Success Story: ನಷ್ಟದಲ್ಲಿದ್ದ ರೈತ ‘ಕೈ ಕೆಸರಾದರೆ ಬಾಯಿ ಮೊಸರು’ ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ! ಏನು ಆತನ ಸಾಧನೆ? ನುಗ್ಗೆ ಬೀಜಕ್ಕೆ ಬಂತು ಭಾರೀ ಡಿಮ್ಯಾಂಡ್
Drumstick Farming: ಇನ್ನು ನಾಟಿ ಮಾಡಲು ಬಿತ್ತನೆ ಬೀಜಕ್ಕಾಗಿ ಇವರ ತೋಟದಲ್ಲಿ ಬೆಳೆದ ನುಗ್ಗೆಯ ಬೀಜವನ್ನ ಅರಣ್ಯ ಇಲಾಖೆ ಕೆಜಿಗೆ ರೂ 15,000 ದಂತೆ ಖರೀದಿಸುತ್ತದೆ. ಕೆಜಿಗೆ 15,000 ರೂ ನಂತೆ 65 ಕೇಜಿ ಬೀಜವನ್ನ ಇಲಾಖೆಗೆ ಮಾರಾಟ ಮಾಡಿದ್ದೇನೆ. ಹೀಗಾಗಿ ನನಗೆ ಮಾರುಕಟ್ಟೆಯ ಸಮಸ್ಯೆಯಿಲ್ಲ ಎಂದು ರೈತ ಗರ್ವದಿಂದ ಹೇಳುತ್ತಾರೆ.
ಉದ್ದು, ಸೋಯಾ, ಹೆಸರು, ಬೆಳೆ ಬೆಳೆಸಿ ಆ ಗ್ರಾಮದ ರೈತ ಪ್ರತಿವರ್ಷ ನಷ್ಟ ಅನುಭವಿಸುತ್ತಿದ್ದ. ಆದ್ರೆ ಕೊಂಚ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿದ ರೈತ (Farmer) ಇದೀಗ ತನ್ನ ಹೊಲದಲ್ಲಿ ನುಗ್ಗೆಕಾಯಿ (Drumstick) ಬೆಳೆದು ಲಾಭದಲ್ಲಿದ್ದಾನೆ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಈ ರೈತ ಅಕ್ಷರಶಃ ಸತ್ಯ ಮಾಡಿದ್ದಾನೆ. ರೈತನ ಬಾಳು ಸಿಹಿಯಾಗಿಸಿದ ನುಗ್ಗೆ… ಎಕರೆಗೆ ಎರಡು ಲಕ್ಷ ಆದಾಯದ ನಿರೀಕ್ಷೆಯಲ್ಲಿ ರೈತ… ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ನುಗ್ಗೆಕಾಯಿಗಿದೆ 50 ರೂಪಾಯಿ ಬೆಲೆ… ನುಗ್ಗೆ ಮಧುಮೇಹ ರೋಗ ನಿಯಂತ್ರಣಕ್ಕೆ ಸಹಕಾರಿ ರೋಗ ನಿರೋಧಕ ಹೆಚ್ಚಿಸುವ ನುಗ್ಗೆ…. ಅತಿ ವೃಷ್ಟಿ ಅನಾವೃಷ್ಟಿಗೆ ಸಡ್ಡು ಹೊಡೆದು ಆದಾಯ ಗಳಿಸುತ್ತಿರುವ ರೈತ…. ಹೌದು ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ರೈತರ ವಿಜಯ್ ಕುಮಾರ್ ತನ್ನ ಒಂದು ಎಕರೆಯಷ್ಟು ಜಮೀನಿನಲ್ಲಿ ಬಾಗಲಕೋಟೆಯ ಭಾಗ್ಯ ತಳಿಯ ನುಗ್ಗೆ ಬೆಳೆದಿದ್ದಾರೆ (Success Story).
ಈ ನುಗ್ಗೆ ಬೆಳೆ ಕಳೆದೆರಡು ವರ್ಷದಿಂದ ಪ್ರತಿ ವರ್ಷವೂ 2 ಲಕ್ಷ ರೂಪಾಯಿ ಆದಾಯ ತಂದು ಕೊಡುವ ಮೂಲಕ ರೈತನ ಬಾಳನ್ನ ಬೆಳಗಿಗಿಸಿದೆ. ರೈತ ವಿಜಯ್ ಕುಮಾರ್ ತನ್ನ ಒಂದು ಎಕರೆ ಜಮೀನಿನಲ್ಲಿ 10 ಅಂತರದಲ್ಲಿ 500 ನುಗ್ಗೆ ಸಸಿ ನೆಟ್ಟು ಹನಿ ನೀರಾವರಿ ಪದ್ಧತ್ತಿ ಮೂಲಕ ಸಾವಯವ ರೀತಿಯಲ್ಲಿ ನುಗ್ಗೆಯನ್ನ ಬೆಳೆಸಿದ್ದಾರೆ. ಇನ್ನು ನುಗ್ಗೆ ನಾಟಿ ಮಾಡಿದ ಆರು ತಿಂಗಳಿನಿಂದಲೇ ಹೂವು ಕಾಯಿ ಬಿಡಲು ಆರಂಭಸಿದ್ದು ಕಳೆದ ವರ್ಷ ಎರಡು ಲಕ್ಷ ಹಾಗೂ ಈ ವರ್ಷವೂ ಎರಡು ಲಕ್ಷ ರೂಪಾಯಿ ಹಣ ಆದಾಯ ಗಳಿಸುವ ನಿರೀಕ್ಷೆಯನ್ನ ರೈತ ಹೊಂದಿದ್ದಾನೆ.
ಈಗ ಮದುವೆಯ ಸೀಜನ್ ಆಗಿರುವುದರಿಂದ ನುಗ್ಗೆಕಾಯಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಮಾರುಕಟ್ಟೆಯಲ್ಲಿ ನುಗ್ಗಿಕಾಯಿಗೆ ಒಂದು ನೂರು ರೂಪಾಯಿ ವರೆಗೆ ಬೆಲೆಯಿದ್ದು ರೈತರಿಂದ 50 ರೂಪಾಯಿ ಕೆಜಿಗೆ ಖರೀದಿಸಿ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ನುಗ್ಗೆ ಕಾಯಿ ಬೆಳೆಸಿದ ರೈತರಿಗೆ ಭಾರಿ ಲಾಭ ತಂದುಕೊಡುತ್ತಿದೆ. ಇನ್ನು ಈ ರೈತ ವಿಜಯ್ ಕುಮಾರ್ ಅವರು ಮಾರುಕಟ್ಟೆಯಲ್ಲಿ ನುಗ್ಗೆಗೆ ಉತ್ತಮವಾದ ಬೆಲೆ ಇದ್ದರೆ ಮಾತ್ರ ಕಾಯಿ ಮಾರಾಟ ಮಾಡುತ್ತಾರೆ. ಇಲ್ಲವೆಂದರೆ ನುಗ್ಗೆಯ ಬೀಜ ಮಾರಾಟ ಮಾಡುತ್ತೇನೆಂದು ಅವರು ಹೇಳುತ್ತಾರೆ.
ರೈತ ವಿಜಯ್ ಕುಮಾರ್ ಅವರು ನಾಟಿ ನುಗ್ಗೆಯನ್ನು ಈಗಾಗಲೇ ಮಾರಾಟ ಮಾಡುತ್ತಿದ್ದಾರೆ. ಕೆಜಿಗೆ 80 ರೂಪಾಯಿ ಬೆಲೆಯಿದ್ದಾಗ ಮಾರಾಟ ಮಾಡಿ ರೂ 50 ಸಾವಿರವರೆಗೆ ಲಾಭ ಮಾಡಿಕೊಂಡಿದ್ದಾರೆ. ಈಗ ಸ್ವಲ್ಪ ಬೆಲೆ ಕಡಿಮೆಯಿರುವ ಕಾರಣ ನುಗ್ಗೆ ಕಾಯಿಯನ್ನ ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದು ನುಗ್ಗೆಯ ಬೀಜವನ್ನ ಮಾರಾಟ ಮಾಡಿ ಅದರಿಂದ ಲಾಭ ಮಾಡಿಕೊಳ್ಳುತ್ತೇನೆಂದು ರೈತ ಹೇಳುತ್ತಿದ್ದಾರೆ.
Drumstick Seeds: ನಾಟಿ ಮಾಡಲು ನುಗ್ಗೆ ಬೀಜಕ್ಕೆ ಇದೆ ಭಾರೀ ಡಿಮ್ಯಾಂಡ್; ಅರಣ್ಯ ಇಲಾಖೆಯಿಂದಲೇ ಇದೆ ಬೆಡಿಕೆ!
ಇನ್ನು ನಾಟಿ ಮಾಡಲು ಬಿತ್ತನೆ ಬೀಜಕ್ಕಾಗಿ ಇವರ ತೋಟದಲ್ಲಿ ಬೆಳೆದ ನುಗ್ಗೆಯ ಬೀಜವನ್ನ ಬೀದರ್ ಅರಣ್ಯ ಇಲಾಖೆಯವರು ಕೆಜಿಗೆ ರೂ 15,000 ದಂತೆ ಖರೀದಿಸುತ್ತಾರೆ. ಹೋದ ವರ್ಷ ಕೆಜಿಗೆ 15,000 ರೂಪಾಯಿಯಂತೆ 65 ಕೇಜಿ ಬೀಜವನ್ನ ಅರಣ್ಯ ಇಲಾಖೆಗೆ ಮಾರಾಟ ಮಾಡಿದ್ದೇನೆ. ಹೀಗಾಗಿ ನನಗೆ ಮಾರುಕಟ್ಟೆಯ ಸಮಸ್ಯೆಯಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇನ್ನು ಒಂದೂವರೆ ವರ್ಷದ ಹಿಂದೆ ನಾಟಿ ಮಾಡಿದ ನುಗ್ಗೆಕಾಯಿ ಈಗ ಎರಡನೇ ಬಾರಿ ಇಳುವರಿ ಕೊಡಲು ಆರಂಭಿಸಿದ್ದು ಜೂನ್ ಮಧ್ಯಾವಧಿಯವರೆಗೆ ನುಗ್ಗೆಕಾಯಿಯ ಋತು ಮುಗಿಯುತ್ತದೆ.
ಅಲ್ಲಿಯವರೆಗೆ ಪೇಟೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ನಿರಂತರವಾಗಿ ನಡೆಯುತ್ತದೆ. ಈ ಬಾರಿ ಬಂಪರ್ ಬೆಳೆಯಾಗಿದ್ದು ರೈತರಿಂದ ಕೆಜಿಗೆ 50 ರೂಪಾಯಿಯಂತೆ ತೆಗೆದುಕೊಳ್ಳಯತ್ತಿದ್ದು ಕೆಲವೊಂದು ಸಲ ನೂರು ರೂಪಾಯಿಯಂತೆಯೂ ಮಾರಾಟವಾಗಬಹುದು, ಕೆಲವೊಮ್ಮೆ ಇನ್ನೂರಕ್ಕೂ ಜಿಗಿಯುತ್ತದೆ. ಇದು ರೈತರಿಗೆ ಹೆಚ್ಚಿನ ಆದಾಯವನ್ನು ಕೂಡಾ ತಂದು ಕೊಡುತ್ತದೆ. ಒಂದೇ ಬೆಳೆಗೆ ಸೀಮಿತವಾಗದೆ ಬೇರೆ ಬೇರೆ ಬೆಳೆಯನ್ನ ಬೆಳೆದರೆ ಲಾಭ ಗಳಿಸಬಹುದೆಂದು ಗ್ರಾಮದ ಯುವಕರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ರೈತ ವಿಜಯ್ ಕುಮಾರ್ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳ್ಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸೋ ತೋಟಗಾರಿಕೆ ಬೆಳೆ ಬೆಳೆಯಲು ಎಲ್ಲ ರೈತರು ಯಶಸ್ಸು ಆಗಬೇಕು.
ವರದಿ: ಸುರೇಶ್ ನಾಯಕ್, ಟಿವಿ9, ಬೀದರ್
Published On - 11:24 am, Wed, 19 April 23