AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್ ಮದರಸಾದಲ್ಲಿ ಪೂಜೆ ಮಾಡಿದ 9 ಮಂದಿಯ ವಿರುದ್ಧ ಪ್ರಕರಣ, ನಾಲ್ವರ ಬಂಧನ: ಪ್ರತಿಭಟನೆ ನಿರ್ಧಾರ ಕೈಬಿಟ್ಟ ಮುಸ್ಲಿಮರು

ಘಟನೆ ಖಂಡಿಸಿ ಮುಸ್ಲಿಮರು ಪ್ರತಿಭಟನೆಗೆ ಮುಂದಾಗಿದ್ದರು. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ ನಂತರ ಪ್ರತಿಭಟನೆ ನಿರ್ಧಾರ ಹಿಂಪಡೆದರು.

ಬೀದರ್ ಮದರಸಾದಲ್ಲಿ ಪೂಜೆ ಮಾಡಿದ 9 ಮಂದಿಯ ವಿರುದ್ಧ ಪ್ರಕರಣ, ನಾಲ್ವರ ಬಂಧನ: ಪ್ರತಿಭಟನೆ ನಿರ್ಧಾರ ಕೈಬಿಟ್ಟ ಮುಸ್ಲಿಮರು
ಬೀದರ್​ನ ಮೊಹಮದ್ ಗವಾನ್ ಮದರಸಾ ಪ್ರವೇಶಿಸುತ್ತಿರುವ ದೃಶ್ಯ
TV9 Web
| Edited By: |

Updated on:Oct 07, 2022 | 12:57 PM

Share

ಬೀದರ್: ಪುರಾತತ್ವ ಇಲಾಖೆ ಸಂರಕ್ಷಣೆಯಲ್ಲಿರುವ ನಗರದ ಪಾರಂಪರಿಕ ಕಟ್ಟಡ ಮೊಹಮದ್ ಗವಾನ್ ಯೂನಿವರ್ಸಿಟಿ (ಮದರಸಾ) ಹಿಂದೂಗಳು ಪೂಜೆ ನಡೆಸಿ, ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯ ಪೊಲೀಸರು 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಮುನ್ನಾ, ನರೇಶ್, ಯಲ್ಲಾಲಿಂಗ, ಪ್ರಕಾಶ್ ಬಂಧಿತರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಮ್ಮದ್ ಗವಾನ್ ಯುನಿವರ್ಸಿಟಿ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಬೀದರ್​ನಲ್ಲಿ ಪಾರಂಪರಿಕ ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು

ದಸರಾ ಹಬ್ಬದ ಹಿನ್ನೆಲೆಯಲ್ಲಿ ಭವಾನಿ ಮಾತೆಯ ಪಲ್ಲಕಿ ಮೆರವಣಿಗೆ ನಡೆಸುತ್ತಿದ್ದ ಗುಂಪು ಏಕಾಏಕಿ ಮೊಹಮದ್ ಗವಾನ್ ಯುನಿವರ್ಸಿಟಿಗೆ ತೆರಳಿ ಪೂಜೆ ನಡೆಸಿತು. ಪೂಜೆ ವೇಳೆ ಭಾರತ ಮಾತಾಕಿ ಜೈ, ಹಿಂದೂ ಧರ್ಮಕ್ಕಿ ಜೈ ಎಂದು ಕೂಗಿದ ಹಿಂದೂ ಯುವಕರು ಘೋಷಣೆ ಕೂಗಿದ್ದರು. ಅನುಮತಿ ಇಲ್ಲದೆ ಮದರಸಾಕ್ಕೆ ನುಗ್ಗಿದ್ದನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಯಾರನ್ನೂ ಬಂಧಿಸದ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾಗಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಿದ ನಂತರ ಪ್ರತಿಭಟನೆ ನಿರ್ಧಾರ ಹಿಂಪಡೆದರು.

ದಸರಾ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಐತಿಹಾಸಿಕ ಬೀದರ್ ಕೋಟೆಯ ಒಳಗಿರುವ ಒಳಕೋಟೆ ಗ್ರಾಮಸ್ಥರು ಭವಾನಿ ದೇವಿಯ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ರಾತ್ರಿ 9 ಗಂಟೆ ಸುಮಾರಿಗೆ ಮದರಸಾ ಪ್ರವೇಶಿಸಿ ಪೂಜೆ ಮಾಡಿದ್ದರು. ಈ ವಿಷಯ ಮುಸ್ಲಿಂ ‌ಮುಖಂಡರ ಗಮನಕ್ಕೆ ಬಂದ ನಂತರ ನಗರದ ಎಲ್ಲ ಮುಸ್ಲಿಮ್ ಪ್ರಮುಖರು ಮದರಸಾದಲ್ಲಿ ಸಭೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ನೀಡಲು ತೀರ್ಮಾನಿಸಿದರು. ಅದರಂತೆ ಮೊಹಮದ್ ಷಫಿಯುದ್ದೀನ್ ಎನ್ನುವವರು 9 ಜನರ ವಿರುದ್ಧ ನಗರ ಪೊಲೀಸ್ ‌ಠಾಣೆಗೆ ದೂರು ನೀಡಿದರು.

ಘಟನೆ ಕುರಿತು ಹೈದರಾಬಾದ್​ನ ರಾಜಕೀಯ ನಾಯಕ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ ನಂತರ ಈ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ದೂರು ಆಧರಿಸಿ, ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರು ನಾಲ್ವರನ್ನು ಬಂಧಿಸಿದರು. ದಸರಾ ಹಬ್ಬದ ಪ್ರಯುಕ್ತ ಕಾಳಿಕಾಮಾತೆ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದ ಸ್ಥಳೀಯರು ಮಸೀದಿಯಲ್ಲಿ ಕಾಯಿ ಒಡೆದು, ಕುಂಕುಮ ಹಚ್ಚಿದ್ದರು. ಪೊಲೀಸರು ಸಕಾಲದಲ್ಲಿ ಮಧ್ಯಪ್ರವೇಶಿಸಿ ಕ್ರಮ ಜರುಗಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

Published On - 12:51 pm, Fri, 7 October 22

Follow Us
TV9 Web
TV9 Web

TV9 Kannada

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ