ಒಂದು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮದ ಶಾಸಕರು ಈಗ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಈ ಗ್ರಾಮದ ರೈತರ ಸಮಸ್ಯೆ ಗೊತ್ತಿದ್ದರು ಕೂಡಾ ಗ್ರಾಮದ ರೈತರು ಸಹಾಯಕ್ಕೆ ಬರುತ್ತಿಲ್ಲ. ಇದು ಸಹಜವಾಗಿಯೇ ಇಲ್ಲಿನ ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಈ ವಿಚಾರದ ಬಗ್ಗೆ ಸ್ಥಳೀಯ ಶಾಸಕ ಪೌರಾಢಳಿತ ಸಚಿವ ರಹೀಂ ಖಾನ್ ರನ್ನ ಕೇಳಿದರೆ ನನಗೆ ಈ ವಿಚಾರವು ಗೊತ್ತೆಯಿಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ.
ಜೀವ ಕೈಯಲ್ಲಿ ಹಿಡಿದುಕೊಂಡು ಆ ರೈತರು ನದಿದಾಟಬೇಕಾದ ಸ್ಥಿತಿಯಿದೆ. ಇವರಿಗೆ ಸರ್ಕಾರ ಚಿಕ್ಕದಾದ ಒಂದು ಸೇತುವೆ ನಿರ್ಮಾಣ ಮಾಡಿಕೊಟ್ಟರೆ ಇವರ ಕೃಷಿ ಚಟುವಟಿಗೆಗೂ ಕೂಡಾ ಸರಕಾರ ಸಹಾಯಮಾಡಿದಂತಾಗುತ್ತಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಕೂಡಾ ಯಾವುದೆ ಅಂಜಿಕೆ ಅಳುಕ್ಕಿಲ್ಲದೆ ತಮ್ಮ ಹೊಲಗಳಿಗೆ ಕೃಷಿ ಕಾಯಕ ಮಾಡಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.