ಒನ್ ಟು ತ್ರಿಬಲ್ ಹಣ ಕೊಡಲೇಬೇಕು; ಸಂಘ ಕಟ್ಕೊಂಡು ಬಿಜಿನೆಸ್ಗೆ ಇಳಿದಿರುವ ಖಾಸಗಿ ಆ್ಯಂಬುಲೆನ್ಸ್ ಮಾಲೀಕರು
ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆ ಎದುರು ಖಾಸಗಿ ಆ್ಯಂಬುಲೆನ್ಸ್ ದರಬಾರ್ ಜೋರಾಗಿದೆ. ದಿನದ 24 ಗಂಟೆಯೂ ಆಟೋಗಳ ಹಾಗೆ ಬ್ರಿಮ್ಸ್ ಮುಂದೆ ಖಾಸಗಿ ಆ್ಯಂಬುಲೆನ್ಸ್ಗಳು ನಿಲ್ಲುತ್ತವೆ. ಸರಕಾರಿ ಆ್ಯಂಬುಲೆನ್ಸ್ ಮೂಲೆಗುಂಪು ಮಾಡಿ ಖಾಸಗಿ ಆ್ಯಂಬುಲೆನ್ಸ್ ದರ್ಬಾರ್ ಹೆಚ್ಚಾಗಿದೆ.
ಬೀದರ್: ಮಹಾಮಾರಿ ಕೊರೊನಾ ತೀವ್ರತೆ ಹೆಚ್ಚಾದಾಗ ಆ್ಯಂಬುಲೆನ್ಸ್ಗಾಗಿ ಜನ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಆ್ಯಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಸಿಗದೆ ಅದೆಷ್ಟೂ ಮಂದಿ ಚಿಕಿತ್ಸೆಗೂ ಮೊದಲೇ ಮೃತಪಟ್ಟಿದ್ದಾರೆ. ಸದ್ಯ ಈಗ ಕೊರೊನಾ ಕಡಿಮೆ ಇದ್ದು ಪರಿಸ್ಥಿತಿ ಬದಲಾಗಿದೆ. ಆ್ಯಂಬುಲೆನ್ಸ್ ಮಾಲೀಕರು ಕೆಲಸವಿಲ್ಲದೆ ರೋಗಿಗಳಿಗೆ ಕಾಯುವಂತಾಗಿದೆ. ಆದರೆ ವಿಪರ್ಯಾಸವೆಂದರೆ ಆಟೋ ಚಾಲಕರು ಹೇಗೆ ಜನ ಆಟೋ ಹತ್ತಲಿ ಎಂದು ಜನ ಹೆಚ್ಚು ಓಡಾಡುವ ಸ್ಥಳಗಳಲ್ಲಿ ಆಟೋ ನಿಲ್ಲಿಸುತ್ತಾರೋ ಅದೇ ರೀತಿ ಖಾಸಗಿ ಆ್ಯಂಬುಲೆನ್ಸ್ ಚಾಲಕರು ಸರ್ಕಾರಿ ಆಸ್ಪತ್ರೆಗಳ ಮುಂದೆ ನಿಲ್ಲುತ್ತಿದ್ದಾರೆ.
ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆ ಎದುರು ಖಾಸಗಿ ಆ್ಯಂಬುಲೆನ್ಸ್ ದರ್ಬಾರ್ ಜೋರಾಗಿದೆ. ದಿನದ 24 ಗಂಟೆಯೂ ಆಟೋಗಳ ಹಾಗೆ ಬ್ರಿಮ್ಸ್ ಮುಂದೆ ಖಾಸಗಿ ಆ್ಯಂಬುಲೆನ್ಸ್ಗಳು ನಿಲ್ಲುತ್ತವೆ. ಸರಕಾರಿ ಆ್ಯಂಬುಲೆನ್ಸ್ ಮೂಲೆಗುಂಪು ಮಾಡಿ ಖಾಸಗಿ ಆ್ಯಂಬುಲೆನ್ಸ್ ದರ್ಬಾರ್ ಹೆಚ್ಚಾಗಿದೆ. ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನ ಖಾಸಗಿ ಆಸ್ಪತ್ರೆಗೆ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್ಗಳು ಕಾದು ಕುಳಿತಿವೆ. ತುರ್ತು ಆ್ಯಂಬುಲೆನ್ಸ್ ಬೇಕಾಗುವ ಸಮಯದಲ್ಲಿ 108ಗೆ ಕರೆ ಮಾಡಿದರೆ ಸರ್ಕಾರಿ ಆ್ಯಂಬುಲೆನ್ಸ್ ಸಿಗುವುದಿಲ್ಲ. ಆದರೆ ಕ್ಷಣಾರ್ಧದಲ್ಲಿ ಖಾಸಗಿ ಆ್ಯಂಬುಲೆನ್ಸ್ಗಳು ಸಿಗುತ್ತಿವೆ. ಆದರೆ ಅವರಿಗೆ ಒನ್‌ಟು ತ್ರೀಬಲ್ ಹಣ ಕೊಡಲೇಬೇಕು.
ಸಂಘ ಕಟ್ಟಿಕೊಂಡು ಬಿಜಿನೆಸ್ಗೆ ಖಾಸಗಿ ಆ್ಯಂಬುಲೆನ್ಸ್ ಮಾಲಿಕರು ಇಳಿದಿದ್ದಾರೆ. ಕಾನೂನು ಗಾಳಿಗೆ ತೂರಿ ಬ್ರಿಮ್ಸ್ ಆಸ್ಪತ್ರೆಯ ಗೇಟ್ ಮುಂದೆ ಆ್ಯಂಬುಲೆನ್ಸ್ ನಿಲ್ಲಿಸುತ್ತಿದ್ದಾರೆ. ಇಲ್ಲಿ ಯಾಕೆ ನಿಲ್ಲಿಸುತ್ತಿರೀ ಎಂದು ಕೇಳೋ ಧೈರ್ಯ ಯಾರು ಮಾಡುತ್ತಿಲ್ಲ.
ಇದನ್ನೂ ಓದಿ: ಈ ಮೂರು ರಾಶಿಯ ಜನರಿಗೆ ಪ್ರೀತಿ ಪ್ರೇಮ ಅಂದರೆ ಭಯವೋ ಭಯ; ಯಾರು ಆ ರಾಶಿಯವರು, ತಿಳಿದುಕೊಳ್ಳಿ
Published On - 8:12 am, Fri, 20 August 21